ಆಫ್ಘಾನಿಸ್ತಾನದ ಮಾಜಿ ಸಚಿವ ಈಗ ಜರ್ಮನಿಯಲ್ಲಿ ಪಿಝಾ ಡೆಲಿವರಿ ಬಾಯ್!

By Suvarna NewsFirst Published Aug 25, 2021, 3:58 PM IST
Highlights
  • ತಾಲಿಬಾನ್ ಉಗ್ರರು ಕೈವಶದಲ್ಲಿ ಆಫ್ಘಾನಿಸ್ತಾನ, ಆತಂಕದಲ್ಲಿ ಅಮಾಯಕ ಜನ
  • ಅಶ್ರಫ್ ಘನಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸೈಯದ್ ಇದೀಗ ಪಿಝಾ ಡೆಲಿವರಿ ಬಾಯ್
  • ಜರ್ಮನಿಯಲ್ಲಿ ಸೈಕಲ್ ಮೂಲಕ ಪಿಝಾ ಡೆಲಿವರಿ ಮಾಡುತ್ತಿರುವ ಮಾಜಿ ಮಂತ್ರಿ

ಕಾಬೂಲ್(ಆ.25): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಅದೆಷ್ಟರ ಮಟ್ಟಿಗಿದೆ ಅನ್ನೋದು ಈಗಾಗಲೇ ಜಗಜ್ಜಾಹೀರಾಗಿದೆ. ಅಮಾಯಕ ಜನರ ಮೇಲೆ ಗುಂಡಿನ ದಾಳಿ, ಮಹಿಳೆಯರು, ಹೆಣ್ಣು ಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ಸೇರಿದಂತೆ ಹಲವು ಘಟನೆಗಳು ದಿನವೂ ವರದಿಯಾಗುತ್ತದೆ. ತಾಲಿಬಾನ್ ಉಗ್ರರ ಕ್ರೌರ್ಯಕ್ಕೆ ಬೆಚ್ಚಿ ಅಮಾಯಕರು ಸಿಕ್ಕ ಸಿಕ್ಕ ವಿಮಾನ ಹತ್ತಿ ನಿರಾಶ್ರಿತ ಕೇಂದ್ರ ಸೇರುತ್ತಿದ್ದಾರೆ. ಇದರ ನಡುವೆ ಮತ್ತೊಂದು ನೋವಿನ ಘಟನೆ ಬೆಳಕಿಗೆ ಬಂದಿದೆ. ಆಶ್ರಫ್ ಘನಿ ಸರ್ಕಾರದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವನಾಗಿದ್ದ ಸೈಯದ್ ಅಹಮ್ಮದತ್ ಶಾ ಸಾದತ್, ಇದೀಗ ಪಿಝಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

'ಅಪ್ಘಾನ್‌ನಲ್ಲಿ ಬೇರಾವ ದೇಶವೂ ಭಾರತ ಸರ್ಕಾರದ ಹಾಗೆ ತನ್ನ ನಾಗರಿಕರ ರಕ್ಷಣೆ ಮಾಡುತ್ತಿಲ್ಲ

ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ಕೈವಶ ಮಾಡುತ್ತಿದ್ದಂತೆ ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಉಟ್ಟ ಬಟ್ಟೆಯಲ್ಲಿ ತಜಕಿಸ್ತಾನಕ್ಕೆ ತೆರಳಿ ಅಲ್ಲಂದ ಅಬುಧಾಬಿಗೆ ತೆರಳಿದ್ದರು. ಇದೇ ಅಶ್ರಫ್ ಘನಿ ಸರ್ಕಾರದಲ್ಲಿ ಮಾಹಿತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸೈಯದ್ ಅಹಮ್ಮದತ್ ಶಾ ಸಾದತ್ ಇದೀಗ ಜರ್ಮನಿಯಲ್ಲಿ ಸೈಕಲ್ ಮೂಲಕ ಪಿಝಾ ಡೆಲಿವರಿ ಬಾಯ್ ಆಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

 

Vor ein paar Tagen lernte ich einen Mann kennen, der behauptete, vor zwei Jahren afghanischer Kommunikationsminister gewesen zu sein. Ich fragte, was er in mache. „Ich fahre für Lieferando Essen aus.“ pic.twitter.com/nafutTTXqP

— Josa Mania-Schlegel (@JosaMania)

ಸೈಯದ್ ಅಹಮ್ಮದತ್ ಶಾ ಸಾದತ್ 2018ರಲ್ಲಿ ಅಶ್ರಫ್ ಘನಿ ಕ್ಯಾಬಿನೆಟ್ ಸೇರಿಕೊಂಡರು. ಆಕ್ಸ್‌ಫರ್ಡ್ ಯುನಿವರ್ಸಿಟಿಯಿಂದ ಕಮ್ಯೂನಿಕೇಶನ್ ಹಾಗೂ ಎಲೆಕ್ಟ್ರಾನಿಕ್ ಎಂಜನೀಯರಿಂಗ್ ಸ್ನಾತಕೋತ್ತರ ಪದವಿ ಪಡೆದಿರುವ ಸಾದತ್ 2020ರ ವರಗೆ ಘನಿ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಾದತ್ ಕುಟುಂಬ ಕಾಬೂಲ್‌ನಲ್ಲಿ ವಾಸಲಿದ್ದರೆ, ಸಾದತ್ ಪೋಷಕರು ಹಾಗೂ ಇತರ ಕುಟುಂಬ ಸದಸ್ಯರು ಹುಟ್ಟೂರಿನಲ್ಲೆ ನೆಲೆಸಿದ್ದರು. ಇಲ್ಲಿ ತಾಲಿಬಾನ್ ಅಟ್ಟಹಾಸ ಹೆಚ್ಚಾಗಿತ್ತು. 

