ಕೊರೋನಾ ತಾಂಡವ: 5000 ಗಡಿ ದಾಟಿತು ಸಾವಿನ ಸಂಖ್ಯೆ!

Published : Mar 14, 2020, 09:01 AM IST
ಕೊರೋನಾ ತಾಂಡವ: 5000 ಗಡಿ ದಾಟಿತು ಸಾವಿನ ಸಂಖ್ಯೆ!

ಸಾರಾಂಶ

5000 ಗಡಿ ದಾಟಿತು ಸಾವಿನ ಸಂಖ್ಯೆ| ವಿಶ್ವದ 130 ದೇಶಗಳಿಗೆ ಹಬ್ಬಿರುವ ಕೊರೋನಾ ಸೋಂಕು| ಮೊದಲಿಗೆ ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಅಚ್ಚರಿಯ ರೀತಿಯಲ್ಲಿ ಸಮಸ್ಯೆ ನಿಗ್ರಹ

ನವದೆಹಲಿ[ಮಾ.14]: 4 ತಿಂಗಳ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡು, ಇದೀಗ ವಿಶ್ವದ 130 ದೇಶಗಳಿಗೆ ಹಬ್ಬಿರುವ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ 5000ದ ಗಡಿದಾಟಿದೆ. ಮೊದಲಿಗೆ ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಅಚ್ಚರಿಯ ರೀತಿಯಲ್ಲಿ ಸಮಸ್ಯೆಯನ್ನು ನಿಗ್ರಹಿಸಲಾಗಿದ್ದು, ಗುರುವಾರ ಕೇವಲ 8 ಹೊಸ ಪ್ರಕರಣ ಬೆಳಕಿಗೆ ಬಂದಿದ್ದರೆ, ಕೇವಲ 7 ಜನ ಸಾವನ್ನಪ್ಪಿದ್ದಾರೆ.

ಆದರೆ ಮತ್ತೊಂದೆಡೆ ಇರಾನ್‌, ಇಟಲಿ ಮತ್ತು ಸ್ಪೇನ್‌ನಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಹಬ್ಬತೊಡಗಿದೆ. ಇರಾನ್‌ನಲ್ಲಿ ಶುಕ್ರವಾರ ಒಂದೇ ದಿನ 85 ಜನ ಸಾವನ್ನಪ್ಪಿದ್ದಾರೆ, ಸ್ಪೇನ್‌ನಲ್ಲೂ ಶುಕ್ರವಾರ ಒಂದೇ ದಿನ 36 ಜನ ಸಾವನ್ನಪ್ಪಿದ್ದಾರೆ.

1.40 ಲಕ್ಷ: ವಿಶ್ವದಾದ್ಯಂತ ಸೋಂಕಿಗೆ ತುತ್ತಾದವರು

5122: ವಿಶ್ವದಾದ್ಯಂತ ಸಾವನ್ನಪ್ಪಿದವರ ಸಂಖ್ಯೆ

130: ಕೊರೋನಾ ಸೋಂಕು ಹಬ್ಬಿದ ದೇಶಗಳ ಸಂಖ್ಯೆ

ಟಾಪ್‌ 5 ಅತಿ ಹೆಚ್ಚು ಸಾವಿನ ಪ್ರಮಾಣ

ಚೀನಾ: 3177

ಇಟಲಿ: 1016

ಇರಾನ್‌: 514

ಸ್ಪೇನ್‌: 122

ದ.ಕೊರಿಯಾ: 71

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