ಭಾರತ ಮಾತ್ರವಲ್ಲ, ವಿದೇಶದಲ್ಲೂ ಇದೇ ಗೋಳು; ಫ್ಲೋರಿಡಾ ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ!

By Suvarna NewsFirst Published Sep 10, 2021, 6:57 PM IST
Highlights
  • ಭಾರತದಲ್ಲಿ ರಸ್ತೆ ಗುಂಡಿ, ಡಾಂಬರು ಕಾಣದ ರಸ್ತೆ, ರಸ್ತೆ ಇಲ್ಲದ ಊರು ಸಾಮಾನ್ಯ
  • ಈ ಗೋಳು ಭಾರತದಲ್ಲಿ ಮಾತ್ರವಲ್ಲ,  ಮುಂದುವರಿದ ರಾಷ್ಟ್ರದಲ್ಲೂ ಇದೇ ಗೋಳು
  • ಅಮೆರಿಕದ ಖ್ಯಾತ ಫ್ಲೋರಿಡಾದಲ್ಲಿ ರಸ್ತೆ ಸರಿಪಡಿಸಲು ಪ್ರತಿಭಟನೆ
  • ಫ್ಲೋರಿಡಾ ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ವಿನೂತನ ಪ್ರತಿಭಟನೆ

ಫ್ಲೋರಿಡಾ(ಸೆ.10):  ಭಾರತದಲ್ಲಿ ರಸ್ತೆ ಗುಂಡಿಗಳು ಸಾಮಾನ್ಯ. ಭಾರತದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ನಡೆಯುತ್ತಿದೆ. ಆದರೂ ರಸ್ತೆ ಗುಂಡಿಗಳಿಗೇನು ಕಡಿಮೆ ಇಲ್ಲ. ಇದು ಭಾರತೀಯರ ಕರ್ಮ ಎಂದು ನಿರಾಸೆ ಪಡಬೇಕಿಲ್ಲ. ಈ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ಎಲ್ಲಾ ಮುಂದುವರಿದ ದೇಶಗಳಲ್ಲೂ ಸಮಸ್ಯೆ ಹಾಗೆ ಇದೆ. ಇದೀಗ ಅಮೆರಿಕದ ಫ್ಲೋರಿಡಾದಲ್ಲಿ ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ವಿಶೇಷ ಪ್ರತಿಭಟನೆ ನಡೆದಿದೆ.

ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!

ಫ್ಲೋರಿಡಾ ವ್ಯಕ್ತಿ ಬ್ರ್ಯಾನ್ ರೇಮಂಡ್ ದೊಡ್ಡ ದೊಡ್ಡ ಗುಂಡಿಗಳ ರಸ್ತೆಯಲ್ಲಿ ಪ್ರಯಾಣ ಮಾಡಿ ತಾಳ್ಮೆ ಕಳೆದುಕೊಂಡಿದ್ದಾನೆ. ರಸ್ತೆ ಸರಿಪಡಿಸಲು ಹಲವು ಮನವಿಗಳನ್ನು ಸಲ್ಲಿಸಿದ್ದಾನೆ. ಆದರೆ ಯಾವುದು ಪ್ರಯೋಜನವಾಗಿಲ್ಲ. ಹೀಗಾಗಿ ರಸ್ತೆಯಲ್ಲಿನ ದೊಡ್ಡ ದೊಡ್ಡ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾನೆ.

ಯಾವ ಗ್ರಹದ ಜೀವಿಗಳು.. ಬೆಂಗಳೂರಿಗೆ ಬಂದಿಳಿದ ಚಂದ್ರಯಾನಿಗಳು

ಫ್ಲೋರಿಡಾದ ಹೊಂಡಾ ಡ್ರೈವ್ ಖಾಸಗಿ ರಸ್ತೆ. ಫೋರ್ಟ್ ಮೆಯರ್ಸ್ ಅಧಿಕಾರಿಗಳು ಈ ರಸ್ತೆ ನಿರ್ವಹಣೆ ಮಾಡುತ್ತಾರೆ. ಆದರೆ ಪ್ರತಿ ದಿನ ಇದೇ ರಸ್ತೆಯಲ್ಲಿ ಸಾಗುವ ಬ್ರ್ಯಾನ್ ರೇಮೆಂಡ್ ಬೇಸತ್ತಿದ್ದಾನೆ. ತನ್ನ ಕಾರುಗಳು ರಸ್ತೆ ಗುಂಡಿಗಳಲ್ಲಿ ಬಿದ್ದು ಹಾಳಾಗಿದೆ. ಹಲವು ಅಪಘಾತಗಳು ಸಂಭವಿಸಿದೆ. ಹೀಗಾಗಿ ಬಾಳೆ ಗಿಡ ನೆಟ್ಟರೆ ಎಲ್ಲರ ಗಮನಕ್ಕೆ ಬರುತ್ತದೆ. ಇಷ್ಟೇ ಅಲ್ಲ ಪ್ರಯಾಣಿಕರು ಗುಂಡಿ ಇರುವುದನ್ನು ಗಮನಿಸಿ ಮುಂದೆ ಸಾಗಬಹುದು ಎಂದು ರೇಮಂಡ್ ಹೇಳಿದ್ದಾನೆ.

ಬಾಳೆ ಗಿಡಕ್ಕೆ ಯಾವುದೇ ವಾಹನ ಗುದ್ದಿದರೂ ಯಾರಿಗೂ ಸಮಸ್ಯೆ ಇಲ್ಲ. ಹೀಗಾಗಿ ಇದು ಅಧಿಕಾರಿಗಳ ಗಮನಸೆಳೆಯಲು ಉತ್ತಮ ಮಾರ್ಗ ಎಂದು ರೇಮೆಂಡ್  ಬಾಳೆ ಗಿಡ ಪ್ರತಿಭಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.

ಪೊಲೀಸರ ಸಹಾಯದಿಂದ 5300 ಗುಂಡಿ ಭರ್ತಿ

ಅಮೆರಿಕ ನಿವಾಸಿಗಳಿಗೆ ಇದು ವಿನೂತನ ಪ್ರತಿಭಟನೆ ಆಗಿರಬಹುದು. ಆದರೆ ಭಾರತಕ್ಕೆ ಇದರಲ್ಲಿ ವಿಶೇಷತೆ ಇಲ್ಲ. ಕಾರಣ ರಸ್ತೆ ಗುಂಡಿಯಲ್ಲಿ ಬಾಳೆ ಗಿಡ, ಭತ್ತ ನಾಟಿ, ತೆಪ್ಪ ಸವಾರಿ, ಚಂದ್ರಲೋಕ ಪ್ರಯಾಣ ಸೇರಿದಂತೆ ಹಲವು ವಿಶಿಷ್ಠ ಪ್ರತಿಭಟನೆಗಳು ಭಾರತದಲ್ಲಿ ನಡೆದಿದೆ. ಆದರೆ ಭಾರತ ಆಗಿರಲಿ, ವಿದೇಶವೇ ಆಗಿರಲಿ ಸಮಸ್ಯೆ ಹಾಗೂ ಪ್ರತಿಭಟನೆ ರೀತಿ ಒಂದೇ ಆಗಿದೆ.

click me!