ಅಮೆರಿಕ ಚುನಾವಣೆ: ಬೆಳಗಾವಿಯ ಥಾಣೇದಾರ್‌ ಸೇರಿ 5 ಭಾರತೀಯರ ಸ್ಪರ್ಧೆ

By Kannadaprabha NewsFirst Published Nov 6, 2022, 11:26 AM IST
Highlights

ಮೆರಿಕ ಸಂಸತ್ತಿನ ಕೆಳಮನೆ ‘ಜನಪ್ರತಿನಿಧಿ ಸಭೆ’ಗೆ (ಹೌಸ್‌ ಆಫ್‌ ರೆಪ್ರೆಸೆಂಟೇಟೀವ್) ನಡೆಯುತ್ತಿರುವ ಮಧ್ಯಂತರ ಚುನಾವಣೆಯಲ್ಲಿ ಕರ್ನಾಟಕದ ಬೆಳಗಾವಿ ಮೂಲದ ಉದ್ಯಮಿ ಶ್ರೀ ಥಾಣೇದಾರ್‌ ಸೇರಿದಂತೆ ಐವರು ಭಾರತೀಯರು ರೇಸ್‌ನಲ್ಲಿದ್ದಾರೆ.

ವಾಷಿಂಗ್ಟನ್‌: ಅಮೆರಿಕ ಸಂಸತ್ತಿನ ಕೆಳಮನೆ ‘ಜನಪ್ರತಿನಿಧಿ ಸಭೆ’ಗೆ (ಹೌಸ್‌ ಆಫ್‌ ರೆಪ್ರೆಸೆಂಟೇಟೀವ್) ನಡೆಯುತ್ತಿರುವ ಮಧ್ಯಂತರ ಚುನಾವಣೆಯಲ್ಲಿ ಕರ್ನಾಟಕದ ಬೆಳಗಾವಿ ಮೂಲದ ಉದ್ಯಮಿ ಶ್ರೀ ಥಾಣೇದಾರ್‌ ಸೇರಿದಂತೆ ಐವರು ಭಾರತೀಯರು ರೇಸ್‌ನಲ್ಲಿದ್ದಾರೆ. ಅಲ್ಲದೇ ಭಾರತೀಯರೇ ಗೆಲ್ಲುವ ಫೇವರಿಟ್‌ ಅಭ್ಯರ್ಥಿಗಳು ಎಂದು ಚುನಾವಣಾ ವಿಶ್ಲೇಷಣಾಕಾರರು ಸಹ ಹೇಳಿದ್ದಾರೆ.

ಬೆಳಗಾವಿ (Belgavi)ಮೂಲದವರಾದ ಶ್ರೀ ಥಾಣೆದಾರ್‌ ಅವರು ಮೂಲತಃ ಉದ್ಯಮಿಯಾಗಿದ್ದು, ಹಲವು ವರ್ಷಗಳಿಂದ ಅಮೆರಿಕದಲ್ಲಿ (America) ನೆಲೆಸಿದ್ದಾರೆ. ಮಧ್ಯಂತರ ಚುನಾವಣೆಯಲ್ಲಿ ಇವರು ಕ್ಯಾಲಿಫೋರ್ನಿಯಾದ (California) 7ನೇ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ. ಇವರಲ್ಲದೇ ಅಮಿ ಬೇರಾ (Ami Bera), ರಾಜಾ ಕೃಷ್ಣಮೂರ್ತಿ (Raja Krishnamurthy), ರೋ ಖನ್ನಾ (Ro Khanna) ಮತ್ತು ಪ್ರಮಿಳಾ ಜೈಪಾಲ್‌ (Pramila Jaipal) ಸಹ ವಿವಿಧ ಕ್ಷೇತ್ರಗಳಿಂದ ಚುನಾವಣಾ ರೇಸ್‌ನಲ್ಲಿದ್ದಾರೆ (election race). ಇವರಲ್ಲಿ ಬೇರಾ ಅತ್ಯಂತ ಹಿರಿಯರಾಗಿದ್ದು, ಈವರೆಗೆ 6 ಬಾರಿ ಗೆಲುವು ಸಾಧಿಸಿದ್ದಾರೆ.

ಶ್ವಾನದೊಂದಿಗೆ 10 ಡೌನಿಂಗ್‌ ಸ್ಟ್ರೀಟ್‌ಗೆ ಕಾಲಿಟ್ಟ Rishi Sunak: ಟ್ವಿಟ್ಟರ್‌ನಲ್ಲಿ ವೈರಲ್‌

Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

ಎಲನ್ ಮಸ್ಕ್ ಮಾಲೀಕತ್ವದ ಟ್ವಿಟರ್‌ಗೆ ಭಾರತೀಯ ಮೂಲದ ಟೆಕ್ಕಿ ಶ್ರೀರಾಮ ಕೃಷ್ಣನ್ ನೆರವು!

click me!