ಮೊದಲ ಬಾರಿಗೆ ಚೀನಾ ಕೋವಿಡ್ ಅಸಲಿ ಸಂಖ್ಯೆ ಬಹಿರಂಗ, ಭಾರತ ಸೇರಿ ವಿಶ್ವಕ್ಕೇ ಆತಂಕ!

By Suvarna NewsFirst Published Jan 4, 2023, 5:20 PM IST
Highlights

ಚೀನಾದಲ್ಲಿ ಹುಟ್ಟಿದ ಕೊರೋನಾ ಇಡೀ ವಿಶ್ವದಲ್ಲಿ ಎಂತಾ ಅನಾಹುತ ಸೃಷ್ಟಿಸಿದೆ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಚೀನಾದಲ್ಲಿನ ಕೋವಿಡ್ ಅಧಿಕೃತ ಸಂಖ್ಯೆ 5 ಸಾವಿರ ಆಸುಪಾಸಿನಲ್ಲಿದೆ. ಸಾವಿನ ಸಂಖ್ಯೆ ಮತ್ತೂ ಕಡಿಮೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ರಾಷ್ಟ್ರಗಳು ಚೀನಾಗೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಚೀನಾ ಕೋವಿಡ್ ಅಸಲಿ ಸಂಖ್ಯೆ ಬಹಿರಂಗ ಪಡಿಸಿದೆ.

ಬೀಜಿಂಗ್(ಜ.04): ಚೀನಾದಲ್ಲಿ ಕೋವಿಡ್ ಸೋಂಕಿಗೆ ಅದೆಷ್ಟು ಜನ ಬಲಿಯಾಗಿದ್ದಾರೆ ಅನ್ನೋ ಸ್ಪಷ್ಟ ಮಾಹಿತಿ ಜಗತ್ತಿಗೆ ಇಲ್ಲ. ಚೀನಾ ಅಧಿಕೃತ ದಾಖಲೆಗಳಲ್ಲಿ ಇದುವರೆಗೆ 10,000ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿಲ್ಲ. ಇದೀಗ ಚೀನಾದಲ್ಲಿ ಕೋವಿಡ್ ಮತ್ತೆ ಸ್ಫೋಟಗೊಂಡು ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಆಸ್ಪತ್ರೆಗಳು ಭರ್ತಿಯಾಗಿವೆ. ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಚೀನಾ ಪ್ರಯಾಣಿಕರಿಗೆ, ಚೀನಾ ವಿಮಾನಗಳಿಗೆ ಹಲವು ದೇಶಗಳು ನಿರ್ಬಂಧ ಹೇರಿದ ಬೆನ್ನಲ್ಲೇ ಚೀನಾ ಆಕ್ರೋಶ ವ್ಯಕ್ತಪಡಿಸಿತ್ತು.ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ರಾಷ್ಟ್ರಗಳು ತಿರುಗೇಟು ನೀಡಿತ್ತು. ಅಸಲಿ ಕೋವಿಡ್ ಸಂಖ್ಯೆ ಬಹಿರಂಗ ಪಡಿಸುವಂತೆ ತಾಕೀತು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಚೀನಾ ಅಧಿಕಾರಿಗಳು ಶಾಂಘೈ ನಗರದಲ್ಲಿನ ಕೋವಿಡ್ ಅಸಲಿ ಪ್ರಕರಣ ಸಂಖ್ಯೆ ಬಹಿರಂಗ ಪಡಿಸಿದ್ದಾರೆ. ಶಾಂಘೈ ನಗರದಲ್ಲಿ ಶೇಕಡಾ 70 ರಷ್ಟು ಕೋವಿಡ್‌ಗೆ ತುತ್ತಾಗಿದ್ದಾರೆ ಎಂದು ವರದಿ ಬಹಿರಂಗ ಪಡಿಸಿದ್ದಾರೆ. ಸರಿಸುಮಾರಿ ಶಾಂಘೈ ನಗರದ 25 ಮಿಲಿಯನ್ ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

ಚೀನಾ ರಾಜಧಾನಿ ಬೀಜಿಂಗ್‌ನಲ್ಲೂ ಕೋವಿಡ್ ಪ್ರಕರಣ ಮಿತಿ ಮೀರಿದೆ ಅನ್ನೋದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಬೀಜಿಂಗ್ ನಗರದಲ್ಲಿ ಕೋವಿಡ್ ಅಸಲಿ ಸಂಖ್ಯೆಯನ್ನು ನೀಡಿಲ್ಲ. ಇಷ್ಟೇ ಅಲ್ಲ ಚೀನಾದಲ್ಲಿ ಸದ್ಯ ಕೋವಿಡ್ ಪ್ರಕರಣ ಸಂಖ್ಯೆ, ಸಾವಿನ ಸಂಖ್ಯೆ ಕುರಿತು ನಿಖರ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆದರೆ ಅತೀ ಹೆಚ್ಚು ಭಾದಿಸಿರುವ ಶಾಂಘೈ ನಗರದ ಅಂಕಿ ಅಂಶ ಬಹಿರಂಗಗೊಂಡಿದೆ. ಇದರ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ತಮ್ಮ ಕೋವಿಡ್ ನೀತಿಯಲ್ಲಿ ತಪ್ಪಾಗಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ.

