-ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಬ್ರಿಟನ್ ಪ್ರಧಾನಿಯನ್ನು ಭೇಟಿಯಾದ ಅದಾನಿ
-ಹವಾಮಾನ ಬದಲಾವಣೆ ಬಿಕ್ಕಟ್ಟಿನ ಬಗ್ಗೆ ಚರ್ಚೆ
- 70 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯ ಭರವಸೆ!
ಲಂಡನ್ (ಅ. 19) : ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ (Gautam Adani) ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ರನ್ನು (Boris Johnson) ಮಂಗಳವಾರ (ಅ. 19) ಭೇಟಿಯಾಗಿದ್ದಾರೆ. ಅಲ್ಲದೇ ಅದಾನಿ ಸಮೂಹವು ಸೌರ ಮತ್ತು ಇತರ ಮಾರ್ಗದ ಮೂಲಕ ಶಕ್ತಿಯ ಪರಿವರ್ತನೆಗೆ 70 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೌತಮ್ ಅದಾನಿ ʼ ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಬೋರಿಸ್ ಅವರನ್ನು ಭೇಟಿ ಮಾಡಿದ್ದು ಖುಷಿಯಾಗಿದೆ. ಹವಾಮಾನ ಬದಲಾವಣೆ (Climate change) ಕಾರ್ಯಾಚರಣೆ ನಿಟ್ಟಿನಲ್ಲಿ ಕೆಲಸ ಮಾಡಲು ಸ್ಪೂರ್ತಿದಾಯಕ ನಾಯಕತ್ವ ತೋರಿಸುವ ವೇದಿಕೆ ಇದಾಗಿದೆ. ಅದಾನಿ ಸಮೂಹವು ಸೌರ, ಗಾಳಿ ಮತ್ತು ಎಚ್2 ಮೂಲಕ ಶಕ್ತಿಯ ಪರಿವರ್ತನೆಗೆ (Energy transition) 70 ಬಿಲಿಯನ್ ಯುಎಸ್ ಡಾಲರ್ ಹೂಡುವುದಾಗಿ ಹೇಳಿದ್ದಾರೆ ಹಾಗೂ ಈ ಅವಕಾಶವನ್ನು ನೀಡಿದ್ದಕ್ಕಾಗಿ ಇಂಗ್ಲೆಂಡ್ ಸರ್ಕಾರಕ್ಕೆ ಧನ್ಯವಾದʼ ಎಂದು ಹೇಳಿದ್ದಾರೆ. ಈ ಬಗ್ಗೆ ಅದಾನಿ ಸಮೂಹ ಕೂಡ ಸರಣಿ ಟ್ವೀಟ್ ಮಾಡಿದ್ದು, ಜಾಗತಿಕ ಹವಾಮಾನ ಬದಲವಾಣೆ ಬಿಕ್ಕಟ್ಟನ್ನು ನಿವಾರಿಸಲು ಅದಾನಿ ಸಂಸ್ಥೆ ಕೈ ಜೋಡಿಸಲಿದೆ ಎಂದು ಹೇಳಿದೆ.
undefined
Honoured to meet UK PM at the . What a platform! Inspiring leadership in synchronizing global climate action. will commit $70bn to Energy Transition via Solar, Wind & H2. Thank you, UK Govt and , for the opportunity. pic.twitter.com/26FrUCeSTl
— Gautam Adani (@gautam_adani)
Chairman says the battle against climate change must be fought with equitable and pragmatic policies. Speaking on the sidelines of the UK Govt's Global Investment Summit in London, he called for setting practical goals and agendas to overcome the climate crisis. pic.twitter.com/1qn3C2lWe5
— Adani Group (@AdaniOnline);
ಚೀನಾದಿಂದ ಇಡೀ ಭೂಮಿ ಸುತ್ತಬಲ್ಲ ಶಬ್ದಾತೀತ ಕ್ಷಿಪಣಿ ಪರೀಕ್ಷೆ?
