World’s Dirtiest Man: 67 ವರ್ಷದಿಂದ ಸ್ನಾನ ಬಿಟ್ಟಿದ್ದ ವ್ಯಕ್ತಿ ಸ್ನಾನ ಮಾಡಿದ ಬಳಿಕ ಸಾವು!

Published : Oct 26, 2022, 09:43 AM ISTUpdated : Oct 26, 2022, 09:51 AM IST
World’s Dirtiest Man: 67 ವರ್ಷದಿಂದ ಸ್ನಾನ ಬಿಟ್ಟಿದ್ದ ವ್ಯಕ್ತಿ ಸ್ನಾನ ಮಾಡಿದ ಬಳಿಕ ಸಾವು!

ಸಾರಾಂಶ

ಯಾಕಪ್ಪಾ ನೀನು ಇಷ್ಟು ವರ್ಷ ಸ್ನಾನ ಮಾಡಿಲ್ಲ ಅಂತ ಕೇಳಿದ್ರೆ, ಈತ ಹೇಳುತ್ತಿದ್ದದ್ದು ಒಂದೇ ಉತ್ತರ. ಸ್ನಾನ ಮಾಡಿದ್ರೆ ಆರೋಗ್ಯ ಕೆಡುತ್ತೆ ಅನ್ನೋದು. ಮೊದಲ ಬಾರಿಗೆ ಸ್ನಾನ ಮಾಡಿದ ಕೆಲತಿಂಗಳ ಬಳಿಕ ಮೃತಪಟ್ಟಿದ್ದಾನೆ. 

ಇರಾನ್‌: ಸ್ನಾನ ಮಾಡಿದರೆ ಕಾಯಿಲೆ ಬೀಳುತ್ತೇನೆ ಎಂದು ಕಳೆದ 67 ವರ್ಷದಿಂದ ಸ್ನಾನ ಮಾಡುವುದನ್ನು ಬಿಟ್ಟಿದ್ದ, ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಎಂಬ ಕುಖ್ಯಾತಿ ಹೊಂದಿದ್ದ ಇರಾನ್‌ನ ಅಮೌ ಹಾಜಿ (94) ಎಂಬಾತ ಸಾವನ್ನಪ್ಪಿದ್ದಾನೆ. ವಿಚಿತ್ರವೆಂದರೆ, ಇತ್ತೀಚೆಗಷ್ಟೇ ಈತನನ್ನು ಗ್ರಾಮಸ್ಥರು ಕಾಡಿನಿಂದ ಕರೆತಂದು ಬಲವಂತವಾಗಿ ಸ್ನಾನ ಮಾಡಿಸಿದ್ದರು. ಅದಾದ ಕೆಲ ತಿಂಗಳುಗಳಲ್ಲೇ ಆತ ಸಾವನ್ನಪ್ಪಿದ್ದಾನೆ.

ಏಕಾಂಗಿ ವಾಸ:
ಬಾಲ್ಯದಲ್ಲಿ ಮನೆಯಲ್ಲಿ ಯಾವುದೋ ಕಾರಣಕ್ಕೆ ಜಗಳವಾಗಿ ಹಾಜಿ, ಮನೆ ಬಿಟ್ಟು ಕಾಡಿಗೆ ತೆರಳಿದ್ದ. ಬಳಿಕ ಅಲ್ಲೇ ಗುಹೆಯ ರೀತಿಯ ಸ್ಥಳದಲ್ಲಿ ವಾಸ ಮಾಡಲು ಆರಂಭಿಸಿದ್ದ. ಅಂದಿನಿಂದಲೂ ಸ್ನಾನ ಮಾಡುವುದನ್ನು ಬಿಟ್ಟಿದ್ದ ಈತ, ಕಾಡುಪ್ರಾಣಿಗಳ ಕೊಳೆತ ಮಾಂಸವನ್ನೇ ಆಹಾರವಾಗಿ ಸೇವಿಸುತ್ತಿದ್ದ. ತುಕ್ಕು ಹಿಡಿದ ಡಬ್ಬಿಯಿಂದ ದಿನಕ್ಕೆ 5 ಲೀಟರ್‌ ನೀರು ಕುಡಿಯುತ್ತಿದ್ದ. ಕೂದಲು ಉದ್ದ ಬೆಳೆದರೆ ಬೆಂಕಿಯಿಂದ ಸುಟ್ಟು ಟ್ರಿಮ್‌ ಮಾಡಿಕೊಳ್ಳುತ್ತಿದ್ದ. ಚಳಿ, ಬಿಸಿಲಿನಿಂದ ರಕ್ಷಣೆಗೆ ಹಳೆಯ ಹೆಲ್ಮೆಟ್‌ ಧರಿಸುತ್ತಿದ್ದ. ಮೈಗೆ ಬೂದಿ ಬಳಿದುಕೊಂಡಿರುತ್ತಿದ್ದ. ಪ್ರಾಣಿಗಳ ಮಲವನ್ನೇ ಸುಟ್ಟು ಅದನ್ನೇ ಸಿಗರೇಟ್‌ ರೀತಿ ಸೇದಿ ಆನಂದಿಸುತ್ತಿದ್ದ. ಹೀಗಾಗಿ ಈತನನ್ನು ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಎಂದೇ ಕರೆಯಲಾಗುತ್ತಿತ್ತು.

