ಅಮೆರಿಕ ಪೊಲೀಸ್‌ ಗುಂಡಿಗೆ ಮತ್ತೆ ಕಪ್ಪುವರ್ಣೀಯ ಬಲಿ!

Published : Jun 15, 2020, 10:55 AM ISTUpdated : Jun 15, 2020, 12:08 PM IST
ಅಮೆರಿಕ ಪೊಲೀಸ್‌ ಗುಂಡಿಗೆ ಮತ್ತೆ ಕಪ್ಪುವರ್ಣೀಯ ಬಲಿ!

ಸಾರಾಂಶ

ಅಮೆರಿಕ ಪೊಲೀಸ್‌ ಗುಂಡಿಗೆ ಮತ್ತೆ ಕಪ್ಪುವರ್ಣೀಯ ಬಲಿ| ಘಟನೆ ಬೆನ್ನಲ್ಲೇ, ಅಟ್ಲಾಂಟಾ ಪೊಲೀಸ್‌ ಮುಖ್ಯಸ್ಥೆ ರಾಜೀನಾಮೆ| ಅಟ್ಲಾಂಟಾಕ್ಕೆ ಲಗ್ಗೆಯಿತ್ತ ಕಪ್ಪು ವರ್ಣೀಯರಿಂದ ರೆಸ್ಟೋರೆಂಟ್‌ಗೆ ಬೆಂಕಿ

ವಾಷಿಂಗ್ಟನ್(ಜೂ.15)‌: ಪೊಲೀಸರ ದೌರ್ಜನ್ಯಕ್ಕೆ ಜಾಜ್‌ರ್‍ ಫ್ಲಾಯ್ಡ್‌ ಬಲಿಯಾದ್ದನ್ನು ವಿರೋಧಿಸಿ ಅಮೆರಿಕದಾದ್ಯಂತ ಜನಾಂಗೀಯ ವಿರುದ್ಧದ ಹೋರಾಟವಾಗಿ ರೂಪುಗೊಂಡಿರುವ ಬೆನ್ನಲ್ಲೇ, ಪೊಲೀಸರ ಗುಂಡಿಗೆ ಮತ್ತೋರ್ವ ಕಪ್ಪು ವರ್ಣೀಯ ವ್ಯಕ್ತಿ ಬಲಿಯಾಗಿದ್ದಾನೆ. ಮೃತ ವ್ಯಕ್ತಿಯನ್ನು 4 ಮಕ್ಕಳ ತಂದೆ ರಾಯ್‌ಶಾರ್ಡ್‌ ಬ್ರೂಕ್ಸ್‌ ಎಂದು ಎಂದು ಗುರುತಿಸಲಾಗಿದೆ. ಘಟನೆ ಬೆನ್ನಲ್ಲೇ ಅಟ್ಲಾಂಟಾದಲ್ಲಿ ಸಣ್ಣಮಟ್ಟದಲ್ಲಿ ಹಿಂಸಾಚಾರ ಆರಂಭವಾಗಿದೆ.

ವ್ಯಕ್ತಿ ಕುತ್ತಿಗೆಯನ್ನು ಮಂಡಿಯಿಂದ ಅದುಮಿದ ಪೊಲೀಸ್ ಪೇದೆ!

ಶುಕ್ರವಾರ(ಅಮೆರಿಕ ಕಾಲಮಾನ) ತನ್ನ 8 ವರ್ಷದ ಮಗಳ ಹುಟ್ಟಹಬ್ಬ ಆಚರಿಸಿದ್ದ ಬ್ರೂಕ್ಸ್‌ ಪ್ರಸಿದ್ಧ ವೆಂಡಿ ರೆಸ್ಟೋರೆಂಟ್‌ಗೆ ಬಂದಿದ್ದ. ಆದರೆ, ಈ ವೇಳೆ ರೆಸ್ಟೋರೆಂಟ್‌ ಮುಂಭಾಗದಲ್ಲೇ ಕಾರಿನಲ್ಲಿ ನಿದ್ರೆಗೆ ಜಾರಿದ್ದ. ಈ ಸಂಬಂಧ ದೂರು ಪಡೆದು ವಿಚಾರಣೆಗಾಗಿ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಬ್ರೂಕ್ಸ್‌ ಜೊತೆ ತಳ್ಳಾಟ ಮತ್ತು ನೂಕಾಟ ನಡೆದಿದೆ. ಕೊನೆಗೆ, ಪೊಲೀಸರ ಬಂದೂಕು ಕಸಿದು ಓಡಿ ಹೋಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಬ್ರೂಕ್ಸ್‌ ಮಡಿದಿದ್ದಾನೆ. ಬ್ರೂಕ್ಸ್‌ ಪೊಲೀಸರಿಂದ ಹತ್ಯೆಗೀಡಾಗಿದ್ದಾನೆ ಎಂಬ ವಿಚಾರ ಹಬ್ಬುತ್ತಿದ್ದಂತೆ ನಾನಾ ಭಾಗಗಳಿಂದ ಅಟ್ಲಾಂಟಾಕ್ಕೆ ದಾಳಿಯಿತ್ತ ಸಾವಿರಾರು ಮಂದಿ ಕಪ್ಪು ಜನಾಂಗೀಯರು ವೆಂಡಿ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಜನಾಂಗೀಯ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

ಜನಾಂಗೀಯ ಸಮಾನತೆಗೆ ಪಣತೊಟ್ಟ ಬಾಸ್ಕೆಟ್ ಬಾಲ್ ಪಟು ಜೋರ್ಡನ್; $100 ಮಿಲಿಯನ್ ಹಣ ದೇಣಿಗೆ!

ಈ ಘಟನೆ ಬೆನ್ನಲ್ಲೇ, ಗುಂಡಿನ ದಾಳಿ ನಡೆಸಿ ವ್ಯಕ್ತಿಯ ಸಾವಿಗೆ ಕಾರಣನಾದ ಪೊಲೀಸ್‌ ಮುಖ್ಯಸ್ಥೆ ಎರಿಕಾ ಶೀಲ್ಡ್‌$್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮತ್ತೊಂದೆಡೆ, ಮತ್ತೋರ್ವ ಕಪ್ಪು ಜನಾಂಗದ ವ್ಯಕ್ತಿಯ ಶವವು ನಿಗೂಢ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಹೋರಾಟಗಳು ಮತ್ತಷ್ಟುತೀವ್ರತೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೋಟ್ಯಂತರ ಹಣ ಹೊತ್ತೊಯ್ಯುತ್ತಿದ್ದ ವಿಮಾನ ಹೆದ್ದಾರಿಯಲ್ಲಿ ಪತನ, ರಸ್ತೆಯುದ್ದಕ್ಕೂ ನೋಟುಗಳ ರಾಶಿ!
ಪಾಕಿಸ್ತಾನ- ಅಫಘಾನಿಸ್ತಾನ ಮಧ್ಯೆ ಉಗ್ರ ಯುದ್ಧ: ಯುದ್ಧಕ್ಕೆ 200 ಸಾವು