
ಡೆಸ್ಟಿನೇಶನ್ ವೆಡ್ಡಿಂಗ್ (destination wedding) ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗಿದೆ. ಜನರ ಕೈನಲ್ಲಿ ಹಣ ಇರ್ಲಿ ಬಿಡಲಿ, ಸಾಲ ಮಾಡಿಯಾದ್ರೂ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ತಾರೆ. ಮದುವೆ ಮಾಡಿಕೊಳ್ಳೋರು ಅವರಾದ್ಮೇಲೆ ನಮಗೇನು ಚಿಂತೆ ಅಲ್ವಾ? ಮದುವೆಗೆ ಹೋಗಿ, ಭರ್ಜರಿ ಊಟ ಮಾಡಿ ಬಂದ್ರಾಯ್ತು ಅಂತ ನೀವು ಅಂದ್ಕೊಳ್ಬಹುದು. ಆದ್ರೆ ಡೆಸ್ಟಿನೇಶನ್ ವೆಡ್ಡಿಂಗ್ ನಲ್ಲಿ ಪಾಲ್ಗೊಳ್ಳೋಕೆ ಹಣ ಖರ್ಚು ಮಾಡಿ, ವಿಮಾನದಲ್ಲಿ ಪ್ರಯಾಣ ಬೆಳೆಸಿ, ರೂಮ್ ರೆಂಟ್ ಕೂಡ ನೀವೇ ನೀಡೋದಲ್ಲದೆ, ಮದುವೆ ಊಟಕ್ಕೆ ಹಣವನ್ನೂ ನೀವೇ ನೀಡ್ಬೇಕು ಅಂದ್ರೆ ಏನಾಗ್ಬೇಡ? ಸೋಶಿಯಲ್ ಮೀಡಿಯಾದಲ್ಲಿ ಈಗ ಇಂಥ ಮದುವೆಯೊಂದು ಸಖತ್ ಚರ್ಚೆಯಲ್ಲಿದೆ.
ರೆಡಿಟ್ (Reddit) ನಲ್ಲಿ ವ್ಯಕ್ತಿಯೊಬ್ಬರು ಈ ಭಿನ್ನ ಮದುವೆ ಬಗ್ಗೆ ಬರೆದುಕೊಂಡಿದ್ದಾರೆ. ಇಟಲಿ (Italy)ಯ ಪ್ರಸಿದ್ಧ ಮತ್ತು ಐತಿಹಾಸಿಕ ಪ್ರವಾಸಿ ತಾಣವಾದ ಫ್ಲಾರೆನ್ಸ್‌ನಲ್ಲಿ ಮದುವೆ ನಡೆಯಲಿದೆ. ಡೆಸ್ಟಿನೇಶನ್ ವೆಡ್ಡಿಂಗ್ ಗೆ ಆಹ್ವಾನಿತ ಅತಿಥಿ (Guest)ಯೊಬ್ಬ ರೆಡಿಟ್ ಫೋಸ್ಟ್ ಹಂಚಿಕೊಂಡಿದ್ದಾನೆ. ಕೆನಡಾ ವ್ಯಾಂಕೋವರ್ ನಗರದಿಂದ ಈ ಮದುವೆಗೆ ಅನೇಕರು ಬರ್ತಿದ್ದಾರೆ. ಅವರೆಲ್ಲ ವಿಮಾನ ಟಿಕೆಟ್ ಬುಕ್ ಆಗಿದೆ. ವಿಮಾನಕ್ಕೆ ಹಾಗೂ ಹೊಟೇಲ್ ಗೆ ಅತಿಥಿಗಳೇ ಹಣ ಖರ್ಚು ಮಾಡ್ತಿದ್ದಾರೆ. ಆದ್ರೆ ವಧು – ವರರು, ಊಟಕ್ಕೂ ಅತಿಥಿಗಳು ಹಣ ನೀಡ್ಬೇಕು ಎಂದಿದ್ದಾರೆ. ಮದುವೆಯ ವೆಲ್ ಕಂ ಡಿನ್ನರ್ ಗೆ 40 ಯುರೋ ಅಂದ್ರೆ ಸುಮಾರು 3785 ರೂಪಾಯಿ ನೀಡಬೇಕಂತೆ.
