ಪ್ರಧಾನಿಗೆ ಸಂಕಷ್ಟ ತಂದ ಬೆಳಗಿನ ಉಪಹಾರ; ತನಿಖೆಗೆ ಮುಂದಾದ ಫಿನ್ ಪೊಲೀಸ್!

By Suvarna NewsFirst Published May 28, 2021, 7:33 PM IST
Highlights
  • ಪ್ರಧಾನಿಗೆ ಸಂಕಷ್ಟ ತಂದ ಬೆಳಗಿನ ಉಪಹಾರ ಬಿಲ್
  • 26,466 ರೂಪಾಯಿ ಬಿಲ್ ತನಿಖೆಗೆ ಮುಂದಾ ಪೊಲೀಸ್
  • ತೆರಿಗೆದಾರರ ಹಣ ಪೋಲಾಗಲು ಬಿಡುವುದಿಲ್ಲ ಎಂದ ಪೊಲೀಸ್

ಹೆಲ್ಸಿಂಕಿ(ಮೇ.28): ಬೆಳಗಿನ ಉಪಹಾರ ಆರೋಗ್ಯಕ್ಕೆ ಅತೀ ಮುಖ್ಯ. ಆದರೆ ಇದೇ ಉಪಹಾರ ಇದೀಗ ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರೀನ್‌ ಸಂಕಷ್ಟಕ್ಕೆ ಕಾರಣವಾಗಿದೆ. ಪ್ರಧಾನಿ ಮಂತ್ರಿ ತಮ್ಮ ಕುಟುಂಬದ ಬೆಳಗಿನ ಉಪಹಾರ ಹೆಸರಿನಡಿ ಬರೋಬ್ಬರಿ 26,466 ರೂಪಾಯಿ ವಸೂಲಿ ಮಾಡುತ್ತಿದ್ದರು ಅನ್ನೋ ಆರೋಪವೇ ಇದೀಗ ಮುಳುವಾಗಿದೆ.

ಸಂತುಷ್ಟ ದೇಶ: 149ರ ಪೈಕಿ ಭಾರತ 144, ಫಿನ್ಲೆಂಡ್‌ ವಿಶ್ವ ನಂ.1!

ಸನ್ನಾ ಮರೀನ್ ತಮ್ಮ ಅಧಿಕೃತ ನಿವಾಸವಾದ ಕೇಸರಂತಾದಲ್ಲಿ ವಾಸವಾಗಿದ್ದಾಗ ತನ್ನ ಕುಟುಂಬದ ಬ್ರೇಕ್‌ಫಾಸ್ಟ್‌ಗಳಿಗಾಗಿ ತಿಂಗಳಿಗೆ ಸುಮಾರು 300 ಯುರೋಗಳಷ್ಟು  ವಸೂಲಿ ಮಾಡುತ್ತಿರುವುದಾಗಿ ವರದಿಯಾಗಿದೆ. ಸನ್ನಾ ಮರೀನ್  ಬೆಳಗಿನ ಉಪಹಾರವನ್ನು ಅಕ್ರಮವಾಗಿ ಸಬ್ಸಿಡಿ ಸ್ಕೀಮ್ ಅಡಿ ಮಂಜೂರು ಮಾಡಲಾಗಿದೆಯೇ ಎಂಬ ಸತ್ಯ ಅರಿಯಲು ಫಿನ್‌ಲ್ಯಾಂಡ್ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. 

 

En ole pääministerinä pyytänyt ateriaetua tai osallistunut asiasta päättämiseen. Kun olen aloittanut tehtävässä, minulle on kerrottu, että tämä sisältyy Kesärannassa asumiseen ja yöpymiseen, ja että näin on toimittu myös aiempien pääministerien osalta.

— Sanna Marin (@MarinSanna)

ಪ್ರಧಾನಿ ತಮ್ಮ ಕುಟುಂಬದ ಬೆಳಗಿನ ಉಪಹಾರಕ್ಕೆ ಪ್ರತಿ ತಿಂಗಳು 26,466 ರೂಪಾಯಿ ವಸೂಲಿ ಮಾಡಿದ್ದಾರೆ. ಈ ರೀತಿ ಪ್ರಧಾನಿ ಅಥವಾ ಜನಪ್ರತಿನಿಧಿಗಳ ಕುಟುಂಬಕ್ಕೆ ಉಪಹಾರ ನೀಡಲು ತೆರಿದಾರರ ಹಣ ಬಳಸಲು ಫಿನ್‌ಲ್ಯಾಂಡ್‌ನಲ್ಲಿ ಅವಕಾಶವಿಲ್ಲ. ಹೀಗಾಗಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Fact Check: ಫಿನ್‌ಲ್ಯಾಂಡ್‌ನಲ್ಲಿ ವಾರಕ್ಕೆ ಬರೀ ನಾಲ್ಕೇ ದಿನ ಕೆಲಸ?

ಆದರೆ ಈ ಆರೋಪವನ್ನು ಪ್ರಧಾನಿ ಸನ್ನಾ ಮರೀನ್ ನಿರಾಕರಿಸಿದ್ದಾರೆ. ಪ್ರಧಾನ ಮಂತ್ರಿಯಾಗಿ  ಈ ಪ್ರಯೋಜನವನ್ನು ಕೇಳಿಲ್ಲ. ಜೊತೆಗೆ ಈ ನಿರ್ಧಾರದ ಹಿಂದೆ ತಾನಿಲ್ಲ  ಎಂದು ಮರಿನ್ ಸ್ಪಷ್ಟಪಡಿಸಿದ್ದಾರೆ.

click me!