ವಿಜ್ಞಾನದ ಪ್ರಕಾರ ಈಕೆ ಜಗತ್ತಿನ ಅತೀ ಸುಂದರ ಮಹಿಳೆ!

Published : Oct 18, 2019, 10:57 AM IST
ವಿಜ್ಞಾನದ ಪ್ರಕಾರ ಈಕೆ ಜಗತ್ತಿನ ಅತೀ ಸುಂದರ ಮಹಿಳೆ!

ಸಾರಾಂಶ

ವಿಜ್ಞಾನದ ಪ್ರಕಾರ ಹದೀದ್‌ ಜಗತ್ತಿನ ಅತೀ ಸುಂದರ ಮಹಿಳೆ!|  ವೈಜ್ಞಾನಿಕವಾಗಿ ಪರೀಕ್ಷಿಸಿ ಬಿರುದು

ವಾಷಿಂಗ್ಟನ್‌[ಅ.18]: ಅಮೆರಿಕದ ಸೂಪರ್‌ ಮಾಡೆಲ್‌ ಬೆಲ್ಲಾ ಹದೀದ್‌ರನ್ನು ವಿಶ್ವದ ಅತೀ ಸುಂದರ ಮಹಿಳೆ ಎಂದು ಘೋಷಣೆ ಮಾಡಲಾಗಿದೆ. ವೈಜ್ಞಾನಿಕವಾಗಿ ಪರೀಕ್ಷಿಸಿ ಆಕೆಗೆ ಈ ಬಿರುದು ನೀಡಲಾಗಿದೆ.

ಸೌಂದರ್ಯ ಅಳೆಯುವ ಗ್ರೀಕ್‌ ಪದ್ಧತಿಯಾದ ‘ಗೋಲ್ಡನ್‌ ರೇಶ್ಯೋ ಆಫ್‌ ಬ್ಯೂಟಿ ಫಿ ಸ್ಟ್ಯಾಂಡರ್ಡ್‌’ ಮಾನದಂಡದ ಪ್ರಕಾರ ಈ ಸೌಂದರ್ಯ ಪರೀಕ್ಷೆ ನಡೆಸಲಾಗಿದ್ದು, ಬೆಲ್ಲಾ ಹದೀದ್‌ ಮುಖ ಶೇ.94.35 ರಷ್ಟುಹೋಲಿಕೆಯಾಗಿದೆ. ಹಾಗಾಗಿ ಆಕೆಯನ್ನು ಜಗತ್ತಿನ ಅತೀ ಸುಂದರ ಮಹಿಳೆ ಎಂದು ಗುರುತಿಸಲಾಗಿದೆ.

ಫೇಶಿಯಲ್‌ ಕಾಸ್ಮೆಟಿಕ್‌ ಸರ್ಜನ್‌ ಡಾ. ಜೂಲಿಯನ್‌ ಡೆ ಸೆಲ್ವಾ ಈ ಪರೀಕ್ಷೆ ನಡೆಸಿದ್ದು, 23ರ ಹರೆಯದ ಹದೀದ್‌ ಮೊದಲ ಸ್ಥಾನ ಪಡೆದರೆ, ಶೇ. 92.44ರಷ್ಟುಹೋಲಿಕೆಯಾಗುವ ಮೂಲಕ ಪಾಪ್‌ ದಿವಾ ಬಿಯಾನ್ಸ್‌ ಎರಡನೇ ಸ್ಥಾನ ಪಡೆದಿದ್ದಾರೆ. ಶೇ. 91.85 ರಷ್ಟುಹೋಲಿಕೆಯಾಗುವ ಮೂಲಕ ನಟಿ ಅಂಬೆರ್‌ ಹರ್ಡ್‌, ಶೇ.91.81 ರಷ್ಟುಹೋಲಿಕೆಯಾಗುವ ಮೂಲಕ ಪಾಪ್‌ ಸ್ಟಾರ್‌ ಅರಿನಾ ಗ್ರ್ಯಾಂಡ್‌ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲ್ಯದಲ್ಲಿ ಅನಾಥರಾದ್ರು, ನೆದರ್ಲ್ಯಾಂಡಲ್ಲಿ ಸ್ನೇಹಿತರಾಗಿ ದೂರಾದ್ರು, 3 ದಶಕದ ಬಳಿಕ ತಿಳೀತು ಭಾರತದಲ್ಲಿ ಒಡಹುಟ್ಟಿದ ಸಹೋದರಿಯೆಂದು!
ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯ ಮಾನವನ ಗುಹೆ ಪತ್ತೆ, ಪ್ರಾಚೀನ ಬೆಂಕಿ, ಕಲ್ಲಿನ ಉಪಕರಣ, ಆಭರಣ ಬೆಳಕಿಗೆ