ಇದನ್ನು ಓದಿ: ಅಬ್ಬಾ ಈ ಮನುಷ್ಯ 60 ವರ್ಷಗಳಿಂದ ಸ್ನಾನವೇ ಮಾಡಿಲ್ವಂತೆ..!!

ಯಾಕಪ್ಪಾ ನೀನು ಇಷ್ಟು ವರ್ಷ ಸ್ನಾನ ಮಾಡಿಲ್ಲ ಅಂತ ಕೇಳಿದ್ರೆ, ಈತ ಹೇಳುತ್ತಿದ್ದದ್ದು ಒಂದೇ ಉತ್ತರ. ಸ್ನಾನ ಮಾಡಿದ್ರೆ ಆರೋಗ್ಯ ಕೆಡುತ್ತೆ ಅನ್ನೋದು. ಇಷ್ಟೇ ಅಲ್ಲ ಈತ ದಿನನಿತ್ಯ ಹೊಟ್ಟೆಗೆ ಏನ್ ತಿಂತಾನೆ ಅಂತ ಕೇಳಿದ್ರೆ ನೀವು ಭಯಪಡೋದು ಗ್ಯಾರಂಟಿ! ಇರಾನ್‌ನ ಹೈವೇ ರಸ್ತೆ ಬದಿಯಲ್ಲಿ ವಾಸಿಸುವ ಈತ ತಿನ್ನೋದು ಸತ್ತ, ಕೊಳೆತ ಪ್ರಾಣಿಗಳ ಹಸಿ ಮಾಂಸ.  

ರಸ್ತೆಯಲ್ಲಿ ವಾಹನಗಳ ಚಕ್ರಕ್ಕೆ ಸಿಲುಕಿ ಸತ್ತ ಪ್ರಾಣಿಗಳ ಮಾಂಸವೇ ಈತನ ನಿತ್ಯ ಆಹಾರ! 
ಮತ್ತೊಂದು ವಿಷ್ಯ ಅಂದ್ರೆ ಈತನಿಗೆ ಸಿಗರೇಟ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಜನರ ಬಳಿ ಸಿಗರೇಟ್ ಕೇಳಿ ಸೇದುವ ಈತನಿಗೆ ಕೆಲವೊಮ್ಮ ಸಿಗರೇಟ್ ಸಿಗೋದು ಕಷ್ಟ. ಈ ವೇಳೆ ಈ ಎಮೋ ಹಾಜಿ ಮಾಡೋದು ಇನ್ನೂ ವಿಚಿತ್ರ. ಈತ ದನ, ಕುದುರೆ, ಒಂಟೆಯ ಒಣಗಿದ ಸೆಗಣಿಯನ್ನೇ ಪುಡಿ ಮಾಡಿ ಸಿಗರೇಟಿನ ರೀತಿ ಮಾಡಿಕೊಂಡು ಸೇದುತ್ತಿದ್ದನಂತೆ. ಇಷ್ಟೆಲ್ಲ ಕೊಳಕಾಗಿದ್ರೂ ಈತನ ಆ ಒಂದು ಜೀವನ ಶೈಲಿ ಮಾತ್ರ ಆತನ ಆರೋಗ್ಯ ಕಾಪಾಡುವಂತೆ ಮಾಡಿತ್ತು. ಅದೇನೆಂದರೆ, ದೇಹಕ್ಕೆ ನೀರು ತಾಗಿಸದೇ ಇದ್ರೂ ನೀರನ್ನ ಮಾತ್ರ ಹೆಚ್ಚು ಕುಡಿಯುತ್ತಿದ್ದನಂತೆ ಈ ಅಮೌ ಹಾಜಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!