ಸಲಿಂಗಿ ಜೋಡಿಯಿಂದ ದತ್ತು ಪುತ್ರರಿಬ್ಬರ ಮೇಲೆ ಬಲತ್ಕಾರ

Published : Dec 24, 2024, 11:08 AM ISTUpdated : Dec 24, 2024, 11:15 AM IST
ಸಲಿಂಗಿ ಜೋಡಿಯಿಂದ ದತ್ತು ಪುತ್ರರಿಬ್ಬರ ಮೇಲೆ ಬಲತ್ಕಾರ

ಸಾರಾಂಶ

ದತ್ತು ಪಡೆದ ಪುತ್ರರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸಲಿಂಗಿ ದಂಪತಿಗೆ 100 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ದಂಪತಿಗಳು ತಮ್ಮ ಕೃತ್ಯವನ್ನು ವಿಡಿಯೋ ಮಾಡಿದ್ದಲ್ಲದೆ, ಇತರರಿಗೂ ಬಾಲಕರಿಗೆ ಕಿರುಕುಳ ನೀಡಲು ಪ್ರೋತ್ಸಾಹಿಸಿದ್ದರು.

ತಮ್ಮ ದತ್ತು ಪಡೆದ ಪುತ್ರರ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೇ ದಂಪತಿ (ಸಲಿಂಗಿ ಜೋಡಿ)ಗಳ  ವಿರುದ್ಧ ಆರೋಪ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಯಾವುದೇ ಪೆರೋಲ್ ಇಲ್ಲದ 100 ವರ್ಷಗಳ ಗಲ್ಲು ಶಿಕ್ಷೆ ಘೋಷಿಸಿದೆ. ಅಮೆರಿಕಾದ ಜಾರ್ಜಿಯಾ ಮೂಲದ ಸಲಿಂಗಿ ಜೋಡಿ ವಿಲಿಯಂ ಹಾಗೂ ಝಛರಿ ಝುಲಾಕ್ ಎಂಬುವವರೇ ಶಿಕ್ಷೆಗೊಳಗಾದ ಸಲಿಂಗಿ ದಂಪತಿ.  ಇವರಿಬ್ಬರು ತಾವು ದತ್ತು ಪಡೆದ ಪುತ್ರರಿಬ್ಬರ ಮೇಲೆ ಅತ್ಯಾಚಾರವೆಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಪೆರೋಲ್ ಕೂಡ ಸಿಗದಿರುವಂತಹ ಜೀವನ ಪೂರ್ತಿ ಜೈಲಿನಲ್ಲೇ ಕಳೆಯುವಂತಹ ಶಿಕ್ಷೆ ನೀಡಿದೆ. ವಾಲ್ಟನ್ ಕೌಂಟಿ ಜಿಲ್ಲಾ ಅಟರ್ನಿ ನ್ಯಾಯಾಲಯ ಈ ತೀರ್ಪು ನೀಡಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.  

ಈ ಸಲಿಂಗಿ ದಂಪತಿಗಳಲ್ಲಿ ವಿಲಿಯಂಗೆ 34 ವರ್ಷವಾದರೆ ಝಚರಿಗೆ 36 ವರ್ಷ.  ಈ ಸಲಿಂಗಿ ಜೋಡಿ ಕ್ರಿಶ್ಚಿಯನ್‌ ಸ್ಪೆಷಲ್ ನೀಡ್ ಏಜೆನ್ಸಿಯಿಂದ ಈ ಹಿಂದೆ ಇಬ್ಬರು ಸೋದರರನ್ನು ದತ್ತು ಪಡೆದಿದ್ದು, ಅವರಲ್ಲಿ ಒಬ್ಬನಿಗೆ ಈಗ 10 ವರ್ಷವಾದರೆ ಮತ್ತೊಬ್ಬನಿಗೆ 12 ವರ್ಷ. ಅಟ್ಲಾಂಟದ ಉಪನಗರದಲ್ಲಿ  ಸುಂದರವಾದ ಕುಟುಂಬದ ಸೋಗಿನಲ್ಲಿ ಈ ಸಲಿಂಗಿ ಜೋಡಿ ಈ ಮಕ್ಕಳನ್ನು ಬೆಳೆಸಿದ್ದರು. 

ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ಜಿಲ್ಲಾ ಅಟರ್ನಿ ರಾಂಡಿ ಮೆಕ್‌ಗಿನ್ಲಿ ಅವರು ಆರೋಪಿಗಳಾದ ಈ ವಿಲಿಯಂ ಮತ್ತು ಜಚಾರಿ ನಿಜವಾಗಿಯೂ ಈ ಭಯಾನಕತೆಯ ಮನೆಯನ್ನು ಸೃಷ್ಟಿಸಿ ತಮ್ಮ ಕರಾಳವಾದ ಆಸೆಯನ್ನು ಎಲ್ಲಕ್ಕಿಂತ ಹಾಗೂ ಎಲ್ಲದರಿಗಿಂತ ಮೇಲಿಟ್ಟಿದ್ದರು. ಇವರ ಕೃತ್ಯ ಹಾಗೂ ಅವರ ಅಧಃಪತನ ಭಯಾನಕವಾಗಿದೆ. ಆದರೆ ಇದು ನ್ಯಾಯಕ್ಕಾಗಿ ಹೋರಾಡಿದವರ ಸಂಕಲ್ಪ ಮತ್ತು ಸಂತ್ರಸ್ತ್ರ ಶಕ್ತಿಯ ಮುಂದೆ ಹೆಚ್ಚೇನು ಅಲ್ಲ, ಕಳೆದ ಎರಡು ವರ್ಷಗಳಲ್ಲಿ ಇಬ್ಬರು ಬಾಲಕರು ಮಾಡಿದ ಸಂಕಲ್ಪ ನಿಜವಾಗಿಯೂ ಸ್ಪೂರ್ತಿದಾಯಕ ಎಂದು ನ್ಯಾಯಾಧೀಶರು ಹೇಳಿದ್ದಾರೆ. 

ಆರೋಪಿಗಳಲ್ಲಿ ಜಚಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ವಿಲಿಯಂ ಸರ್ಕಾರಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಚೆಂದದ ಜೀವನವಿದ್ದರೂ ಸಹ ಈ ಕಾಮುಕರು ತಮ್ಮ ದತ್ತು ಪುತ್ರರಾಗಿದ್ದ ಯುವ ಸಹೋದರರನ್ನು ನಿರಂತರವಾಗಿ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸಿದ್ದಾರೆ. ಅಲ್ಲದೇ ತಮ್ಮ ಈ ಶಿಶು ಕಾಮನೆಯನ್ನು ವೀಡಿಯೋ ಚಿತ್ರೀಕರಿಸಿದ್ದಾರೆ. ಅಷ್ಟೇ ಅಲ್ಲ, ಈ ಕಾಮುಕರು ತಮ್ಮ ಸಮುದಾಯದ ಕೆಲವು ಸ್ನೇಹಿತರಿಗೆ ತಮ್ಮ ಈ ಕೃತ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಪೊಲೀಸರಿಗೆ ಸಿಕ್ಕಿರುವ ಸಾಕ್ಷ್ಯಗಳು ಈ ಕೃತ್ಯವನ್ನು ಖಚಿತಪಡಿಸಿವೆ. 

ದತ್ತು ಪುತ್ರರ ಮೇಲೆ ಅತ್ಯಾಚಾರವೆಸಗಿ ಆರೋಪದ ಮೇಲೆ 2022ರಲ್ಲಿ ವಿಲಿಯಂ ಹಾಗೂ ಝಚಾರಿಯನ್ನು ಬಂಧಿಸಲಾಗಿತ್ತು. ಇವರ ಈ ಕೃತ್ಯಗಳ ಬಗ್ಗೆ ಇವರ ಸ್ನೇಹಿತರೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ನ್ಯಾಪ್‌ಚಾಟ್‌ನಲ್ಲಿ ಈ ಕಾಮುಕರು ಸಂತ್ರಸ್ತ ಬಾಲಕರಲ್ಲಿ ಒಬ್ಬರ ಫೋಟೋವನ್ನು ಪೋಸ್ಟ್ ಮಾಡಿ ತಾನು ಇಂದು ರಾತ್ರಿ ತನ್ನ ಈ ಮಗನ ಮೇಲೆ ಅತ್ಯಾಚಾರವೆಸಗುವುದಾಗಿ ಹೇಳಿದ್ದರು ಅಲ್ಲದೇ ಇವರು ಇತರರಿಗೂ ಬಾಲಕರಿಗೆ ಕಿರುಕುಳ ನೀಡುವುದಕ್ಕೆ ಪಿಂಪ್‌ಗಳಾಗಿ ಕೆಲಸ ಮಾಡಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!