Donald Trump Net Worth: ಡೊನಾಲ್ಡ್ ಟ್ರಂಪ್ ಅವರ ಆಸ್ತಿ ಅಧಿಕಾರಕ್ಕೆ ಬಂದ ನಂತರ ಭಾರೀ ಏರಿಕೆ ಕಂಡಿದೆ. ಫೋರ್ಬ್ಸ್ ವರದಿಯ ಪ್ರಕಾರ, ಅವರ ನಿವ್ವಳ ಮೌಲ್ಯವು ಕೇವಲ ಒಂದೇ ವರ್ಷದಲ್ಲಿ 2.3 ಬಿಲಿಯನ್ ಡಾಲರ್‌ನಿಂದ 5.1 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅವರ ಆಸ್ತಿಯಲ್ಲಿ ಭಾರೀ ಹೆಚ್ಚಳವಾಗಿದೆ. ಅಧಿಕಾರ ಸ್ವೀಕರಿಸುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ನಿರ್ಧಾರಗಳು ಚರ್ಚೆಗೆ ಗ್ರಾಸವಾಗಿದ್ದವು. ಭಾರತದ ಮೇಲೆ ಶೇ.26ರಷ್ಟು ಸುಂಕವನ್ನು ವಿಧಿಸಿದ ಬಳಿಕ ಇದನ್ನು 'ಟಿಟ್ ಫಾರ್ ಟ್ಯಾಟ್' ನೀತಿ ಎಂದು ಡೊನಾಲ್ಡ್ ಟ್ರಂಪ್ ಕರೆದರು. ಫೋರ್ಬ್ಸ್‌ನ 2025 ರ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಟ್ರಂಪ್ ಅವರ ನಿವ್ವಳ ಮೌಲ್ಯದಲ್ಲಿ ಏರಿಕೆಯಾಗಿದೆ. ಡೊನಾಲ್ಡ್ ಟ್ರಂಪ್ ಅವರ ನಿವ್ವಳ ಆಸ್ತಿಯ ಮೌಲ್ಯ 2.3 ಬಿಲಿಯನ್ ಡಾಲರ್‌ನಿಂದ 5.1 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಅಂದ್ರೆ ಒಂದೇ ವರ್ಷದಲ್ಲಿ ಡೊನಾಲ್ಡ್ ಟ್ರಂಪ್ ಸಂಪತ್ತು ಡಬಲ್ ಆಗಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ 700ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.
ಆಸ್ತಿ ಹೆಚ್ಚಳ ಆಗಿದ್ದು ಹೇಗೆ?
ಮಾರ್ಚ್-2024ರಲ್ಲಿ ಟ್ರಂಪ್ ಮೀಡಿಯಾ & ಟೆಕ್ನಾಲಜಿ ಗ್ರೂಪ್ Trump Media & Technology Group (TMTG) ಪಬ್ಲಿಕ್ ಆಗಿತ್ತು. ಈ ಕಂಪನಿ ಒಡೆತನದ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂ ಟ್ರುತ್ ಸೋಶಿಯಲ್‌ನ ಷೇರುಗಳು ಬೆಲೆಯಲ್ಲಿ ಏರಿಕೆಯಾಗಿತ್ತು. 2024ರಲ್ಲಿ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ಟ್ರಂಪ್ ಅವರ ನಿವ್ವಳ ಮೌಲ್ಯ $865 ಮಿಲಿಯನ್ ಹೆಚ್ಚಾಗಿತ್ತು. ಚುನಾವಣೆಗೂ ಮುನ್ನವೇ ಷೇರುಗಳ ಬೆಲೆಯಲ್ಲಿ ಶೇ.200ರಷ್ಟು ಏರಿಕೆಯಾಗಿತ್ತು. ಜನವರಿ 2025ರಲ್ಲಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮತ್ತೊಮ್ಮೆ ಈ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿತ್ತು.
