ಏಷ್ಯಾದ 45 ವರ್ಷದ ಹೆಣ್ಣಾನೆಗೆ ದಯಾಮರಣ ಕಲ್ಪಿಸಿದ ಮೃಗಾಲಯ

Published : Nov 05, 2022, 10:57 PM IST
ಏಷ್ಯಾದ 45 ವರ್ಷದ ಹೆಣ್ಣಾನೆಗೆ ದಯಾಮರಣ ಕಲ್ಪಿಸಿದ ಮೃಗಾಲಯ

ಸಾರಾಂಶ

ವಯೋಸಹಜ ಸಮಸ್ಯೆಗಳಿಂದ ಆರೋಗ್ಯ ಹದಗೆಟ್ಟಿರುವ ಕಾರಣ ಏಷ್ಯಾದ 45 ವರ್ಷದ ಹೆಣ್ಣು ಆನೆಯನ್ನು ದಯಾಮರಣ ಮಾಡಲಾಗಿದೆ ಎಂದು ಸ್ಯಾನ್ ಡಿಯಾಗೋ ಮೃಗಾಲಯ ಸ್ಪಷ್ಟನೆ ನೀಡಿದೆ. 

ಸ್ಯಾನ್‌ ಡಿಯಾಗೊ (ನ.5): ವಯೋಸಹಜ ಸಮಸ್ಯೆಗಳಿಂದ ಆರೋಗ್ಯ ಹದಗೆಟ್ಟಿರುವ ಕಾರಣ ಏಷ್ಯಾದ 45 ವರ್ಷದ ಹೆಣ್ಣು ಆನೆಯನ್ನು ದಯಾಮರಣ ಮಾಡಲಾಗಿದೆ ಎಂದು ಸ್ಯಾನ್ ಡಿಯಾಗೋ ಮೃಗಾಲಯ ಶುಕ್ರವಾರ ಬಹಿರಂಗಪಡಿಸಿದೆ. ದೇವಿ ಚಿಕಿತ್ಸೆಗೆ ಒಳಗಾಗಿದ್ದಳು ಆದರೆ ಆಕೆಯ ಚಲನಶೀಲತೆ ತುಂಬಾ ಕ್ಷೀಣಿಸಿದೆ ಮತ್ತು ವನ್ಯಜೀವಿ ಆರೈಕೆ ತಜ್ಞರು ಗುರುವಾರ ಅವಳನ್ನು ದಯಾಮರಣ ಮಾಡಲು "ಕಠಿಣ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದಾರೆ" ಎಂದು ಮೃಗಾಲಯವು ತನ್ನ ಫೇಸ್‌ಬುಕ್  ಖಾತೆಯಲ್ಲಿ  ಬರೆದುಕೊಂಡಿದೆ. ಈ ನಿರ್ಧಾರದಿಂದ ಸ್ಯಾನ್ ಡಿಯಾಗೋ ಮೃಗಾಲಯದ ಕುಟುಂಬಕ್ಕೆ  ತುಂಬಾ ಬೇಸರವಾಗಿದೆ ಎಂದು ಬರೆಯಲಾಗಿದೆ. 1977ರಲ್ಲಿ ಶ್ರೀಲಂಕಾದಿಂದ ದೇವಿಯನ್ನು  ಸ್ಯಾನ್ ಡಿಯಾಗೋ ಮೃಗಾಲಯಕ್ಕೆ ತರಲಾಗಿತ್ತು. ಆನೆ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರಿಗೆ  ಈಕೆ ಪ್ರೇರಣೆಯಾಗಿದ್ದಳು. ತನ್ನ ಜಾತಿಯ ರಾಯಭಾರಿಯಾಗಿ ಗಮನಾರ್ಹ ಪರಂಪರೆಯನ್ನು ಉಳಿಸಿದ್ದಳು ಎಂದು ಮೃಗಾಲಯ ಹೇಳಿದೆ.

