'ಕೊರೋನಾ ಹೋರಾಟಕ್ಕೆ ಸೇನೆ ಬಳಸಿಕೊಳ್ಳಿ!'

Published : May 05, 2021, 07:34 AM ISTUpdated : May 05, 2021, 12:20 PM IST
'ಕೊರೋನಾ ಹೋರಾಟಕ್ಕೆ ಸೇನೆ ಬಳಸಿಕೊಳ್ಳಿ!'

ಸಾರಾಂಶ

ಕೊರೋನಾ ಹೋರಾಟಕ್ಕೆ ಸೇನೆ ಬಳಸಿಕೊಳ್ಳಿ| ಸಾಧ್ಯವಾದಷ್ಟು ಎಲ್ಲ ಸಂಪನ್ಮೂಲ ಬಳಸಿ| ಲಸಿಕಾಕರಣ ತೀವ್ರಗೊಳಿಸಬೇಕು| ಅಮೆರಿಕದ ತಜ್ಞ ಡಾ| ಫೌಸಿ ಆಗ್ರಹ| 

ವಾಷಿಂಗ್ಟನ್‌(ಮೇ.05): ‘ಭಾರತದಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್‌ ಅಗತ್ಯವಿದೆ’ ಎಂದು ಇತ್ತೀಚೆಗೆ ಹೇಳಿದ್ದ ಅಮೆರಿಕದ ಉನ್ನತ ವೈದ್ಯಕೀಯ ತಜ್ಞ ಡಾ

ಆ್ಯಂಟನಿ ಫೌಸಿ, ‘ಕಂಡು ಕೇಳರಿಯದ ಪರಿಸ್ಥಿತಿ ಎದುರಿಸುತ್ತಿರುವ ಭಾರತವು ತನ್ನ ಸೇನಾಪಡೆಗಳು ಸೇರಿದಂತೆ ಸಾಧ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಕೊರೋನಾ ವಿರುದ್ಧ ಹೋರಾಡಬೇಕು’ ಎಂದು ಮನವಿ ಮಾಡಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಮಂಗಳವಾರ ಸಂದರ್ಶನ ನೀಡಿರುವ ಅವರು, ‘ಭಾರತ ಸರ್ಕಾರವು ಈ ವೇಳೆ ಕೇವಲ ವೈದ್ಯಕೀಯ ಸಲಕರಣೆಗಳ ಕ್ರೋಡೀಕರಣಕ್ಕೆ ಮುಂದಾದರೆ ಸಾಲದು. ಸಶಸ್ತ್ರಪಡೆಗಳು ಸೇರಿದಂತೆ ತನ್ನೆಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಸೇನಾಪಡೆ ಸಿಬ್ಬಂದಿಯನ್ನೂ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಚೀನಾದಲ್ಲಿ ಕೊರೋನಾ ತಾರಕಕ್ಕೆ ಏರಿದಾಗ ಅದು ಇದೇ ತಂತ್ರ ಅನುರಿಸಿತು. ತಕ್ಷಣವೇ ಸೇನೆ ಕರೆಸಿಕೊಂಡು ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಿತು. ಆಗ ಅಗತ್ಯ ಇರುವವರಿಗೆಲ್ಲ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿತು’ ಎಂದು ಉದಾಹರಿಸಿದರು.

‘ಭಾರತಕ್ಕೆ ಈಗಾಗಲೇ ಅಮೆರಿಕ ಸಹಾಯ ಮಾಡಿದೆ. ಅಮೆರಿಕ ಮಾತ್ರವಲ್ಲ ವಿಶ್ವದ ಇತರ ದೇಶಗಳೂ ಭಾರತದ ನೆರವಿಗೆ ಧಾವಿಸಬೇಕು. ಅದು ಕೇವಲ ಸಲಕರಣೆಗಳಾಗಿರಬಾರದು. ತಮ್ಮ ಸಿಬ್ಬಂದಿಗಳನ್ನೂ ಭಣಾರತಕ್ಕೆ ಕಳಿಸನಬೇಕು’ ಎಂದು ಅವರು ಆಗ್ರಹಿಸಿದರು.

"

‘ಭಾರತದಲ್ಲಿ ಲಸಿಕೆ ನೀಡಿದ ಅಭಿಯಾನ ಚುರುಕುಗೊಳಿಸಬೇಕು. ಹಾಗಂತ ಲಸಿಕೆ ನೀಡಿದರೆ ತಕ್ಷಣವೇ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದರ್ಥವಲ್ಲ. ಕೊರೋನಾದ ಮುಂದಿನ ಅಲೆ ಎದ್ದಾಗ ಅದನ್ನು ಸಮರ್ಥವಾಗಿ ಎದುರಿಸಲು ಇದರುಂದ ನೆರವಾಗದೆ’ ಎಂದರು.

‘ಲಾಕ್‌ಡೌನ್‌ ಅಗತ್ಯವಿದೆ. ಆದರೆ ಅದು 6 ತಿಂಗಳಿದ್ದಾಗದೇ ಕೆಲವೇ ಕೆಲವು ದಿನಗಳಿಗೆ ಸೀಮಿತವಾಗಿರಬೇಕು’ ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