ಕ್ರಿಪ್ಟೋಕರೆನ್ಸಿಯಲ್ಲಿ ವ್ಯವಹಾರ
ಡೊನಾಲ್ಡ್ ಟ್ರಂಪ್ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿಯೂ ಹೂಡಿಕೆ ಮಾಡಿದ್ದಾರೆ. ಟ್ರಂಪ್‌ಕಾಯಿನ್ ಪ್ರಾರಂಭಿಸಿರುವ ಡೊನಾಲ್ಡ್ ಟ್ರಂಪ್ ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್‌ನಲ್ಲಿ ದೊಡ್ಡ ಪಾಲುದಾರಿಕೆಯನ್ನು ಹೊಂದಿದ್ದಾರೆ. ಟ್ರಂಪ್ ಕುಟುಂಬವು ಈ ಕ್ರಿಪ್ಟೋ ಟೋಕನ್‌ನಿಂದ 75% ಲಾಭವನ್ನು ಪಡೆದುಕೊಂಡಿದೆ. ಡಿಸೆಂಬರ್ 2024 ರಲ್ಲಿ, ಟ್ರಂಪ್ $114.75 ಮಿಲಿಯನ್ ಮೌಲ್ಯದ TMTG ಷೇರುಗಳನ್ನು ಡೊನಾಲ್ಡ್ ಜೆ. ಟ್ರಂಪ್ ರಿವೊಕಬಲ್ ಟ್ರಸ್ಟ್‌ಗೆ (Donald J. Trump Revocable Trust) ಹಾಕಿದ್ದಾರೆ. ಇದನ್ನು ಡೊನಾಲ್ಡ್ ಟ್ರಂಪ್ ಮಗ ನಿರ್ವಹಣೆ ಮಾಡುತ್ತಾರೆ.
ಇದನ್ನೂ ಓದಿ: ಅಮೆರಿಕದ ಶಿಕ್ಷಣ ಇಲಾಖೆಯನ್ನೇ ಮುಚ್ಚಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಟ್ರಂಪ್ ಸರ್ಕಾರದಲ್ಲಿ ಶತಕೋಟ್ಯಾಧಿಪತಿಗಳು
ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ . 10 ಕ್ಕೂ ಹೆಚ್ಚು ಶತಕೋಟ್ಯಾಧಿಪತಿಗಳಿದ್ದಾರೆ. ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಎಲಾನ್ ಮಸ್ಕ್ ಸೇರಿದಂತೆ ಹಲವರ ಆಸ್ತಿಯ ವಿವರ ಈ ಕೆಳಗಿನಂತಿದೆ.
ಎಲಾನ್ ಮಸ್ಕ್ : $342 ಬಿಲಿಯನ್ (ಟೆಸ್ಲಾ, ಸ್ಪೇಸ್‌ಎಕ್ಸ್, xAI)
ಮಾರ್ಕ್ ಜುಕರ್‌ಬರ್ಗ್ : $216 ಬಿಲಿಯನ್ (ಮೆಟಾ)
ಜೆಫ್ ಬೆಜೋಸ್ : $215 ಬಿಲಿಯನ್ (ಅಮೆಜಾನ್)
ಲ್ಯಾರಿ ಎಲಿಸನ್ : $192 ಬಿಲಿಯನ್ (ಒರಾಕಲ್)
ಬರ್ನಾರ್ಡ್ ಅರ್ನಾಲ್ಟ್ : $178 ಬಿಲಿಯನ್ (LVMH)
ಇದನ್ನೂ ಓದಿ: ಸೇನಾ ನೆರವು ಸಾಲವಲ್ಲ, ಒಂದು ಪೈಸೆ ಕೂಡ ವಾಪಾಸ್ ನೀಡೋದಿಲ್ಲ: ಅಮೆರಿಕಕ್ಕೆ ಸಡ್ಡು ಹೊಡೆದ ಝೆಲೆನ್ಸ್ಕಿ!