ಮೆಕ್ಸಿಕನ್ ಸುಂದರಿ ಆಂಡ್ರಿಯಾ ಮುಡಿಗೆ 'ಭುವನ ಸುಂದರಿ' ಕಿರೀಟ!

Published : May 17, 2021, 05:50 PM IST
ಮೆಕ್ಸಿಕನ್ ಸುಂದರಿ ಆಂಡ್ರಿಯಾ ಮುಡಿಗೆ 'ಭುವನ ಸುಂದರಿ' ಕಿರೀಟ!

ಸಾರಾಂಶ

* ಮೆಕ್ಸಿಕನ್ ಮೂಲದ ಆಂಡ್ರಿಯಾ ಪಾಲಾಯ್ತು Miss Universe 2021 ಕಿರೀಟ  * 69ನೇ ಭುವನ ಸುಂದರಿ ಪಟ್ಟ ಗಳಿಸಿದ ಆಂಡ್ರಿಯಾ * ಕೊರೊನಾ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮನಗೆದ್ದ ಆಂಡ್ರಿಯಾ

ಫ್ಲೋರಿಡಾ(ಮೇ.17): ಮೆಕ್ಸಿಕೋದ ಸುಂದರಿ ಆಂಡ್ರಿಯಾ ಮೆಜಾ 69ನೇ ಭುವನ ಸುಂದರಿ​ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಫ್ಯಾಷನ್​ ಲೋಕದಲ್ಲಿ ಸಾಧನೆ ಮಾಡಿರುವ ಆಂಡ್ರಿಯಾ ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್.​ Miss Universe 2021 ಕಿರೀಟ ಗೆಲ್ಲುವ ಮೂಲಕ, ಈ ಕೀರ್ತಿಗೆ ಪಾತ್ರರಾದ ಮೆಕ್ಸಿಕೋದ ಮೂರನೇ ಸುಂದರಿಯಾಗಿ ಆಂಡ್ರಿಯಾ ಹೊರ ಹೊಮ್ಮಿದ್ದಾರೆ.

ಮೇ 16ರಂದು ಫ್ಲೋರಿಡಾದಲ್ಲಿ ನಡೆದ ಮಿಸ್​ ಯೂನಿವರ್ಸ್​ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಆಂಡ್ರಿಯಾ ಗೆಲುವಿನ ನಗೆ ಬೀರಿದ್ದು, ಬ್ರೆಜಿಲ್​ನ ಜೂಲಿಯಾ ಗಾಮಾ ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ಪೆರುವಿನ ಜೆನಿಕ್​ ಮಸೆಟಾ ಅವರು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು. ಭಾರತದಿಂದ ಸ್ಪರ್ಧಿಸಿದ್ದ ಅಡ್ಲಿನ್​ ಕಾಸ್ಟಿಲಿನೋ ಮೂರನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆಂಡ್ರಿಯಾ ಮೆಜಾಗೆ ಕಳೆದ ಬಾರಿಯ 'ಮಿಸ್ ಯೂನಿವರ್ಸ್' ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ ಕಿರೀಟ ತೊಡಿಸಿದ್ದಾರೆ.

ಮಿಸ್​ ಯೂನಿವರ್ಸ್​ ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಆಂಡ್ರಿಯಾ ಮೆಜಾಗೆ ಕೊರೋನಾ ಸಂಬಂಧಿತ ಪ್ರಶ್ನೆ ಕೇಳಲಾಯಿತು. ‘ಒಂದು ವೇಳೆ ನೀವು ನಿಮ್ಮ ದೇಶದ ಲೀಡರ್​ ಆಗಿದ್ದರೆ, ಈ ಕೊರೋನಾ​ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದಿರಿ?’ ಎಂದು ತೀರ್ಪುಗಾರರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ದಿಟ್ಟತನದಿಂದ ಉತ್ತರಿಸಿದ ಆಂಡ್ರಿಯಾ ಕೊವಿಡ್​ ನಿಯಂತ್ರಿಸಲು ನಿರ್ದಿಷ್ಟವಾದ ಕ್ರಮ ಯಾವುದೂ ಇಲ್ಲ, ಹೀಗಾಗಿ ಪರಿಸ್ಥಿತಿ ಕೈ ಮೀರುವ ಮುನ್ನ ನಾನು ಲಾಕ್​ಡೌನ್​ ಮಾಡಿಸುತ್ತಿದ್ದೆ. ಯಾಕೆಂದರೆ ಈಗಾಗಲೇ ನಾವು ಅನೇಕ ಜೀವ ಕಳೆದುಕೊಂಡಿದ್ದೇವೆ. ಅದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ಜನರ ಕಾಳಜಿಯನ್ನು ನಾವು ಮಾಡಬೇಕು. ಪ್ರಾರಂಭದಲ್ಲಿಯೇ ಲಾಕ್​ಡೌನ್​ ಮಾಡುವ ಮೂಲಕ ನಾನು ಜನರ ರಕ್ಷಣೆ ಮಾಡುತ್ತಿದ್ದೆ ಎಂದು ಉತ್ತರಿಸಿದ ಆಂಡ್ರಿಯಾ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೂಫ್ ಕ್ಲೋಸ್ ಮಾಡಿ ಇಲ್ಲದಿದ್ದರೆ ಸಾವು ಖಚಿತ, ಮೋದಿ ಆಸ್ಟ್ರೇಲಿಯಾ ಕಾರ್ಯಕ್ರಮಕ್ಕೂ ಮುನ್ನ ಹತ್ಯೆ ಬೆದರಿಕೆ
ಜಸ್ಟ್ 14 ವರ್ಷಕ್ಕೆ ಬುರ್ಜ್ ಖಲೀಫಾದಲ್ಲಿ AI ಕಚೇರಿ ಸ್ಥಾಪನೆ! ಈ ಜೈನಂ ಜೈನ್ ಯಾರು?