ಪಾಕ್‌ ಟೂಲ್‌ಕಿಟ್‌ ಬೆಳಕಿಗೆ: ಕಾಶ್ಮೀರದಲ್ಲಿ ದಾಳಿಗೆ ಪಾಕ್‌ ಐಎಸ್‌ಐ ಸಂಚು!

By Kannadaprabha News  |  First Published Oct 20, 2021, 7:28 AM IST

* ಕಾಶ್ಮೀರದಲ್ಲಿ ದಾಳಿಗೆ ಪಾಕ್‌ ಐಎಸ್‌ಐ ಸಂಚು

* 22 ಅಂಶಗಳ ಪಾಕ್‌ ಟೂಲ್‌ಕಿಟ್‌ ಬೆಳಕಿಗೆ

* ಪೆಟ್ರೋಲ್‌ ಬಾಂಬ್‌ ದಾಳಿಗೂ ತಾಕೀತು


ನವದೆಹಲಿ(ಅ.20): ಕಾಶ್ಮೀರದಲ್ಲಿ(Kashmir) ವಲಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ದಾಳಿ ನಡೆಸುತ್ತಿರುವುದರ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ(ISI) ಕೈವಾಡವಿರುವುದಕ್ಕೆ ಇದೀಗ ಸಾಕ್ಷ್ಯ ದೊರೆತಿದೆ. ಕಾಶ್ಮೀರದಲ್ಲಿ ದಾಳಿ ನಡೆಸುವ ಬಗ್ಗೆ ಐಎಸ್‌ಐ ಸಿದ್ಧಪಡಿಸಿದ 22 ಅಂಶಗಳ ಟೂಲ್‌ಕಿಟ್‌(Toolkit) ಬೆಳಕಿಗೆ ಬಂದಿದ್ದು, ಅದರಲ್ಲಿ ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ(Pakistan) ನಡೆಸಿರುವ ಸಂಚು ಜಗಜ್ಜಾಹೀರಾಗಿದೆ.

ಸ್ಥಳೀಯರಲ್ಲದ ಅಧಿಕಾರಿಗಳ ಮೇಲೆ, ಕಾಶ್ಮೀರದಲ್ಲಿ ದೀರ್ಘಾವಧಿಗೆ ಉಳಿದುಕೊಳ್ಳಲು ಬರುವವರ ಮೇಲೆ, ಮರಳಿ ಕಾಶ್ಮೀರಕ್ಕೆ(Kashmir) ಬರಲು ಮುಂದಾಗಿರುವ ಪಂಡಿತರ ಮೇಲೆ ದಾಳಿ ನಡೆಸಿ ಎಂದು ಉಗ್ರರಿಗೆ ಸಂದೇಶ ನೀಡುವ ‘ನೀಲಿನಕ್ಷೆ’(Blueprint) ಇದಾಗಿದೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.

Latest Videos

undefined

ಈ ನಡುವೆ, ಕಾಶ್ಮೀರದಲ್ಲಿನ ಇತ್ತೀಚಿನ ಹೊಸ ಮಾದರಿಯ ದಾಳಿಗಳ ತನಿಖೆ ಹೊಣೆಯನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವ ಸಾಧ್ಯತೆ ಇದೆ.

ಟೂಲ್‌ಕಿಟ್‌ನಲ್ಲೇನಿದೆ?:

ಸ್ಥಳೀಯರಲ್ಲದ ಅಧಿಕಾರಿಗಳು, ಕಾಶ್ಮೀರದಲ್ಲಿ ದೀರ್ಘಾವಧಿಗೆ ನೆಲೆಸಲು ಬರುವವರ ಮೇಲೆ ದಾಳಿ ನಡೆಸಬೇಕು. ಪೊಲೀಸರ ಮೇಲೆ ಹಾಗೂ ಕಾಶ್ಮೀರಕ್ಕೆ ಮರಳಿ ಬರಲು ಮುಂದಾಗಿರುವ ಪಂಡಿತರ ಮೇಲೆ ದಾಳಿ ಮಾಡಬೇಕು. ಪೊಲೀಸ್‌ ಮಾಹಿತಿದಾರರ ಮೇಲೆ ಪೆಟ್ರೋಲ್‌ ಬಾಂಬ್‌, ಕಲ್ಲಿನ ದಾಳಿ ನಡೆಸಬೇಕು. ಕಾಶ್ಮೀರಕ್ಕೆ ಹೊರಗಿನಿಂದ ಬಂದು ನೆಲೆಸಿರುವವರನ್ನು ಕೂಡಲೇ ಇಲ್ಲಿಂದ ಓಡಿಸಬೇಕು. ಎಲ್ಲಾ ರೀತಿಯ ಸರ್ಕಾರಿ ನೌಕರರು, ಕಾಶ್ಮೀರ ವಿರೋಧಿ ಮಾಧ್ಯಮಗಳ ಮೇಲೆ ದಾಳಿ ಮಾಡಬೇಕು. ಸರ್ಕಾರಿ ಯೋಜನೆ, ಸೇತುವೆ, ಶಾಲೆ, ಕಾಲೇಜು, ಕ್ರೀಡಾ ಸೌಕರ್ಯಗಳನ್ನು ಹಾಳುಮಾಡಬೇಕು. ಕಾಶ್ಮೀರವನ್ನು ಹಾಳುಮಾಡಲು ಹೊರಗಿನಿಂದ ಜನ ಬರುವುದರಿಂದ ಕಾಶ್ಮೀರದ ಹೊರಗೂ ಕಾರಾರ‍ಯಚರಣೆ ವಿಸ್ತರಿಸಬೇಕು.

click me!