ಮೃಗಾಲಯದಲ್ಲಿರುವ ಐದು ಆನೆಗಳ ಪೈಕಿ ದೇವಿ ಎರಡನೆಯವಳು. 58 ವರ್ಷದ ಏಷ್ಯನ್ ಆನೆ ಮೇರಿ ಮತ್ತು 42 ವರ್ಷದ ಆಫ್ರಿಕನ್ ಆನೆ ಶಾಬಾ ಅವರೊಂದಿಗೆ ಈಕೆ ಆನೆಗಳ ಆರೈಕೆ ಕೇಂದ್ರದಲ್ಲಿ ವಾಸಿಸುತ್ತಿದ್ದಳು. ದೇವಿ ಸತ್ತ ನಂತರ, ಇಬ್ಬರಿಗೆ ಆಕೆಯ ದೇಹವನ್ನು ವೀಕ್ಷಿಸಲು ಮತ್ತು  ವಿದಾಯವನ್ನು ಹೇಳಲು  ಅವಕಾಶ ನೀಡಲಾಯಿತು ಎಂದು ಮೃಗಾಲಯ ಹೇಳಿದೆ.

ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

ಏಷ್ಯಾದ ಆನೆಯು ಕಾಡಿನಲ್ಲಿ ಮತ್ತು ಸೆರೆಯಾದ ಬಳಿಕ ದಶಕಗಳ ಕಾಲ ಬದುಕಬಲ್ಲದು. ಸುಮಾರು 50,000 ಕಾಡು ಪ್ರಾಣಿಗಳ ಸಂಖ್ಯೆಯಲ್ಲಿ ಬೇಟೆಯಾಡುವಿಕೆ ಮತ್ತು ಆವಾಸಸ್ಥಾನದ ನಷ್ಟದಿಂದಾಗಿ ಈ ಆನೆಗಳು ಅಳಿವಿನಂಚಿನಲ್ಲಿದೆ ಎಂದು ಪರಿಗಣಿಸಲಾಗಿದೆ. ಸ್ಯಾನ್ ಡಿಯಾಗೋ ಮೃಗಾಲಯವು ಕಳೆದ ಆರು ವರ್ಷಗಳಲ್ಲಿ ಆನಾರೋಗ್ಯದ ಕಾರಣಗಳಿಗಾಗಿ ಇತರ ಎರಡು ಆನೆಗಳನ್ನು ದಯಾಮರಣಗೊಳಿಸಿದೆ. ಈ ಹಿಂದೆ 2016ರಲ್ಲಿ ಏಷ್ಯಾದ ಗಂಡಾನೆ, 50 ವರ್ಷದ ರಾಂಚಿಪುರ್ ಮತ್ತು48 ವರ್ಷದ ಆಫ್ರಿಕಾದ ಹೆಣ್ಣಾನೆ ಟೆಂಬೊಗೆ ದಯಾಮರಣ ನೀಡಲಾಗಿತ್ತು.

 

ಯುಥೆನೇಶಿಯ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಯಾಮರಣ ಪದಕ್ಕೆ ಉತ್ತಮ ಸಾವು ಎಂಬ ಅರ್ಥವಿದೆ.ದಯಾಮರಣವನ್ನು ಜೀವನ ನಡೆಸಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಅವರ ನೋವಿನ ಜೀವನ ಕೊನೆಗಾಣಿಸುವ ನೆಲೆಯಲ್ಲಿ ಒದಗಿಸಲಾಗುತ್ತದೆ. ದಯಾಮರಣ ವಿಷಯ ಸಂಭಂದಿಸಿ ಬೇರೆ ಬೇರೆ ರಾಷ್ಟ್ರಗಳಲ್ಲಿ ತಮ್ಮದೇ ಆದ ಕಾನೂನು ವ್ಯವಸ್ಥೆ ಜಾರಿಯಲ್ಲದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!