ಡೋನಾಲ್ಡ್ ಟ್ರಂಪ್ ಸರ್ಕಾರದ DOGE ಹುದ್ದೆಯಲ್ಲಿದ್ದ ಆಪ್ತ ಎಲಾನ್ ಮಸ್ಕ್‌ಗೆ ಕೊಕ್ ನೀಡಲಾಗುತ್ತಿದೆಯಾ? ಹೌದು ಎನ್ನುತ್ತಿದೆ ಸರ್ಕಾರದ ಮೂಲಗಳು. ಕಾರಣವೇನು?
ವಾಶಿಂಗ್ಟನ್(ಏ.02) ಅಮೆರಿಕದ ಅಧ್ಯಕ್ಷನಾಗಿ 2ನೇ ಬಾರಿಗೆ ಅಧಿಕರವಹಿಸಿಕೊಂಡ ಡೋನಾಲ್ಡ್ ಟ್ರಂಪ್ ಹಲವು ಆಪ್ತರಿಗೆ ಸರ್ಕಾರದಲ್ಲಿ ಮಹತ್ತರ ಜವಾಬ್ದಾರಿ ನೀಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಟ್ರಂಪ್ ಆತ್ಮೀಯ ಎಲಾನ್ ಮಸ್ಕ್‌ಗೆ DOGE ಮುಖ್ಯಸ್ಥನಾಗಿ ನೇಮಕ ಮಾಡಿದ್ದರು. ಆದರೆ ಇದೀಗ DOGE ಸ್ಥಾನದಿಂದ ಎಲಾನ್ ಮಸ್ಕ್ ಕೊಕ್ ನೀಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ಅಮೆರಿಕದ ಪೊಲಿಟಿಕೋ ಮಾಧ್ಯಮ ವರದಿ ಮಾಡಿದೆ.
ಟ್ರಂಪ್ ಸರ್ಕಾರ ರಚನೆಯಾಗುತ್ತಿದ್ದಂತೆ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್‌ಗೆ ಸರ್ಕಾರದಲ್ಲಿ ಪ್ರಮುಖ ಸ್ಥಾನ ನೀಡಿದ್ದಾರೆ. ಮುಖ್ಯವಾಗಿ ಅಮೆರಿಕ ಸರ್ಕಾರ ಅನಗತ್ಯವಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಉಳಿಸಲು, ಅನಗತ್ಯ ಯೋಜನೆಗಳನ್ನು ಕಡಿತಗೊಳಿಸಲು, ಸರ್ಕಾರದ ಅನಗತ್ಯ ಉದ್ಯೋಗ-ಹುದ್ದೆ ಕಡಿತಗೊಳಿಸುವಿಕೆ, ಕೆಲ ಅನಗತ್ಯ ಎಜೆನ್ಸಿಗಳ ಸೇವೆ ಅಂತ್ಯಗೊಳಿಸಲು ಎಲಾನ್ ಮಸ್ಕ್ ಗೆ ಜವಾಬ್ದಾರಿ ನೀಡಲಾಗಿತ್ತು. ಇದರಂತೆ ಎಲಾನ್ ಮಸ್ಕ್ ಆಗಾಗಲೇ ಹಲವು ಮಾರ್ಪಡು ಮಾಡಿದ್ದಾರೆ. ಜೊತೆಗೆ ಮತ್ತಷ್ಟು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ನಮಗೆ ಕಾಣದ ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಅದ್ಭುತ ವಿಡಿಯೋ ಸೆರೆ
ಇತ್ತೀಚೆಗೆ ಎಲಾನ್ ಮಸ್ಕ್ ಹಾಗೂ ಡೋನಾಲ್ಡ್ ಟ್ರಂಪ್ ಮಹತ್ದ ಮಾತುಕತೆ ನಡೆಸಿದ್ದಾರೆ ಎಂದು ಪೊಲಿಟಿಕೋ ವರದಿ ಮಾಡಿದೆ. ಈ ವರದಿ ಪ್ರಕಾರ, ಎಲಾನ್ ಮಸ್ಕ್ ಟ್ರಂಪ್ ಸರ್ಕಾರದ ಭಾಗವಾಗಿ ಹೆಚ್ಚು ದಿನ ಇರುವುದಿಲ್ಲ ಎಂದಿದೆ. ಶೀಘ್ರದಲ್ಲೇ ಎಲಾನ್ ಮಸ್ಕ್ ತಮ್ಮ ಉದ್ಯಮಕ್ಕೆ ಮರಳಲಿದ್ದಾರೆ ಎಂದಿದೆ. ಆದರೆ ಯಾವಾಗ ಅಥವಾ ನಿಖರ ಕಾರಣಗಳನ್ನು ಉಲ್ಲೇಖಿಸಿಲ್ಲ. ಈ ವರದಿ ಹಾಗೂ ಮಾತುಗಳ ಕುರಿತು ಎಲಾನ್ ಮಸ್ಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚೆಗೆ ಈ ಕುರಿತು ಟ್ರಂಪ್‌ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದರು. ಟ್ರಂಪ್ ಸರ್ಕಾರದಲ್ಲಿ ಎಲಾನ್ ಮಸ್ಕ್ ಸುದೀರ್ಘ ಅವಧಿ ವರೆಗೆ ಸರ್ಕಾರದ ಭಾಗವಾಗಿರುತ್ತಾರಾ ಎಂದು ಕೇಳಲಾಗಿತ್ತು. ಈ ವೇಳೆ ಉತ್ತರಿಸಿದ ಟ್ರಂಪ್, ಎಲಾನ್ ಮಸ್ಕ್ ಉತ್ತಮ ವ್ಯಕ್ತಿ. ಆದರೆ ಎಲಾನ್ ಮಸ್ಕ್‌ಗೆ ಅತೀ ದೊಡ್ಡ ಕಂಪನಿ ನಿಭಾಯಿಸಬೇಕಿದೆ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಎಲಾನ್ ಮಸ್ಕ್ ಹೆಚ್ಚು ದಿನ ಸರ್ಕಾರದ ಭಾಗವಾಗಿರುವುದಿಲ್ಲ ಎಂದಿದ್ದರು.
130 ದಿನ ಅವಧಿ
ಎಲಾನ್ ಮಸ್ಕ್ ಟ್ರಂಪ್ ಸರ್ಕಾರದ ಭಾಗವಾಗುವ ಮೊದಲೇ 130 ದಿನ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕೇವಲ 130 ದಿನ ಮಾತ್ರ ಟ್ರಂಪ್ ಸರ್ಕಾರದಲ್ಲಿ ಮಹತ್ತರ ಜವಾಬ್ದಾರಿ ನಿರ್ವಹಿಸಲು ಅಧಿಕಾರ ನೀಡಲಾಗಿತ್ತು. ಇದೀಗ ಅವಧಿ ಅಂತ್ಯಗೊಳ್ಳುತ್ತಿದೆ. ಮೊದಲೇ ನಿಗದಿಪಡಿಸಿದಂತೆ ಎಲಾನ್ ಮಸ್ಕ್ ತಮ್ಮ ಉದ್ಯಮದತ್ತ ಮರಳಲಿದ್ದಾರೆ.
ಎಲಾನ್ ಮಸ್ಕ್‌ರಂತೆ ಬಿಲೇನಿಯರ್ ಆಗಲು ಇಲ್ಲಿವೆ 5 ಸಿಂಪಲ್ ಟಿಪ್ಸ್!