Omicron Threat: ಅಮೆರಿಕದಲ್ಲಿ 10 ಲಕ್ಷ ಕೇಸ್‌ ಒಂದೇ ದಿನ ದಾಖಲು: ವೈರಸ್‌ ಸ್ಫೋಟಕ್ಕೆ ಬೆಚ್ಚಿಬಿದ್ದ ಜನತೆ

By Kannadaprabha News  |  First Published Jan 5, 2022, 5:22 AM IST

*   ಒಂದೇ ದಿನ 1668 ಜನರ ಸಾವು
*   ಹೆಚ್ಚು ಸೋಂಕು, ಸಾವು ಕಂಡ ದೇಶದಲ್ಲಿ ಮತ್ತೊಂದು ಕರಾಳ ದಾಖಲು
*   8.48 ಲಕ್ಷ ಸೋಂಕಿಗೆ ಬಲಿಯಾದ ಅಮೆರಿಕನ್ನರು
 


ವಾಷಿಂಗ್ಟನ್‌(ಜ.05):  ಈಗಾಗಲೇ ಕೋವಿಡ್‌ನ ಡೆಲ್ಟಾರೂಪಾಂತರಿ ಅಟ್ಟಹಾಸದಿಂದ ನಲುಗಿ ಹೋಗಿರುವ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕ(America), ಇದೀಗ ಒಮಿಕ್ರೋನ್‌ನ(Omicron) ಮಹಾ ಸ್ಫೋಟಕ್ಕೆ ಬೆಚ್ಚಿಬಿದ್ದಿದೆ. ಸೋಮವಾರ ಒಂದೇ ದಿನ ಅಮೆರಿಕದಲ್ಲಿ 10.82 ಲಕ್ಷ ಹೊಸ ಸೋಂಕಿತರು ಪತ್ತೆಯಾಗಿದ್ದು, 1668 ಜನರು ಸಾವನ್ನಪ್ಪಿದ್ದಾರೆ.

ಸೊಂಕಿತರ ಈ ಪ್ರಮಾಣ ಕೋವಿಡ್‌ 2ನೇ ಅಲೆ ವೇಳೆ ಭಾರತದಲ್ಲಿ(India) ದಾಖಲಾಗಿದ್ದ ವಿಶ್ವದಾಖಲೆಯ 4.14 ಲಕ್ಷ ಕೇಸ್‌ಗಿಂತ ಡಬ್ಬಲ್‌ ಮತ್ತು ಕೇವಲ 5 ದಿನಗಳ ಹಿಂದೆ ಅಮೆರಿಕದಲ್ಲೇ ದಾಖಲಾದ 5.90 ಲಕ್ಷ ಕೇಸಿನ ಬಹುತೇಕ ಡಬಲ್‌ ಎಂಬುದು ಆತಂಕಕಾರಿ ಸಂಗತಿ. 2021ರ ಜ.21ರಂದು 4413 ಸಾವು ದಾಖಲಾಗಿದ್ದು ಇದುವರೆಗಿನ ದೈನಂದಿನ ಗರಿಷ್ಠವಾಗಿದೆ. ಇದಕ್ಕೆ ಹೋಲಿಸಿದರೆ ಈಗ ಸಾವಿನ ಸಂಖ್ಯೆ ಕಡಿಮೆ ಎಂಬುದು ಗಮನಿಸಬೇಕಾದ ಸಂಗತಿ.

Latest Videos

undefined

PM Modi vs Pakistan 2024ರ ಚುನಾವಣೆಯಲ್ಲಿ ಮೋದಿ ಸೋಲಬೇಕು, ಭಾರತ ಕುಟುಕಿದ ಬಾಲಿವುಡ್ ಸಾಕಿ ಸಲಹಿದ ಪಾಕ್ ನಟ

ಇನ್ನೂ ಹೆಚ್ಚಳ ಭೀತಿ:

