205 ಅಕ್ರಮ ವಲಸಿಗರನ್ನು ಭಾರತಕ್ಕೆ ಕಳಿಸಿದ ಅಮೆರಿಕ: ನಮ್ಮ ವಿರೋಧವಿಲ್ಲ ಎಂದ ಇಂಡಿಯಾ!

Published : Feb 05, 2025, 07:03 AM IST
205 ಅಕ್ರಮ ವಲಸಿಗರನ್ನು ಭಾರತಕ್ಕೆ ಕಳಿಸಿದ ಅಮೆರಿಕ: ನಮ್ಮ ವಿರೋಧವಿಲ್ಲ ಎಂದ ಇಂಡಿಯಾ!

ಸಾರಾಂಶ

ಭಾರತವು ಅಕ್ರಮ ವಲಸೆಯನ್ನು ವಿರೋಧಿಸುತ್ತದೆ. ಯಾಕೆಂದರೆ ಅದು ಹಲವು ಸಂಘಟಿತ ಅಪರಾಧಗಳ ಜತೆಗೆ ತಳಕು ಹಾಕಿಕೊಂಡಿರುತ್ತದೆ ಎಂದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್

ನವದೆಹಲಿ(ಫೆ.05): ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸರ್ಕಾರ, ಅದರ ಭಾಗವಾಗಿ ಇದೀಗ ಭಾರತೀಯ ಮೂಲದ ಅಕ್ರಮ ನಿವಾಸಿಗಳನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವ ಕಾರಕ್ಕೆ ಚಾಲನೆ ನೀಡಿದೆ.

ಸೂಕ್ತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿದ್ದ 205 ಮಂದಿ ಭಾರತೀ ಯರನ್ನು ಅಮೆರಿಕದ ಸ್ಯಾನ್ ಆ್ಯಂಟಾನಿಯೋ ವಿಮಾನ ನಿಲ್ದಾಣದಿಂದ ಸಿ-17 ಮಿಲಟಿರಿ ವಿಮಾನದ ಮೂಲಕ ಭಾರತಕ್ಕೆ ಕಳುಹಿಸಿಕೊಡಲಾಗಿದೆ. 
ಪ್ರತಿಯೊಬ್ಬರ ದಾಖಲೆಗಳನ್ನು ಸ್ಪಷ್ಟವಾಗಿ ಪರಿಶೀಲಿಸಿದ ಬಳಿಕವೇ ಅವರನ್ನು ವಾಪಸ್ ಕಳುಹಿಸಿಕೊಡಲಾಗಿದೆ. ಅಕ್ರಮ ವಲಸಿಗರು ಇರುವ ವಿಮಾನವು ಮಾರ್ಗ ಮಧ್ಯೆ ಜರ್ಮನಿಯ ರಾಮ್‌ಸ್ಟೈನ್‌ನಲ್ಲಿ ಇಂಧನಕ್ಕಾಗಿ ಕೆಲಕಾಲ ತಂಗಲಿದ್ದು, ಬಳಿಕ ನೇರವಾಗಿ ಪಂಜಾಬ್‌ನಲ್ಲಿ ಬಂದಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ರಾಯಭಾರ ಕಚೇರಿ ಈ ಬೆಳವಣಿಗೆಯನ್ನು ಖಚಿತಪಡಿಸಲು ನಿರಾಕರಿಸಿದೆ. ಆದರೆ ಅಮೆರಿಕವು ತನ್ನ ವಲಸೆ ನೀತಿಯನ್ನು ಕಠಿಣಗೊಳಿಸುತ್ತಿದೆ, ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸಿಕೊಡುತ್ತಿದೆ ಎಂದಷ್ಟೇ ಹೇಳಿದೆ. ಪ್ರತಿ ವರ್ಷವೂ ಅಮೆರಿಕ ಅಕ್ರಮ ವಲಸಿಗರನ್ನು ಅವರವರ ತವರು ರಾಜ್ಯಕ್ಕೆ ಕಳುಹಿಸಿ ಕೊಡುತ್ತಿದೆಯಾದರೂ, ಟ್ರಂಪ್ 2ನೇ ಬಾರಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತೀಯರನ್ನು ತವರಿಗೆ ಕಳುಹಿಸುತ್ತಿದೆ.

18000 ಭಾರತೀಯರ ಪಟ್ಟಿ: 

ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಗಡೀಪಾರು ಪ್ರಕ್ರಿಯೆಯನ್ನು ಟ್ರಂಪ್ ಸರ್ಕಾರ ಆರಂಭಿಸಿದೆ. ಒಟ್ಟಾರೆ 1.5 ದಶಲಕ್ಷ ಮಂದಿಯನ್ನು ಗಡೀಪಾರು ಮಾಡಲು ಅಮೆರಿಕ ನಿರ್ಧರಿಸಿದ್ದು, 18 ಸಾವಿರ ಭಾರತೀಯ ಅಕ್ರಮ ವಲಸಿಗರ ಪ್ರಾಥಮಿಕ ಪಟ್ಟಿಯೂ ಇದರಲ್ಲಿದೆ.

ಅಮೆರಿಕದಲ್ಲಿ 7.25 ಲಕ್ಷ ಮಂದಿ ಭಾರತೀಯರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು ಮೆಕಿಕೋ, ಇಎಲ್ ಸಾಲ್ವೆಡಾರ್ ಬಳಿಕದ ಅತಿದೊಡ್ಡ ಅಕ್ರಮ ನಿವಾಸಿಗಳ ಸಂಖ್ಯೆ ಭಾರತೀಯರದ್ದಾಗಿದೆ.

ಭಾರತದ ವಿರೋಧ ಇಲ್ಲ: 

ಅಕ್ರಮ ನಿವಾಸಿಗಳನ್ನು ವಾಪಸ್ ಕಳುಹಿಸಿಕೊಡುವ ಅಮೆರಿಕದ ಕ್ರಮಕ್ಕೆ ಭಾರತದಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ನಮ್ಮ ದೇಶದ ಅಕ್ರಮ ನಿವಾಸಿಗಳನ್ನು ಸ್ವೀಕರಿಸಲು ಭಾರತ ಸಿದ್ದವಿದೆ ಎಂದು ಈಗಾಗಲೇ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.

ಭಾರತವು ಅಕ್ರಮ ವಲಸೆಯನ್ನು ವಿರೋಧಿಸುತ್ತದೆ. ಯಾಕೆಂದರೆ ಅದು ಹಲವು ಸಂಘಟಿತ ಅಪರಾಧಗಳ ಜತೆಗೆ ತಳಕು ಹಾಕಿಕೊಂಡಿರುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರೂ ಹೇಳಿದ್ದಾರೆ. ಸೂಕ್ತ ದಾಖಲೆಗಳನ್ನು ನೀಡಿದರೆರಾಷ್ಟ್ರೀಯತೆಯನ್ನು ಪರಿಶೀಲಿಸಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ತೆಗೆದುಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!