ತನ್ನ ವಿರುದ್ಧ ಕೋವಿಡ್‌ ನಿರ್ಬಂಧಕ್ಕೆ ಚೀನಾ ಗರಂ: ಪ್ರತಿಕಾರದ ಬೆದರಿಕೆ

ಚೀನಾದಲ್ಲಿ ಶೂನ್ಯ ಕೋವಿಡ್ ಪ್ರಕರಣ ನೀತಿ ತಪ್ಪಾಗಿದೆ. ಈ ನೀತಿಯಿಂದ ಇದೀಗ ಚೀನಾದಲ್ಲಿ ಮತ್ತೆ ಕೋವಿಡ್ ಕಾಣಿಸಿಕೊಂಡಿದೆ ಎಂದಿದ್ದಾರೆ. ಈ ಮೂಲಕ ಚೀನಾದಲ್ಲಿ ಮತ್ತೆ ಕೋವಿಡ್ ಅಲೆ ಸೃಷ್ಟಿಯಾಗಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಇಷ್ಟು ದಿನ ಕ್ಸಿ ಜಿನ್‌ಪಿಂಗ್, ಚೀನಾದಲ್ಲಿ ಯಾವುದೇ ಕೋವಿಡ್ ಅಲೆ ಇಲ್ಲ. ಶೂನ್ಯ ಕೋವಿಡ್ ಕಾರಣದಿಂದ ಹೆಚ್ಚಿನ ನಿಘಾವಹಿಸಲಾಗುತ್ತಿದೆ ಎಂದಿದ್ದರು. 

ಹೊಸ ವರ್ಷದ ಭಾಷಣದಲ್ಲಿ ಕ್ಸಿ ಜಿನ್‌ಪಿಂಗ್ ಈ ಮಾತನ್ನು ಹೇಳಿದ್ದಾರೆ. ಈ ಮೂಲಕ ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ. ಚೀನಾದಲ್ಲಿ ಶೂನ್ಯ ಕೋವಿಡ್ ನೀತಿ ವಿರುದ್ಧ ಸಿಡಿದೆದ್ದ ಜನ, ಭಾರಿ ಪ್ರತಿಭಟನೆ ನಡಸಿದ್ದರು. ಇದರಿಂದ ಡಿಸೆಂಬರ್ 7 ರಂದು ಶೂನ್ಯ ಕೋವಿಡ್ ನೀತಿ ಅಂತ್ಯಗೊಂಡಿತ್ತು. 

2019ರಿಂದ ಇಲ್ಲೀವಗೆ ಚೀನಾದಲ್ಲಿ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ 5,000 ಮಾತ್ರ. ಇದು ಚೀನಾ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಇತರೆಡೆ ನೀಡಿದ ಸರ್ಕಾರಿ ಅಧಿಕೃತ ವರದಿ. ಆದರೆ ತಜ್ಞರ ಪ್ರಕಾರ ಚೀನಾದ ನಗರ ಪ್ರದೇಶಗಳಲ್ಲಿ ಇದೀಗ ಪ್ರತಿ ದಿನ 9,000ಕ್ಕೂ ಹೆಚ್ಚು ಮಂದಿ ಕೋವಿಡ್‌ಗೆ ಬಲಿಯಾಗುತ್ತಿದ್ದಾರೆ. ಬೀಜಿಂಗ್‌ನ ಚಯೊಂಗ್ ಆಸ್ಪತ್ರೆ ಉಪಾಧ್ಯಕ್ಷ ತೊಂಗ್ ಝಹುೈ ವರದಿ ಪ್ರಕಾರ, ಬೀಜಿಂಗ್‌ನಲ್ಲಿ ಕೋವಿಡ್ ಪರಿಸ್ಥಿತಿ ಕೈಮೀರಿದೆ ಎಂದಿದ್ದಾರೆ. ಆದರೆ ಸಾವಿನ ಸಂಖ್ಯೆ ಕಡಿಮೆ ಇದೆ. ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದಿದ್ದಾರೆ.

 

ಕೊರೋನಾತಂಕ: ಚೀನಾ ಸೇರಿ 6 ದೇಶದಿಂದ ಬಂದವರಿಗೆ ಕ್ವಾರಂಟೈನ್‌

ಚೀನಾದಲ್ಲಿ ಪ್ರತಿ ದಿನ 25 ಮಿಲಿಯನ್ ಕೋವಿಡ್ ಪ್ರಕರಣ ದಾಖಲಾಗುತ್ತಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಚೀನಾದಲ್ಲಿ ಪ್ರಕರಣ ಸಂಖ್ಯೆ ಗಣನೀಯ ಏರಿಕೆ ಕಾರಣ ಇದೀಗ ಭಾರತ ಸೇರಿದಂತೆ ವಿಶ್ವಕ್ಕೆ ಆತಂಕ ಹೆಚ್ಚಾಗಿದೆ. 

click me!