ಅಮೆರಿಕ ಮಿಲಿಟರಿ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಆಫ್ಘಾನ್ ಮಹಿಳೆ!

ತಾಲಿಬಾನ್ ಉಗ್ರರ ಬೆದರಿಕೆ ಹಾಗೂ ಇತರ ಕಾರಣದಿಂದ 2020ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಾದತ್ ಕುಟುಂಬ ಸಮೇತ ಜರ್ಮನಿಗೆ ತೆರಳಿದ. ಬಳಿಕ ಸಾದತ್ ಎಲ್ಲಿದ್ದಾನೆ ಅನ್ನೋ ಮಾಹಿತಿ ಪತ್ತೆಯಾಗಿರಲಿಲ್ಲ. ಇದೀಗ ಜರ್ಮನಿ ಪತ್ರಕರ್ತ ಸಾದತ್ ಇರುವಿಕೆಯನ್ನು ಬಹಿರಂಗ ಪಡಿಸಿದ್ದಾರೆ. 

ಆಫ್ಘಾನಿಸ್ತಾನದ ಮಾಜಿ ಮಂತ್ರಿ ಸಾದತ್ ಇದೀಗ ಜರ್ಮನಿಯಲ್ಲಿ ಪಿಝಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೈಕಲ್ ಮೂಲಕ ಡೆಲಿವರಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ತಾಲಿಬಾನ್ ಕಿರುಕುಳದಿಂದ ಆಫ್ಘಾನಿಸ್ತಾನ ತೊರೆದಿದ್ದ ಸಾದತ್ ನೆಮ್ಮದಿಯ ಜೀವನ ಮುನ್ನಡೆಸುತ್ತಿದ್ದಾರೆ ಎಂದು ಪತ್ರಕರ್ತ ಟ್ವೀಟ್ ಮೂಲಕ ಹೇಳಿದ್ದಾನೆ.

ಅಲ್ಲೇನೂ ಉಳಿದಿಲ್ಲ ಎಲ್ಲವೂ ನಾಶ: ಕಣ್ಣೀರಿಟ್ಟ ಅಪ್ಘಾನ್‌ ಸಂಸದ ನರೇಂದ್ರ ಸಿಂಗ್

ಸಾದತ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅರೆಬಿಯಾ ಸ್ಕೈ ನ್ಯೂಸ್ ಸಾದತ್ ಸಂಪರ್ಕಿಸಿದೆ. ಈ ವೇಳೆ ತನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ನಿಜ. ಪಿಝಾ ಡೆಲಿವರಿ ಬಾಯ್ ಆಗೆ ಕೆಲಸ ಮಾಡುತ್ತಿರುವುದಾಗಿ ಸ್ಕೈ ಅರೆಬಿಯಾ ಸುದ್ದಿ ವಾಹಿನಿಗೆ ಹೇಳಿದ್ದಾರೆ.

 

Ich recherchierte die Story nach, las afghanische Zeitungen, sprach mit anderen Afghanen. Sie stimmte. Gestern nahm er sich zwei Stunden vor seiner Schicht Zeit, um mir zu erzählen wie es dazu kommen konnte. Der Fall des Sayed Ahmad Shah Sadaat für 🚲 https://t.co/VEfH6rv1E2 pic.twitter.com/ATwnt5bWGa

— Josa Mania-Schlegel (@JosaMania)

ಆಫ್ಘಾನಿಸ್ತಾನದ ಕೆಲ ಪ್ರಾಂತ್ಯಗಳಲ್ಲಿ ತಾಲಿಬಾನ್ ಅಟ್ಟಹಾಸ ಕಿರುಕುಳ ಮೊದಲೇ ಇತ್ತು. ಆದರೆ ಕಾಬೂಲ್ ಕೈವಶ ಮಾಡಿ ಸರ್ಕಾರವನ್ನೇ ಬೀಳಿಸುವ ಕುರಿತು ಯಾರೂ ಊಹಿಸಿರಲಿಲ್ಲ. ಅಮೆರಿಕ ಸೇನೆ ವಾಪಸ್ ತೆರಳಿದ ತಕ್ಷಣವೇ ಆಫ್ಘಾನಿಸ್ತಾನ ಕೈವಶ ಮಾಡುವ ಯಾವುದೇ ಸುಳಿವು ಇರಲಿಲ್ಲ. ಸದ್ಯ ಆಫ್ಘಾನಿಸ್ತಾನ ಹಾಗೂ ಅಲ್ಲಿನ ಜನರ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿರುವ ಸಾದತ್, ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಇದೇ ವೇಳೆ ತಾವು ಮತ್ತೆ ಆಫ್ಘಾನಿಸ್ತಾನಕ್ಕೆ ವಾಪಸ್ ಆಗುವ ಕುರಿತು ಯಾವುದೇ ಸೂಚನೆ ನೀಡಿಲ್ಲ. 
 

click me!