
ನ್ಯೂಯಾರ್ಕ್[ಮಾ.14]: ವಿಶ್ವಾದ್ಯಂತ ಕೊರೋನಾ ವೈರಸ್ ಹೆಸರು ಕೇಳಿದರೆ ಭೀತಿ ಪಡುವಂಥ ಸಂದರ್ಭದಲ್ಲೇ ಇಲ್ಲೊಂದು ಕಂಪನಿ ಕೊರೋನಾ ಸೋಂಕು ತಗುಲಿಸಿಕೊಂಡರೆ ಬರೋಬ್ಬರಿ 3.40 ಲಕ್ಷ ರು. ನೀಡುವುದಾಗಿ ಘೋಷಣೆ ಮಾಡಿದೆ.
ಹೌದು, ಕೊರೋನಾ ವ್ಯಾಧಿಯ ಔಷಧಿ ಪತ್ತೆಗಾಗಿ ಸಂಶೋಧನೆ ನಡೆಸುತ್ತಿರುವ ಲಂಡನ್ ಮೂಲದ ಕ್ವೀನ್ ಮೇರಿ ಬಯೋ ಎಂಟರ್‌ಪ್ರೈಸಸ್ ಈ ಮಹತ್ವದ ಕಾರ್ಯಕ್ಕಾಗಿ 24 ಮಂದಿ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಿದೆ. ಹಲವು ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುವ 24 ಜನಕ್ಕೆ ಕೊರೋನಾ ಸೋಂಕಿನ ಕಡಿಮೆ ತೀವ್ರತೆಯ ವೈರಸ್ ಅನ್ನು ಇಂಜೆಕ್ಟ್ ಮಾಡಲಾಗುತ್ತದೆ.
ಆ ನಂತರ, ಅವರನ್ನು 2 ವಾರಗಳ ಕಾಲ ಪ್ರತ್ಯೇಕ ಸ್ಥಳಗಳಲ್ಲಿಟ್ಟು ಚಿಕಿತ್ಸೆ ಮುಂದುವರಿಸುತ್ತದೆ. ಅಲ್ಲದೆ, ಇವರು ಪ್ರತೀ ನಿತ್ಯ ವೈದ್ಯರು ಸೂಚಿಸುವ ಆಹಾರ ಪದ್ಧತಿಗಳನ್ನು, ಇತರರ ಜೊತೆಗಿನ ಸಂಪರ್ಕದಿಂದ ದೂರವಿರಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