ಆಸ್ಪತ್ರೆಯ ಕ್ರೂರತನಕ್ಕೆ ಏನನ್ನೋಣ, ಬಾಕ್ಸ್ ನಲ್ಲಿ ಮಗುವಿನ ಶವ ಹೊತ್ತು ನಡೆದ

By Suvarna NewsFirst Published Apr 15, 2020, 5:15 PM IST
Highlights
ಇದೊಂದು ಘೋರ ಘಟನೆ/ ಸಾವನ್ನಪ್ಪಿದ ಮಗುವನ್ನು ಬಾಕ್ಸ್ ನಲ್ಲಿ ಹಾಕಿ ಕಳುಹಿಸಿದ ಆಸ್ಪತ್ರೆ/ ಆಸ್ಪತ್ರೆಯ ಬಿಲ್ ನೋಡಿ ಆಘಾತಗೊಂಡ ತಂದೆ/ ಬಾಕ್ಸ್ ನಲ್ಲಿ ಮಗುವಿನ ಶವ ಹೊತ್ತು ನಡೆದ
ಫಿಲಿಫೈನ್ಸ್(ಏ.15)   ಇದು ಯಾವುದೇ ಸಿನಿಮಾದ ದೃಶ್ಯವಲ್ಲ.  ಮಗುವಿನ ಮೇಲಿನ ಮಮಕಾರ, ತಂದೆಯ ಪ್ರೀತಿ ಎಲ್ಲವೂ ಇಲ್ಲಿ ಕಣ್ಣಿಗೆ ಕಟ್ಟುತ್ತದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಮಗು ಆಸ್ಪತ್ರೆಯಲ್ಲೇ ಸಾವನ್ನಪ್ಪುತ್ತದೆ.  ಕಟುವಾಗಿ ನಡೆಸಿಕೊಳ್ಳುವ ಆಸ್ಪತ್ರೆ ತಂದೆ ಬಳಿ ಸತ್ತ ಮಗುವನ್ನು ತೆಗೆದುಕೊಂಡು ಹೋಗುವಂತೆ ಒತ್ತಾಯ ಮಾಡುತ್ತದೆ.

ಈ ದಾರುಣ ಘಟನೆಯನ್ನು ಮಾಧ್ಯಮವೊಂದು ವರದಿ ಮಾಡಿದೆ. 23 ವರ್ಷದ ರೋಡೆಲ್ ಕನಾಸ್ ತನ್ನ ಪತ್ನಿಯನ್ನು ಫಿಲಿಫೈನ್ಸ್ ನ ಪಾಸಿಗ್ ನಗರದ ರಿಜಾಲ್ ಮೆಡಿಕಲ್ ಸೆಂಟರ್ ಗೆ ಸೇರಿಸುತ್ತಾರೆ.  ಮಾರ್ಚ್ 11 ರಂದು ಆತನ ಪತ್ನಿ ಮಗುವೊಂದಕ್ಕೆ ಜನ್ಮ ನೀಡುತ್ತಾಳೆ.  ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಎದುರಿಸುವ ಮಗು ನಂತರ ನ್ಯೂಮೋನಿಯಾಕ್ಕೆ ತುತ್ತಾಗಿ ಸಾವನ್ನಪ್ಪುತ್ತದೆ.

ಯಾದಗಿರಿ ಎಪಿಎಂಸಿಯಲ್ಲಿ ಹೆತ್ತ ತಾಯಿ ಬಿಟ್ಟು ಹೋದ ಕ್ರೂರಿ ಮಗ

ಕನ್ ಸ್ಟ್ರಕ್ಷನ್ ವರ್ಕ್ ಮಾಡುವ ರೋಡೆಲ್ ಕನಾಸ್ ಗೆ ಮಗುವಿನ ಚಿಕಿತ್ಸೆ ಮಾಡಿದ್ದಕ್ಕೆ ಆಸ್ಪತ್ರೆ   245,000 ಪೌಂಡ್ಸ್ ಅಂದರೆ ಸುಮಾರು   2,34,36,812.06 ರೂ. ಬಿಲ್ ಮಾಡುತ್ತದೆ.  ಆಘಾತಗೊಂಡ ವ್ಯಕ್ತಿಗೆ ಏನು ಮಾಡಬೇಕು ಎಂಬುದು ತೋಚುವುದಿಲ್ಲ.  ಅಲ್ಲಿನ ಆಡಳಿತಕ್ಕೂ ವ್ಯಕ್ತಿ ಮೊರೆ ಹೋಗುತ್ತಾರೆ.

ಅಲ್ಲಿನ ವೈದ್ಯ ಸಿಬ್ಬಂದಿ ಮಗುವಿನ ಶವವನ್ನು ಬಾಕ್ಸ್ ಒಂದರಲ್ಲಿ ತುಂಬಿ ಪ್ಯಾಕೆಜಿಂಗ್ ಟೇಪ್ ಸುತ್ತಿ ತಂದೆಗೆ ನೀಡುತ್ತಾರೆ. ಇದಾದ ಮೇಲೆ ಮನೆಗೆ ತೆರಳುವಂತೆ ಒತ್ತಡ ಹೇರುತ್ತಾರೆ. ಯಾವ ಸಾರಿಗೆ ಸಂಪರ್ಕವೂ ಆ ಸಂದರ್ಭದಲ್ಲಿ ಲಭ್ಯವಿರದ ಕಾರಣ ತಂದೆ ಮಗುವನ್ನು ಹೊತ್ತು ದಾರಿಯಲ್ಲಿ ಹೆಜ್ಜೆ ಹಾಕುತ್ತಾರೆ.

ಕೊರೊನಾ ನವೈರಸ್ ಲಾಕ್ ಡೌನ್ ಇರುವುದರಿಂದ ಸಾರ್ವಜನಿಕ ಸಾರಿಗೆಯನ್ನು ಬಂದ್ ಮಾಡಲಾಗಿದೆ.  ತಂದೆ ಆಡಳಿತದ ಸಮಹಕಾರದೊಂದಿಗೆ ಹಾಗೋ ಹೀಗೋ ಮಗುವಿನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಇಂಥ ಆತಂಕಕಾರಿ ವೇಳೆ ವೈದ್ಯ ಸಿಬ್ಬಂದಿ ಮತ್ತು ಆಸ್ಪತ್ರೆ ನಡೆದುಕೊಂಡ ರೀತಿ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ.
click me!