ಏನೋ ತಣ್ಣಗೆ ಮುಟ್ತಿದೆ ಅಂತ ಹಾಸಿಗೆಯಿಂದ ಎದ್ದು ನೋಡಿದವಳಿಗೆ ಪ್ರಜ್ಞೆ ತಪ್ಪೊದೊಂದು ಬಾಕಿ:
ರೆಡಿಟ್ ನಲ್ಲಿ ಪೋಸ್ಟ್ ಹಾಕಿರುವ ವ್ಯಕ್ತಿ, ಹಲೋ, ನಾನು ಆಗಸ್ಟ್ ನಲ್ಲಿ ಇಟಲಿಯ ಫ್ಲಾರೆನ್ಸ್ ನಲ್ಲಿ ನಡೆಯುವ ಡೆಸ್ಟಿನೇಶನ್ ವೆಡ್ಡಿಂಗ್ ನಲ್ಲಿ ಪಾಲ್ಗೊಳ್ಳಲಿದ್ದೇನೆ. ಈ ಮದುವೆಗೆ ಬಹುತೇಕ ಗೆಸ್ಟ್ ಕೆನಡಾ ವ್ಯಾಂಕೋವರ್ ನಿಂದ ಬರ್ತಿದ್ದಾರೆ. ಅಲ್ಲಿಂದ ಇಲ್ಲಿಗೆ ಬರಲು ವಿಮಾನದ ಖರ್ಚು ಹೆಚ್ಚು. ಅಷ್ಟಾದ್ರೂ ಗೆಸ್ಟ್ ಮದುವೆಗೆ ಬರಲು ಸಿದ್ಧರಾಗಿದ್ದಾರೆ. ಆದ್ರೆ ಕೆಲ ದಿನಗಳ ಹಿಂದೆ ಮದುವೆ ಕಾರ್ಡ್ ಬಂದಿದೆ. ಅದರಲ್ಲಿ ವೆಲ್ ಕಂ ಡಿನ್ನರ್ ಗೆ ಪ್ರತಿ ವ್ಯಕ್ತಿ 40 ಯುರೋ ನೀಡಬೇಕೆಂದು ಬರೆಯಲಾಗಿದೆ ಎಂದು ಪೋಸ್ಟ್ ಹಾಕಿದ್ದಾರೆ.
ಅಷ್ಟೇ ಅಲ್ಲ, ಅತಿಥಿಗಳು ಈಗಾಗಲೇ ಸಾಕಷ್ಟು ಖರ್ಚು ಮಾಡಿರುವಾಗ ಊಟಕ್ಕೆ ಮತ್ತೆ ಹಣ ಪಾವತಿ ಮಾಡ್ಬೇಕು ಎಂಬ ವಿಷ್ಯ ಕೇಳಿ ನನಗೆ ಆಘಾತವಾಯ್ತು . ಇದು ಸಾಮಾನ್ಯವಾ? ನಾನು ಈವರೆಗೆ ಡೆಸ್ಟಿನೇಷನ್ ವೆಡ್ಡಿಂಗ್ ಗೆ ಹೋಗಿಲ್ಲ. ನಗದನ್ನು ಗಿಫ್ಟ್ ಮಾಡ್ಬೇಕು ಅಂತ ನಾನು ಅಂದುಕೊಂಡಿದ್ದೆ. ಆದ್ರೆ ಈಗ ಗಿಫ್ಟ್ ಆಲೋಚನೆ ಬಿಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ನಿಮಗೆ ಏನು ಅನ್ನಿಸುತ್ತದೆ ಎಂದು ಆತ ಬಳಕೆದಾರರ ಅಭಿಪ್ರಾಯ ಕೇಳಿದ್ದಾನೆ.
ಎರಡು ಮಕ್ಕಳಾದ್ಮೇಲೆ ಅಕ್ಕನ ಗಂಡನ ಮೇಲೆ ಪ್ರೀತಿ ! ಎಲ್ಲ ಬಿಟ್ಟು ಭಾವನ ಹಿಂದೆ ಹೋದ ಮಹಿಳೆ
ಈ ಪೋಸ್ಟ್ ವೈರಲ್ ಆಗಿದೆ. ಬಹುತೇಕ ಬಳಕೆದಾರರು ಇದನ್ನು ಖಂಡಿಸಿದ್ದಾರೆ. ಅತಿಥಿಗಳಿಂದ ಊಟದ ಖರ್ಚು ಕೇಳೋದು ಅನುಚಿತ ಎಂದು ಅನೇಕರು ಹೇಳಿದ್ದಾರೆ. ಮದುವೆಯಲ್ಲಿ ಅತಿಥಿಗಳಿಂದ ಹಣ ಕೇಳುವುದು ಸಂಪೂರ್ಣ ವಿಚಿತ್ರವಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಹೊರಗಿನಿಂದ ಬರುವ ಅತಿಥಿಗಳಿಂದ ಊಟಕ್ಕೆ ಹಣ ಪಡೆಯುವುದು ಎಷ್ಟು ಸರಿ? ಇಂಥವರಿಗೆ ಉಡುಗೊರೆ ನೀಡುವ ಅಗತ್ಯವಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ನಾಚಿಕೆಗೇಡಿ ಕೆಲಸ. ಅತಿಥಿಗಳಿಂದ ಹಣ ಕೇಳುವವರಿಗೆ ಡೆಸ್ಟಿನೇಶನ್ ವೆಡ್ಡಿಂಗ್ ಏಕೆ ಅವಶ್ಯಕತೆ ಇತ್ತು? ಅವರು ಸರಳವಾಗಿ ಮದುವೆ ಆಗಬಹುದಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