ಜಾನ್‌ಹಾಪ್‌ಕಿನ್ಸ್‌ ವಿವಿ ಬಿಡುಗಡೆ ಮಾಡಿರುವ ಕೋವಿಡ್‌ ಅಂಕಿ ಅಂಶಗಳ ಅನ್ವಯ ಸೋಮವಾರ ಅಮೆರಿಕದಲ್ಲಿ 10,82,549 ಲಕ್ಷ ಜನರಿಗೆ ಸೋಂಕು ತಗುಲಿದ್ದು, 1668 ಜನರು ಸಾವನ್ನಪ್ಪಿದ್ದಾರೆ. ಆದರೆ ಬಹುತೇಕ ಅಮೆರಿಕನ್ನರು ಇನ್ನೂ ಮನೆಯಲ್ಲೇ ಸೋಂಕು ಪರೀಕ್ಷೆಗೆ ಒಳಗಾಗುತ್ತಿದ್ದು, ಅದರ ವರದಿಗಳು ಇನ್ನೂ ಸರ್ಕಾರಿ ಅಂಕಿ ಅಂಶಗಳನ್ನು ಸೇರುತ್ತಿಲ್ಲವಾದ ಕಾರಣ, ವಾಸ್ತವವಾಗಿ ಸೋಂಕಿಗೆ ತುತ್ತಾಗುತ್ತಿರುವ ಪ್ರಮಾಣ ಇನ್ನೂ ಹೆಚ್ಚಿರಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಡೆಲ್ಟಾಹಾವಳಿಗೆ(Delta) ತುತ್ತಾಗಿದ್ದ ಅಮೆರಿಕವನ್ನು ಇದೀಗ ತೀವ್ರ ಸೋಂಕುಕಾರಿ ಎಂಬ ಕುಖ್ಯಾತಿ ಹೊಂದಿರುವ ಒಮಿಕ್ರೋನ್‌ ಆವರಿಸಿಕೊಂಡಿರುವುದೇ ಈ ಪ್ರಮಾಣದಲ್ಲಿ ಜನರು ಸೋಂಕಿಗೆ ತುತ್ತಾಗಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.

ಅಂದಾಜು 33 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕದಲ್ಲಿ ಇದುವರೆಗೂ 5.7 ಕೋಟಿ ಜನರಿಗೆ ಸೋಂಕು ಬಂದಿದ್ದು, 8.48 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇನ್ನೂ 1.40 ಕೋಟಿ ಸಕ್ರಿಯ ಸೋಂಕಿನ ಪ್ರಕರಣಗಳಿವೆ. ಈ ಪೈಕಿ ಕನಿಷ್ಠ 20000 ಜನರ ಆರೋಗ್ಯ ಗಂಭೀರವಾಗಿದೆ. ಇದುವರೆಗೂ 50 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ 20.50 ಕೋಟಿ ಅಂದರೆ ದೇಶದ ಒಟ್ಟು ಜನಸಂಖ್ಯೆಯ ಶೇ.62.70ರಷ್ಟು ಜನರು ಎರಡೂ ಡೋಸ್‌ ಲಸಿಕೆ(Vaccine) ಪಡೆದುಕೊಂಡಿದ್ದಾರೆ.

ಫ್ರಾನ್ಸ್ ನಲ್ಲಿ ಪತ್ತೆಯಾಗಿದೆ IHU, ಒಮಿಕ್ರಾನ್ ಗಿಂತ ಡೇಂಜರ್!

ಪ್ಯಾರಿಸ್: ಭಾರತದಲ್ಲಿ ಒಮಿಕ್ರಾನ್ (Omicron) ಹಾಗೂ ಕೋವಿಡ್-19 (Covid-19) ಪ್ರಕರಣಗಳ ಸಂಖ್ಯೆಗಳಲ್ಲಿ ವ್ಯಾಪಕ ಏರಿಕೆ ಕಾಣುತ್ತಿರುವ ಹೊತ್ತಿಗಾಗಲೇ ಜಗತ್ತಿನೆಲ್ಲದೆ ಕೋವಿಡ್-19ನ ಹೊಸ ಹೊಸ ರೂಪಾಂತರಗಳು ಪತ್ತೆಯಾಗುತ್ತಿವೆ. ಈವರೆಗೂ ಒಮಿಕ್ರಾನ್ ಹೊರತಾಗಿ ಡೆಲ್ಮಿಕ್ರಾನ್ (Delmicron) ಹಾಗೂ ಫ್ಲೊರೊನಾ (Florona) ಹೆಸರುಗಳನ್ನು ಮಾತ್ರವೇ ನಮ್ಮ ಜನರು ಕೇಳಿದ್ದರು. ಆದರೆ, ಫ್ರಾನ್ಸ್ (France) ದೇಶವು ನಮ್ಮಲ್ಲಿ ಕೋವಿಡ್-19ನ ಹೊಸ ರೂಪಾಂತರ ಪತ್ತೆಯಾಗಿದೆ ಎಂದು ಘೋಷಣೆ ಮಾಡಿದ್ದು ಇದಕ್ಕೆ ಐಎಚ್ ಯು (IHU) ಎಂದು ಹೆಸರನ್ನಿಟ್ಟಿದೆ. ವಿಜ್ಞಾನಿಗಳು ಕ್ಯಾಮರೂನ್ (Cameroon) ಪ್ರಯಾಣ ಮಾಡಿದ್ದ ವ್ಯಕ್ತಿಯೊಂದಿಗೆ ಐಎಚ್ ಯು ವೈರಸ್ ಅನ್ನು ಲಿಂಕ್ ಮಾಡಿದ್ದು, ಡಿಸೆಂಬರ್ 10 ರಂದು ಫ್ರಾನ್ಸ್ ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಎಂದಿದ್ದಾರೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ಅನ್ನು ತನಿಖೆಯ ಅಡಿಯಲ್ಲಿರುವ ರೂಪಾಂತರ ಎಂದು ವರ್ಗೀಕರಣ ಮಾಡಿಲ್ಲದ ಕಾರಣ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡುವುದು ತಡವಾಗಿದೆ. ಹೊಸ ರೂಪಾಂತರದಲ್ಲಿ ಕನಿಷ್ಠ 12 ಕೇಸ್ ಗಳು ಫ್ರಾನ್ಸ್ ನ ಮಾರ್ಸಿಲ್ಲೆಸ್ ಬಳಿ ವರದಿಯಾಗಿದೆ.

