ಜಿಡಿಪಿ ಆಧಾರಿತ ವಿಶ್ವದ ಪ್ರಬಲ ರಾಷ್ಟ್ರಗಳ ಫೋರ್ಬ್ಸ್ ಪಟ್ಟಿ ಬಿಡುಗಡೆ, ಭಾರತಕ್ಕೆ ಏಷ್ಟನೇ ಸ್ಥಾನ?

Published : Feb 05, 2025, 09:26 PM ISTUpdated : Feb 05, 2025, 09:27 PM IST
ಜಿಡಿಪಿ ಆಧಾರಿತ ವಿಶ್ವದ ಪ್ರಬಲ ರಾಷ್ಟ್ರಗಳ ಫೋರ್ಬ್ಸ್ ಪಟ್ಟಿ ಬಿಡುಗಡೆ, ಭಾರತಕ್ಕೆ ಏಷ್ಟನೇ ಸ್ಥಾನ?

ಸಾರಾಂಶ

ಜಿಡಿಪಿ, ಜನಸಂಖ್ಯೆ ಸೇರಿದಂತೆ ಇತರ ಕೆಲ ಮಾನದಂಡ ಪ್ರಕಾರ ಫೋರ್ಬ್ಸ್ ಇದೀಗ ವಿಶ್ವದ ಪ್ರಬಲ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? 

ನವದೆಹಲಿ(ಫೆ.05) ಜಿಡಿಪಿ, ಜನಸಂಖ್ಯೆ ಸೇರಿದಂತೆ ಇತರ ಕೆಲ ಪ್ರಮುಖ ಮಾನದಂಡಗಳ ಆಧಾರದಲ್ಲಿ ಫೋರ್ಬ್ಸ್ ಇದೀಗ ವಿಶ್ವದ ಪ್ರಬಲ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಟಾಪ್ 10 ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಇಸ್ರೇಲ್ 10ನೇ ಸ್ಥಾನದಲ್ಲಿದೆ. 30.34 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದೆ. ಆದರೆ ವಿಶ್ವದ 5ನೇ ಅತೀದೊಡ್ಡ ಆರ್ಥಿಕತೆ ಹಾಗೂ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಭಾರತ ವಿಶ್ವದ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದೆ. 

2025ರ ಅತಿ ಪ್ರಬಲ ರಾಷ್ಟ್ರಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಅಂತರರಾಷ್ಟ್ರೀಯ ಮೈತ್ರಿಗಳು ಮತ್ತು ಸೇನಾ ಬಲ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಈ ಶ್ರೇಯಾಂಕವನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ ಮತ್ತು ಇಸ್ರೇಲ್ ಹತ್ತನೇ ಸ್ಥಾನದಲ್ಲಿದೆ. ಯುಎಸ್ ನ್ಯೂಸ್ & ವರ್ಲ್ಡ್ ರಿಪೋರ್ಟ್ ಜೊತೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯ ಪ್ರಾಧ್ಯಾಪಕ ಡೇವಿಡ್ ರೀಬ್‌ಸ್ಟೈನ್ ನೇತೃತ್ವದ ಬಿಎವಿ ಗ್ರೂಪ್ ಸಂಶೋಧಕರು ಈ ಶ್ರೇಯಾಂಕವನ್ನು ನೀಡಿದ್ದಾರೆ.

ಅತಿ ಹೆಚ್ಚು ಬಿಲಿಯನೇರ್‌ಗಳು ಇರುವ ಟಾಪ್ 10 ದೇಶಗಳು; ಭಾರತದ ಸ್ಥಾನ ಎಷ್ಟು?

30.34 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 34.5 ಕೋಟಿ ಜನಸಂಖ್ಯೆಯೊಂದಿಗೆ ಯುಎಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 19.53  ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 1.419 ಶತಕೋಟಿ ಜನಸಂಖ್ಯೆಯೊಂದಿಗೆ ಚೀನಾ ಎರಡನೇ ಅತಿ ಪ್ರಬಲ ರಾಷ್ಟ್ರವಾಗಿದೆ. 2.2 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 14.38 ಕೋಟಿ ಜನಸಂಖ್ಯೆಯೊಂದಿಗೆ ರಷ್ಯಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 3.73 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 6.9 ಕೋಟಿ ಜನಸಂಖ್ಯೆಯೊಂದಿಗೆ ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್) ಈ ವರ್ಷ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 4.92 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು 8.54 ಕೋಟಿ ಜನಸಂಖ್ಯೆಯೊಂದಿಗೆ ಜರ್ಮನಿ ಐದನೇ ಸ್ಥಾನದಲ್ಲಿದ್ದರೆ,1.95 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 5.17 ಕೋಟಿ ಜನಸಂಖ್ಯೆಯೊಂದಿಗೆ ದಕ್ಷಿಣ ಕೊರಿಯಾ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

3.28 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 6.65 ಕೋಟಿ ಜನಸಂಖ್ಯೆಯೊಂದಿಗೆ ಫ್ರಾನ್ಸ್ ಏಳನೇ ಸ್ಥಾನದಲ್ಲಿದ್ದರೆ, 4.39 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 12.37 ಕೋಟಿ ಜನಸಂಖ್ಯೆಯೊಂದಿಗೆ ಜಪಾನ್ ಎಂಟನೇ ಸ್ಥಾನದಲ್ಲಿದೆ. 1.14 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 3.39 ಕೋಟಿ ಜನಸಂಖ್ಯೆಯೊಂದಿಗೆ ಸೌದಿ ಅರೇಬಿಯಾ ಒಂಬತ್ತನೇ ಸ್ಥಾನದಲ್ಲಿದೆ. ಈ ವರ್ಷ ಪಟ್ಟಿಯಲ್ಲಿ ಇಸ್ರೇಲ್ ಹತ್ತನೇ ಸ್ಥಾನದಲ್ಲಿದೆ. 550.91 ಬಿಲಿಯನ್ ಶತಕೋಟಿ ಡಾಲರ್ ಜಿಡಿಪಿ ಮತ್ತು 93.8 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಇಸ್ರೇಲ್. ಈ ಪಟ್ಟಿಯಲ್ಲಿ ಭಾರತ12ನೇ ಸ್ಥಾನದಲ್ಲಿದೆ. ಭಾರತದ ಜಿಡಿಪಿ 3.55 ಟ್ರಿಲಿಯನ್ ಡಾಲರ್ ಮತ್ತು ಜನಸಂಖ್ಯೆ 1.43 ಶತಕೋಟಿ.

30 ವರ್ಷದೊಳಗಿನ 30 ಪೋರ್ಬ್ಸ್ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರಿನ ಐವರಿಗೆ ಸ್ಥಾನ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!