ಕಾಯಕವೇ ಕೈಲಾಸ: ದೀರ್ಘ ಕಾಲದ ಪ್ರಯಾಣದ ನಡುವೆಯೂ ಕೆಲಸಕ್ಕೆ ಒತ್ತು ಕೊಟ್ಟ ಪಿಎಂ!

By Suvarna NewsFirst Published Sep 23, 2021, 12:16 PM IST
Highlights

* ಅಮೆರಿಕ ಪ್ರವಾಸದಲ್ಲಿ ಮೋದಿ

* ಮೂರು ದಿನಗಳ ಪ್ರವಾಸದ ವೇಳೆ ಜೋ ಬೈಡೆನ್, ಕಮಲಾ ಹ್ಯಾರಿಸ್‌ರನ್ನು ಭೇಟಿಯಾಗಲಿದ್ದಾರೆ ಪಿಎಂ

* ಅಮೆರಿಕ ತಲುಪುವ ಮುನ್ನ ವಿಮಾನದಲ್ಲಿ ತೆಗೆದ ಮೋದಿ ಫೋಟೋ ವೈರಲ್

ನವದೆಹಲಿ(ಸೆ.23): ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು 5 ದಿನಗಳ ಪ್ರವಾಸಕ್ಕಾಗಿ ಬುಧವಾರ ಅಮೆರಿಕಕ್ಕೆ(USA) ಪ್ರಯಾಣ ಬೆಳೆಸಿದ್ದಾರೆ. 2 ವರ್ಷದ ಬಳಿಕ ಮೋದಿ ಅವರ ಮೊದಲ ಅಮೆರಿಕ ಪ್ರವಾಸ ಇದಾಗಿದೆ.

ತಮ್ಮ ಪ್ರವಾಸಕ್ಕೂ ಮುನ್ನ ಹೇಳಿಕೆಯನ್ನು ನೀಡಿರುವ ಮೋದಿ, ಭಾರತ- ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು, ಜಪಾನ್‌ ಮತ್ತು ಆಸ್ಪ್ರೇಲಿಯಾದೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಉತ್ತಮ ಅವಕಾಶವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೋವಿಡ್‌-19 ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಭಯೋತ್ಪಾದನೆಯ ವಿರುದ್ಧದ ಹೋರಾಟ ಹಾಗೂ ಇನ್ನಿತರ ಜಾಗತಿಕ ಮಹತ್ವದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ತಮ್ಮ ಭೇಟಿಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಮೋದಿ, ವಿಶ್ವಸಂಸ್ಥೆ ಉದ್ದೇಶಿಸಿ ಪ್ರಧಾನಿ ಭಾಷಣ!

ಇನ್ನು ಅಮೆರಿಕ ಪ್ರವಾಸ ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೀರ್ಘ ಕಾಲದ ಪ್ರಯಾಣದ ನಡುವೆ ವಿಮಾನದಲ್ಲಿ ತೆಗೆದ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಧಾನಿ ಮೋದಿ ಕಾರ್ಯಾಲಯಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ಫೋಟೋ ಭಾರೀ ವೈರಲ್ ಆಗಿದ್ದು, ಪ್ರಧಾನಿ ಮೋದಿ(Narendra Modi) ಕೆಲಸಕ್ಕೆ ನೀಡುವ ಮಹತ್ವಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಇನ್ನು ತಮ್ಮ ಈ ಫೋಟೋ ಶೇರ್ ಮಾಡಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ದೀರ್ಘ ಕಾಲದ ವಿಮಾನದ ಪ್ರಯಾಣ ಪೇಪರ್ ವರ್ಕ್‌ ಹಾಗೂ ಕೆಲ ಫೈಲ್‌ ಪರಿಶೀಲನೆಗೆ ಅಮಯ ಮಾಡಿಕೊಡುತ್ತದೆ' ಎಂದು ಬರೆದಿದ್ದಾರೆ.

ವಾಷಿಂಗ್ಟನ್‌ನಲ್ಲಿ ಪಿಎಂ ಮೋದಿಗೆ ಅದ್ಧೂರಿ ಸ್ವಾಗತ, ಏರ್‌ಪೋರ್ಟ್‌ ಹೊರಗೆ ಜನಸ್ತೋಮ!

Grateful to the Indian community in Washington DC for the warm welcome. Our diaspora is our strength. It is commendable how the Indian diaspora has distinguished itself across the world. pic.twitter.com/6cw2UR2uLH

— Narendra Modi (@narendramodi)

ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ 11 ಗಂಟೆಗೆ ದೆಹಲಿಯಿಂದ ವಾಯುಪಡೆ 1 ಬೋಯಿಂಗ್ 777 337 ಇಆರ್ ವಿಮಾನದಲ್ಲಿ ಹೊರಟಿದ್ದರು. ಹಾಗೂ ಗುರುವಾರ ಮುಂಜಾನೆ ಸುಮಾರು 3.30ಕ್ಕೆ ವಿಮಾನ ವಾಷಿಂಗ್ಟನ್ ಡಿಸಿ(Washington DC)ಗೆ ತಲುಪಿದೆ. ಈ ವೇಳೆ ವಿಮಾನ ನಿಲ್ದಾಣದ ಹೊರಗೆ ಭಾರೀ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಮೋದಿ ಭೇಟಿಯಾಗಲು ಆಗಮಿಸಿದ್ದಾರೆ. ಅನಿವಾಸಿ ಭಾರತೀಯರನ್ನು ಕಂಡು ಸಂತೋಷಪಟ್ಟುಕೊಂಡ ಮೋದಿ ಅವರ ಬಳಿ ತೆರಳಿ ಧನ್ಯವಾದ ತಿಳಿಸಿದ್ದಾರೆ.   

click me!