
ಲಂಡನ್: ಬ್ರಿಟನ್‌ನ (Britain) ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ (Liz Truss) ಅವರು ಮಾಡಿರುವ ತಪ್ಪುಗಳನ್ನು ಸರಿಪಡಿಸಲು ನನ್ನನ್ನು ಕನ್ಸರ್ವೇಟಿವ್ ಪಕ್ಷದ (Conservative Party) ನಾಯಕನಾಗಿ ಹಾಗೂ ದೇಶದ ಪ್ರಧಾನಿಯಾಗಿ (Prime Minister) ಆಯ್ಕೆ ಮಾಡಲಾಗಿದೆ. ಆ ಕೆಲಸವನ್ನು ತಕ್ಷಣದಿಂದಲೇ ಆರಂಭಿಸುತ್ತೇನೆ. ಆರ್ಥಿಕ ಸ್ಥಿರತೆ ಹಾಗೂ ವಿಶ್ವಾಸವನ್ನು ಬ್ರಿಟನ್ ಸರ್ಕಾರದ ಜೀವಾಳವನ್ನಾಗಿಸುತ್ತೇನೆ ಎಂದು ನೂತನ ಪ್ರಧಾನಿ ರಿಷಿ ಸುನಕ್ (Rishi Sunak) ಘೋಷಣೆ ಮಾಡಿದ್ದಾರೆ.
ಪ್ರಧಾನಿಯಾಗಿ ಪದಗ್ರಹಣ ಮಾಡಿದ ಬಳಿಕ ಪ್ರಧಾನಮಂತ್ರಿಗಳ ಅಧಿಕೃತ ನಿವಾಸ ‘10, ಡೌನಿಂಗ್ ಸ್ಟ್ರೀಟ್’ (10, Downing Street) ಹೊರಭಾಗದಲ್ಲಿ ಮಂಗಳವಾರ ಮಾತನಾಡಿದ ಅವರು, ಬ್ರಿಟನ್ ಅನ್ನು ಗಂಭೀರ ಆರ್ಥಿಕ ಬಿಕ್ಕಟ್ಟು ಕಾಡುತ್ತಿದೆ. ದಯೆಯೊಂದಿಗೆ ಅದನ್ನು ನಾನು ಎದುರಿಸುತ್ತೇನೆ. ಪ್ರಾಮಾಣಿಕತೆ, ವೃತ್ತಿಪರತೆ ಹಾಗೂ ಹೊಣೆಗಾರಿಕೆಯ ಸರ್ಕಾರವನ್ನು ಮುನ್ನಡೆಸುತ್ತೇನೆ. ಹಣಕಾಸು ಸಚಿವನಾಗಿದ್ದಾಗ ವಿವಿಧ ಯೋಜನೆಗಳ ಮೂಲಕ ಜನರು ಹಾಗೂ ಅವರ ಉದ್ಯಮಗಳನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೆ. ನಾವು ಇಂದು ಎದುರಿಸುತ್ತಿರುವ ಸವಾಲುಗಳಿಗೆ ಅದೇ ರೀತಿಯ ದಯಾ ಕ್ರಮಗಳನ್ನು ತರುತ್ತೇನೆ. ನಾವು ದುರ್ಬಲರಾಗಿದ್ದು, ನಮ್ಮಿಂದ ಪರಿಹರಿಸಲಾಗದು ಎಂದು ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಇದನ್ನು ಓದಿ: ರಾಜ ಚಾರ್ಲ್ಸ್ ಭೇಟಿಯಾದ ರಿಷಿ ಸುನಕ್, ಬ್ರಿಟನ್ ಪ್ರಧಾನಿಯಾಗಿ ಪದಗ್ರಹಣ!
ಮಾತಿನಿಂದ ಅಲ್ಲ, ಕೃತಿಯಿಂದ ದೇಶವನ್ನು ಒಗ್ಗೂಡಿಸುತ್ತೇನೆ. ನಾವೆಲ್ಲಾ ಸೇರಿದರೆ ವಿಸ್ಮಯಕಾರಿ ಸಂಗತಿಗಳನ್ನು ಮಾಡಬಹುದು ಎಂದು ಅವರು ಪ್ರೇರಣದಾಯಕ ಭಾಷಣವನ್ನು ಮಾಡಿದ್ದಾರೆ.
