
ಇಟಲಿಯಿಂದ ಆಸ್ಟ್ರೇಲಿಯಾಕ್ಕೆ ಹೋಗಬೇಕಿದ್ದ ವಿಮಾನ 'ಕ್ವಾಂಟಾಸ್' ಹಾರಾಟ ತಿಗಣೆಕಾಟದಿಂದ ರದ್ದಾಗಿದೆ. ಶನಿವಾರ ಈ ಘಟನೆ ನಡೆದಿದ್ದು, ಇದಕ್ಕೂ ಒಂದು ದಿನ ಮುನ್ನ ರೋಮ್ನಿಂದ ಬಂದಿದ್ದ ಈ ವಿಮಾನದಲ್ಲಿ 17 ಗಂಟೆಗಳ ಪ್ರಯಾಣದ ಸಮಯದಲ್ಲಿ ಕೆಲವು ಪ್ರಯಾಣಿಕರು ತಮಗೆ ತಿಗಣೆಗಳು ಕಚ್ಚಿದೆ ಎಂದು ದೂರು ನೀಡಿದ್ದರು ಎಂದು ಸಿಡ್ನಿ ಮಾರ್ನಿಂಗ್ ವರದಿ ಮಾಡಿದೆ.
ಇದರೊಂದಿಗೆ ತಿಗಣೆ ಕಡಿತದಿಂದ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಬೇಕಿದ್ದ ಔಷಧಿಗಳು ಖಾಲಿಯಾಗಿತ್ತು. ಕ್ವಾಂಟಾಸ್ ಏರ್ಲೈನ್ಸ್ ನಡೆಸುತ್ತಿರುವ ಈ ಬೋಯಿಂಗ್ 787 ಡ್ರಿಮ್ ಲೈನರ್ ವಿಮಾನವನ್ನು 'ಡೀಪ್ ಕ್ಲೀನ್' ಮಾಡಲು ವಿಮಾನ ಸಂಸ್ಥೆ ಕಳುಹಿಸಿತ್ತು.
ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣ ಮಾಡಿದ್ದ ಕೆಲವು ಪ್ರಯಾಣಿಕರಿಗೆ ತಿಗಣೆ ಸಮಸ್ಯೆ ಎದುರಾಗಿತ್ತು. ಇದರಿಂದ ವಿಮಾನಯಾನ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಕ್ಲೀನ್ ಮಾಡಲು ಕಾರ್ಯಾಚರಣೆ ಮಾಡಿತ್ತು. ಇದರೊಂದಿಗೆ ಶನಿವಾರ ನಿಗದಿಯಾಗಿದ್ದ ರೋಮ್ ಹಾಗೂ ಪರ್ತ್ ನಡುವಿನ ಜರ್ನಿಯನ್ನು ರದ್ದು ಪಡಿಸಲಾಗಿದೆ.
ಇನ್ನು, ವಿಮಾನ ರದ್ದಾದ ಪ್ರರಿಣಾಮ ಸಮಸ್ಯೆ ಎದುರಿಸಿದ ಪ್ರಯಾಣಿಕರಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಮುಂದಿನ 48 ಗಂಟೆಯಲ್ಲಿ ಅವರಿಗೆ ಬೇರೆ ವಿಮಾನ ಸಿದ್ಧಪಡಿಸಲಾಗಿತ್ತು ಎಂದು ಕ್ವಾಂಟಾಸ್ ಹೇಳಿದೆ.
ತಿಗಣೆ ಸಣ್ಣ ಕೀಟ ಆಗಿದ್ದು, ರೆಕ್ಕೆಗಳು ಇರೋದಿಲ್ಲ. ಆದರೆ ಪರಾವಲಂಬಿಯಾಗಿರುವ ಈ ಕೀಟಗಳು, ಬಟ್ಟೆ, ಟೇಬಲ್, ಹಾಸಿಗೆ ಸೇರಿದಂತೆ ಹಲವು ಕಡೆ ಆಶ್ರಮ ಪಡೆದುಕೊಂಡು ಜೀವಿಸುತ್ತವೆ. ಅವು ಕಚ್ಚಿದ ಸ್ಥಳದಲ್ಲಿ ಹುರಿ ಕಂಡು ಬರುತ್ತದೆ. ಅಲ್ಲದೇ ತೀವ್ರ ಅನಾರೋಗ್ಯ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಬ್ರಿಟನ್ ಮೂಲದ ನ್ಯಾಷನಲ್ ಹೆಲ್ತ್ ಸರ್ವೀಸ್ ತಿಳಿಸಿದೆ.
ತಿಗಣೆಗಳ ನಿವಾರಣೆ ಬಹಳ ಕಷ್ಟ ಸಾಧ್ಯವಾದ ಕೆಲಸವಾಗಿದೆ. ಅಲ್ಲದೇ ವೈಜ್ಞಾನಿಕವಾಗಿ ಅವುಗಳನ್ನು ನಿವಾರಣೆ ಮಾಡಲು ಭಾರೀ ಪ್ರಮಾಣ ಹಣ ಖರ್ಚಾಗುತ್ತದೆ. ಮನೆಗಳಲ್ಲಿ ತಿಗಣೆ ಕಾಣಿಸಿಕೊಂಡರೆ, ಅಂತಹ ಬಟ್ಟೆ, ಹಾಸಿಗೆ, ಕರ್ಟನ್ಗಳನ್ನು ಬಿಸಿ ನೀರಿನಲ್ಲಿ ತೊಳೆದು ಬಿಸಿನಲ್ಲಿ ಒಣಗಿಸಬೇಕಾಗುತ್ತದೆ. ಮತ್ತೊಂದು ವಿಧಾನ ಎಂದರೆ, ಬಟ್ಟೆಗಳನ್ನು ಒಂದು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ, ಅದನ್ನು ಫೀಜರ್ನಲ್ಲಿ ಮೂರ್ನಾಲ್ಕು ದಿನಗಳಿಟ್ಟರೆ ಅವು ಸಾವನ್ನಪ್ಪುತ್ತದೆ. ಅಂದಹಾಗೇ, ವಿಮಾನಗಳಲ್ಲಿ ತಿಗಣೆಕಾಟದಿಂದ ಹಾರಾಟ ರದ್ದಾಗಿರೋದು ಇದೇ ಮೊದಲೇನು ಇಲ್ಲ. ಈ ಹಿಂದೆಯೂ ಹಲವು ಭಾರೀ ತಿಗಣೆ ಕಾಟದಿಂದಲೇ ವಿಮಾನ ಹಾರಾಟ ರದ್ದಾದ ಪ್ರಸಂಗಳು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