ಸಭೆಯಲ್ಲಿ ಮಾತನಾಡಿದ ಗೌತಮ್ ಅದಾನಿ ʼಹವಾಮಾನ ಬದಲಾವಣೆ ಬಿಕ್ಕಟ್ಟನ್ನು ನಿರ್ವಹಿಸುವ ಪ್ರಯತ್ನಗಳು ಪ್ರಾಯೋಗಿಕ ಮತ್ತು ನ್ಯಾಯಯುತವಾಗಿರಬೇಕು ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪರಿಸರಕ್ಕೆ ಉಂಟು ಮಾಡುವ ಹಾನಿಯು ಶೂನ್ಯಕ್ಕೆ ಸಮನಾಗಿರಬೇಕು, ಅಲ್ಲದೇ ರಾಷ್ಟ್ರದ ಹಿತವನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕುʼ ಎಂದು ಆಗ್ರಹಿಸಿದ್ದಾರೆ. 2015 ರ COP-21 summit ಮೂಲಕ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈಗಾಗಲೇ ಭಾರತ ದಿಟ್ಟ ಹೆಜ್ಜೆಗಳನಿಟ್ಟು ತನ್ನ ಬದ್ಧತೆಯನ್ನು ಪ್ರದರ್ಶಸಿದೆ. ಹವಾಮಾನ ಬದಲಾವಣೆ ಬಿಕ್ಕಟ್ಟಿನ ನಿಟ್ಟಿನಲ್ಲಿ ಭಾರತ ಅತ್ಯಂತ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದೆ. ಈ ಹಿನ್ನೆಲೆಯಲ್ಲಿ ಅದಾನಿ ಸಮೂಹ ಸಂಸ್ಥೆಗಳು ಕೂಡ ಹಣ ಹೂಡಿಕೆ ಮಾಡುವುದರ ಮೂಲಕ ದೇಶದ ಪ್ರಗತಿಯತ್ತ ಕೈ ಜೋಡಿಸಲಿದೆ ಎಂದಿದ್ದಾರೆ.
ಅಪ್ಘಾನ್‌ನಲ್ಲಿ ಆಹಾರಕ್ಕೆ ಹಾಹಾಕಾರ, 50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಲು ಭಾರತ ಸಜ್ಜು!
ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸ್ಥಿರವಾಗಿದ್ದ ಹವಾಮಾನವು ಬದಲಾವಣೆಯಾಗಿ ಅಸ್ಥಿರವಾದಾಗ ಹವಾಮಾನ ಬಿಕ್ಕಟ್ಟು ಉಂಟಾಗುತ್ತದೆ. ಹವಾಮಾನ ಬದಲಾವಣೆ ಬಿಕ್ಕಟ್ಟಿಗೆ ನಾವು ಮನೆ, ಕಾರ್ಖಾನೆ ಮತ್ತು ಸಾರಿಗೆಗಳಲ್ಲಿ ಬಳಸುತ್ತಿರುವ ತೈಲ, ಅನಿಲ ಮತ್ತು ಕಲ್ಲಿದ್ದಲು ಕಾರಣವಾಗುತ್ತವೆ. ಇಂಥಹ ಪಳೆಯುಳಿಕೆ ಇಂಧನಗಳು ಸುಟ್ಟಾಗ ಇದರಿಂದ ಹೊರ ಬರುವ ಹಸಿರು ಅನಿಲಗಳು ಮುಖ್ಯವಾಗಿ ಇಂಗಾಲದ ಡೈ ಆಕ್ಸೈಡ್ ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತವೆ. 19ನೇ ಶತಮಾನಕ್ಕೆ ಹೋಲಿಸಿದರೆ ಭೂಮಿಯ ತಾಪಮಾನ ಈಗ 1.2 ಸೆಲ್ಸಿಯಸ್ ಹೆಚ್ಚಾಗಿದೆ ಹಾಗೂ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣದಲ್ಲಿ ಶೇ 50 ರಷ್ಟು ಏರಿಕೆಯಾಗಿದೆ. ಹವಾಮಾನ ಬದಲಾವಣೆ ಇಡೀ ಜಗತ್ತಿಗೆ ತಲೆ ನೋವಾಗಿ ಪರಿಣಮಿಸಿದೆ. ಈಗ ಜಾಗತಿಕೆ ಹೂಡಿಕೆ ಶೃಂಗ ಸಭೆಯಲ್ಲಿ ಹವಾಮಾನ ಬದಲಾವಣೆ ಬಿಕ್ಕಟ್ಟು ನಿವಾರಿಸಲ್ಲಿ ಅದಾನಿ ಸಮೂಹ ಕೆಲಸ ಮಾಡುವುದಾಗಿ ಗೌತಮ್ ಅದಾನಿ ಭರವಸೆ ನೀಡಿದ್ದಾರೆ.