ಮ್ಯೂನಿಚ್(ಮೇ.17): ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಪರೀಕ್ಷಾ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಇನ್ನು RT-PCR, ರ್ಯಾಪಿಡಿ ಟೆಸ್ಟ್ ಕಿಟ್ ಸೇರಿದಂತೆ ಕೆಲ ಪರೀಕ್ಷಾ ವಿಧಾನಗಳ ಕೊರೋನಾ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಎಕ್ಸ್ ರೇ, ಸಿಟಿ ಸ್ಕ್ಯಾನ್ ಕೂಡ ಬಳಸಲಾಗುತ್ತೆ. ಕೊರೋನಾ ಪತ್ತೆ ನಿಖರವಾಗಿ ತಿಳಿಯಲು RT-PCR ಪರೀಕ್ಷೆ ಮುಖ್ಯವಾಗಿದೆ. ಆದರೆ ಈ ಎಲ್ಲಾ ಪರೀಕ್ಷೆಗಳು ನಿಗದಿತ ಸಮಯ ತೆಗೆದುಕೊಳ್ಳುತ್ತದೆ. ಒಂದು ದಿನದಿಂದ ಗರಿಷ್ಠ 3 ದಿನದವರೆಗೂ ಫಲಿತಾಂಶ ಬರಲು ಕಾಯಬೇಕು. ಆದರೆ ಈ ಸಮಸ್ಯೆಗಳಿಗೆ ಮುಕ್ತಿ ನೀಡಲು ಇದೀಗ ಕಣ್ಣಿನ ಸ್ಕ್ಯಾನ್ ಮೂಲಕ ಕೊರೋನಾ ಪತ್ತೆ ಹಚ್ಚುವ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.
ಹೊಸ ರೂಪಾಂತರಿ ಪತ್ತೆಯಾದ ದೇಶದ ಜೊತೆ ವೈರಸ್ ಹೆಸರು ಜೋಡಿಸುವುದಿಲ್ಲ; WHO ಸ್ಪಷ್ಟನೆ!.
ಜರ್ಮನಿಯ ಮ್ಯೂನಿಚ್ ಮೂಲದ ಸೆಮಿಕ್ ಆರ್‌ಎಫ್ ಕಂಪನಿ ಈ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ವಿಶೇಷತೆ ಅಂದರೆ ಮೊಬೈಲ್‌ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮ್ಮ ಕಣ್ಣನ್ನು ಈ ಆ್ಯಪ್ ಮೂಲಕ ಸ್ಕಾನ್ ಮಾಡಿದರೆ ಪರೀಕ್ಷೆ ಮುಗಿಯಿತು. 3 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೆಸೇಜ್ ಒಂದು ಬರಲಿದೆ. ಈ ಫಲಿತಾಂಶದಲ್ಲಿ ಕೊರೋನಾ ಪಾಸಿಟೀವ್ ಅಥವಾ ನೆಗಟೀವ್ ತಿಳಿಸಲಿದೆ. ಜೊತೆಗೆ ಬಿಪಿ, ಪಲ್ಸ್ ರೇಟ್, ಟೆಂಪರೇಚರ್ ಸೇರಿದಂತೆ ಪ್ರಮುಖ ಮಾಹಿತಿಗಳು ಲಭ್ಯವಾಗಲಿದೆ.
ಕೊರೋನಾ ಕಾಟ: ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ RAT ಟೆಸ್ಟ್
ಮ್ಯೂನಿಚ್ ಮೂಲದ ಕಂಪನಿ ಈ ಆ್ಯಪನ್ನು ಅಮೆರಿಕ ಸಹದ್ಯೋಗಿಗಳಿ ಜೊತೆ ಸೇರಿ ಅಭಿವೃದ್ಧಿಪಡಿಸಿದೆ. ಶೇಕಡಾ 95 ರಷ್ಟು ನಿಖರವಾಗಿ ಫಲಿತಾಂಶ ನೀಡಲಿದೆ. ಸದ್ಯ ಈ ಆ್ಯಪ್‌ಗೆ ಅನುಮೋದನೆ ಸಿಗಬೇಕಿದೆ. ಮುಂದಿನ ತಿಂಗಳ ಅಂತ್ಯಕ್ಕೆ ನೂತನ ಆ್ಯಪ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಸೆಮಿಕ್ ಆರ್‌ಎಫ್ ಕಂಪನಿ ವ್ಯವಸ್ಥಾಪ ನಿರ್ದೇಶಕ ವೋಲ್ಪ್‌ಗ್ಯಾಂಗ್ ಗ್ರುಬರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