List Of Dry Days: ನೋಡ್ಕೊಂಡ್‌ ಪಾರ್ಟಿ ಮಾಡಿ... 2022ರಲ್ಲಿ ನಿಮಗೆ ಈ ದಿನಗಳಲ್ಲಿ ಮದ್ಯ ಸಿಗದು

ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೋವಿಡ್-19 ಸೋಂಕಿನ ಉಲ್ಬಣಕ್ಕೆ ಕಾರಣವಾಗಿರುವ ಒಮಿಕ್ರಾನ್ ಹೆಸರಿನಲ್ಲಿ ಕರೆಯಲ್ಪಡುವ ರೂಪಾಂತರಿ ವೈರಸ್ ನೊಂದಿಗೆ ಹೋರಾಟ ಮಾಡುತ್ತಿದೆ. ಇದರ ನಡುವೆಯೇ ಫ್ರಾನ್ಸ್ ವಿಜ್ಞಾನಿಗಳು ಒಮಿಕ್ರಾನ್ ಗಿಂತ ವೇಗವಾಗಿ ಹರಡಬಲ್ಲ, ಹೆಚ್ಚು ರೂಪಾಂತರವಾದ ತಳಿಯನ್ನು ಗುರುತು ಮಾಡಿದ್ದಾರೆ. ಐಎಚ್ ಯು (IHU) ಎಂದು ಹೆಸರಿಸಲಾದ, B.1.640.2 ರೂಪಾಂತರವನ್ನು ಇನ್‌ಸ್ಟಿಟ್ಯೂಟ್ IHU ಮೆಡಿಟರೇನಿ ಇನ್‌ಫೆಕ್ಷನ್‌ನಲ್ಲಿನ ಶಿಕ್ಷಣ ತಜ್ಞರು ಕಂಡುಹಿಡಿದಿದ್ದಾರೆ. ಐಎಚ್ ಯು ವೈರಸ್ 46 ರೂಪಾಂತರಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದು ಇದು ಒಮಿಕ್ರಾನ್ ಗಿಂತಲೂ ಅಧಿಕವಾಗಿದೆ. ಅಲ್ಲದೆ, ಈ ವೈರಸ್ ಲಸಿಕೆಗಳು ಮತ್ತು ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ನಿರೋಧಕವಾಗಿಸುತ್ತದೆ.  ಹೊಸ ರೂಪಾಂತರದ ಕನಿಷ್ಠ 12 ಪ್ರಕರಣಗಳು ಮಾರ್ಸಿಲ್ಲೆಸ್ ಬಳಿ ವರದಿಯಾಗಿದ್ದು, ಆಫ್ರಿಕನ್ ದೇಶ ಕ್ಯಾಮರೂನ್‌ಗೆ ನಡೆಸಿದ ಪ್ರಯಾಣದೊಂದಿಗೆ ಇದನ್ನು ಲಿಂಕ್ ಮಾಡಲಾಗಿದೆ.

ಪ್ರಸ್ತುತ ಇರುವ ನಿಟ್ಟಿನಲ್ಲಿ ಒಮಿಕ್ರಾನ್ ರೂಪಾಂತರವು ಹೆಚ್ಚಿನ ಪ್ರಬಲ ತಳಿಯಾಗಿದ್ದು, ಐಎಚ್ ಯು ರೂಪಾಂತರ ವೈರಸ್ ನ ಎಚ್ಚರಿಕೆಯೂ ವೇಗವಾಗಿ ಏರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  B.1.640.2 ಅನ್ನು ಈವರೆಗೂ ಇತರ ದೇಶಗಳಲ್ಲಿ ಗುರುತಿಸಲಾಗಿಲ್ಲ ಅಥವಾ ವಿಶ್ವ ಆರೋಗ್ಯ ಸಂಸ್ಥೆ (WHO) ತನಿಖೆಯ ಅಡಿಯಲ್ಲಿರುವ ಒಂದು ರೂಪಾಂತರ ಎಂದು ಈವರೆಗೂ ವರ್ಗೀಕರಣ ಮಾಡಿಲ್ಲ.
 

click me!