ರಾಜನಿಗಿಂತ 2 ಪಟ್ಟು ಸಿರಿವಂತ
ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ, ಬ್ರಿಟನ್‌ನ ರಾಜನಿಗಿಂತ ಎರಡು ಪಟ್ಟು ಶ್ರೀಮಂತರು. ಹೌದು, ರಿಷಿ ಹಾಗೂ ಅಕ್ಷತಾ 6850 ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ. ಕುಟುಂಬ ಇಷ್ಟುಆಸ್ತಿ ಹೊಂದಲು ಕಾರಣ, ತಮ್ಮ ತಂದೆ ನಾರಾಯಣ ಮೂರ್ತಿ ಮತ್ತು ತಾಯಿ ಸುಧಾ ಮೂರ್ತಿ ಸ್ಥಾಪಿಸಿದ್ದ ಇಸ್ಫೋಸಿಸ್ ಕಂಪನಿಯಲ್ಲಿ ಅಕ್ಷತಾ ಶೇ.0.91ರಷ್ಟು ಪಾಲು ಷೇರು ಹೊಂದಿದ್ದಾರೆ. ಮಂಗಳವಾರದ ಇಸ್ಫೋಸಿಸ್ ಷೇರು ಮೌಲ್ಯದ ಅನ್ವಯ, ಈ ಕಂಪನಿಯೊಂದರಲ್ಲೇ ಅಕ್ಷತಾ ಹೊಂದಿರುವ ಷೇರುಗಳ ಮೌಲ್ಯ 5956 ಕೋಟಿ ರೂ. ಇದರ ಜೊತೆಗೆ ರಿಷಿ ಅವರ ಆಸ್ತಿಯೂ ಸೇರಿದರೆ ಅದು 6850 ಕೋಟಿ ರು. ದಾಟುತ್ತದೆ. ಜೊತೆಗೆ ರಿಷಿ ಹಾಗೂ ಅಕ್ಷತಾ ಲಂಡನ್, ಯಾರ್ಕ್‌ಶೈರ್, ಸ್ಯಾಂಟಾ ಮೋನಿಕಾ ಹಾಗೂ ಕ್ಯಾಲಿರ್ಫೋನಿಯಾದಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ: ಬ್ರಿಟನ್ ರಾಜ ಚಾರ್ಲ್ಸ್‌ಗಿಂತ Rishi Sunak ಹಾಗೂ ಪತ್ನಿ ಅಕ್ಷತಾ 2 ಪಟ್ಟು ಹೆಚ್ಚು ಶ್ರೀಮಂತರು..!
ರಿಷಿ ಆಯ್ಕೆಗೆ ಬ್ರಿಟನ್ ಮಾಧ್ಯಮಗಳ ಮಿಶ್ರ ಪ್ರತಿಕ್ರಿಯೆ
ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾದ ಮೊದಲ ಭಾರತೀಯ ಹಾಗೂ ಹಿಂದೂ ರಿಷಿ ಸುನಕ್‌ಗೆ ಬ್ರಿಟನ್ ಮಾಧ್ಯಮಗಳಿಂದ ಪರ, ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿವೆ. ರಿಷಿ ಪ್ರಧಾನಿಯಾದ ಬೆನ್ನಲ್ಲೇ ಪತ್ರಿಕೆಗಳ ಪ್ರತಿಕ್ರಿಯೆ ಇಲ್ಲಿದೆ.
ದಿ ಮೇಲ್: ನ್ಯೂ ಡಾನ್: ರಿಷಿ ಸುನಕ್ ಕಿರಿಯ ವಯಸ್ಸಿನ ಪ್ರಧಾನಿ
ದಿ ಗಾರ್ಡಿಯನ್: ಒಂದಾಗಿ, ಇಲ್ಲವೇ ಮಡಿಯಿರಿ: ಟೋರಿ ಸದಸ್ಯರಿಗೆ ಸುನಕ್ ಎಚ್ಚರಿಕೆ
ದಿ ಸನ್: ಜನ ನಿಮ್ಮೊಂದಿಗಿದ್ದಾರೆ
ದಿ ಮಿರರ್: ಡೆತ್ ಆಫ್ ಡೆಮಾಕ್ರಸಿ (ಪ್ರಜಾಪ್ರಭುತ್ವದ ಹತ್ಯೆ)
ದಿ ಟೆಲಿಗ್ರಾಫ್: ಕಾದಾಡುತ್ತಿರುವ ಬಣ ಒಗ್ಗೂಡಿಸಲು ರಿಷಿ ಪ್ರಯತ್ನ
ಅಳಿಯನಿಗೆ ಎನ್‌ಆರ್‌ಎನ್, ಸುಧಾಮೂರ್ತಿ ಶುಭಾಶಯ
ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಅಳಿಯ ರಿಷಿ ಸುನಕ್‌ಗೆ ಇಸ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಹಾಗೂ ಪತ್ನಿ ಸುಧಾ ಮೂರ್ತಿ ಶುಭಾಶಯ ಕೋರಿದ್ದಾರೆ. ನಾರಾಯಣ ಮೂರ್ತಿ ದಂಪತಿ ಪುತ್ರಿ ಅಕ್ಷತಾರನ್ನು 2009ರಲ್ಲಿ ರಿಷಿ ವಿವಾಹವಾಗಿದ್ದರು.
ಇದನ್ನೂ ಓದಿ: Rishi Sunak ಅವರದು ಹೂವಿನ ಹಾದಿಯಲ್ಲ: ಮುಂದಿವೆ ಬೆಟ್ಟದಷ್ಟು ಸವಾಲುಗಳು..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