ಕೊರೋನಾ ಸೋಂಕದ ಚೀನಾದ ಬೀಜಿಂಗ್‌ನಲ್ಲಿ ವೈರಸ್ ಸ್ಫೋಟ!

Suvarna News   | Asianet News
Published : Jun 15, 2020, 07:01 PM IST
ಕೊರೋನಾ ಸೋಂಕದ ಚೀನಾದ ಬೀಜಿಂಗ್‌ನಲ್ಲಿ ವೈರಸ್ ಸ್ಫೋಟ!

ಸಾರಾಂಶ

ಚೀನಾದ ವುಹಾನ್ ಮಾರುಕಟ್ಟೆ ಇದೀಗ ವಿಶ್ವದಲ್ಲೇ ಪ್ರಖ್ಯಾತಿಯಾಗಿದೆ. ಕಾರಣ ಕೊರೋನಾ ವೈರಸ್. ವುಹಾನ್‌ನಿಂದ ಆಗಮಿಸಿದ ಬಿರುಗಾಳಿ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ವಿಶ್ವವೇ ಕೊರೋನಾದಿಂದ ತತ್ತರಿಸಿ ಹೋಗಿದ್ದರೂ, ಚೀನಾದ ಬೀಜಿಂಗ್ ಸೋಂಕಿನಿಂದ ಮುಕ್ತವಾಗಿತ್ತು. ಇದೀಗ ಬೀಜಿಂಗ್‌ನಲ್ಲಿ ಕೊರೋನಾ ಸ್ಫೋಟಗೊಂಡಿದೆ.

ಬೀಜಿಂಗ್(ಜೂ.15): ಚೀನಾದ ವುಹಾನ್‌ನಲ್ಲಿ ಆರಂಭವಾದ ಕೊರೋನಾ ವೈರಸ್ ಇದೀಗ ಎಲ್ಲಾ ದೇಶಗಳಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಆದರೆ ಆಶ್ಚರ್ಯ ಎಂಬಂತೆ ವಿಶ್ವದೆಲ್ಲೆಡೆ ಕೊರೋನಾ ವೈರಸ್ ಹಬ್ಬಿದರೂ, ಚೀನಾ ರಾಜಧಾನಿ ಬೀಜಿಂಗ್‌ ಕೊರೋನಾ ವೈರಸ್‌ನಿಂದ ಮುಕ್ತವಾಗಿತ್ತು. ಇದೀಗ ಬೀಜಿಂಗ್‌ನಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಬೀಜಿಂಗ್ ವೈರಸ್ ಹಿಂದೆ ವುಹಾನ್ ರೀತಿಯಲ್ಲಿ ಆಹಾರ ಮಾರುಕಟ್ಟೆಯೊಂದರ ಕರಿನೆರಳಿದೆ.

ಕಳೆದ ಆಗಸ್ಟ್‌ನಲ್ಲಿಯೇ ಚೀನಾದಲ್ಲಿ ಕೊರೋನಾ ಇತ್ತು!  ಹಾವರ್ಡ್ ಸ್ಟಡಿ, ಚೀನಾ ಲೇವಡಿ!.

ಜೂನ್ 12 ರಂದು ಬೀಜಿಂಗ್‌ನ ಇಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತು. ಇಬ್ಬರನ್ನು ಐಸೋಲೇಶನ್ ವಾರ್ಡ್‌ಗೆ ಹಾಕಲಾಯಿತು. ಇತ್ತರ ಇವರ ಸಂಪರ್ಕಿದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿ ಚೀನಾ ನಿಟ್ಟುಸಿರು ಬಿಟ್ಟಿತು. ಆದರೆ 3 ದಿನದಲ್ಲಿ ಬೀಜಿಂಗ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 87ಕ್ಕೇರಿದೆ. ಇಂದು(ಜೂ.15) ಒಂದೇ ದಿನ 35 ಹೊಸ ಕೊರೋನಾ ವೈರಸ್ ಪ್ರಕರಣಗಳು ಬೀಜಿಂಗ್‌ನಲ್ಲಿ ಪತ್ತೆಯಾಗಿದೆ.

ಚೀನಿ ಜನತಗೆ ಸ್ವಾತಂತ್ರ್ಯ ಅಗತ್ಯವಿದೆ; ಕೊರೋನಾದಿಂದ ಬದಲಾಗಲಿದೆ ಡ್ರ್ಯಾಗನ್ ದೇಶ ಎಂದ ದಲೈ ಲಾಮಾ

ಬೀಜಿಂಗ್‌ನಲ್ಲಿ ಕೊರೋನಾ ವಕ್ಕರಿಸಿಲು ಕ್ಸಿನ್‌ಫಡಿ ಆಹಾರ ಮಾರುಕಟ್ಟೆ ಕಾರಣವಾಗಿದೆ. ಏಷ್ಯಾದ ಅತೀ ದೊಡ್ಡ ಚೀನಿ ಆಹಾರ ವಸ್ತುಗಳ ಮಾರುಕಟ್ಟೆ ಕ್ಸಿನ್‌ಫಡಿ ಆಹಾರ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಇದೀಗ ಸೋಂಕಿತರ ಸಂಖ್ಯೆ 87 ಆಗಿದೆ. 

ಬೀಜಿಂಗ್‌ ಲಾಕ್‌ಡೌನ್ ಮಾಡಲಾಗಿದೆ. ಇನ್ನು ಕ್ಸಿನ್‌ಫಡಿ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿದೆ. ಬೀಜಿಂಗ್ ನಲ್ಲಿನ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದವರನ್ನು 14 ದಿನ ಕ್ವಾರಂಟೈನ್ ಮಾಡಲಾಗಿದೆ. ಬೀಜಿಂಗ್ ಸುತ್ತ ಸೇನೆಯನ್ನು ನಿಯೋಜಿಸಲಾಗಿದ್ದು, ಕಟ್ಟು ನಿಟ್ಟಿನ ಕ್ರಮಕ್ಕೆ ಚೀನಾ ಮುಂದಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