
ವಾರ್ಸಾ: ಭಾರತದ ಸಂಸತ್ತಿನಲ್ಲಿ ಕ್ಯಾನ್‌ಸ್ಮೋಕ್ ಬಳಸಿದ ದಿನವೇ ಅತ್ತ ಪೋಲೆಂಡ್ ಸಂಸತ್‌ನಲ್ಲೂ ಅಂಥದ್ದೇ ಘಟನೆ ನಡೆದಿದೆ. ಯೂಹೂದಿಗಳ ಧಾರ್ಮಿಕ ಆಚರಣೆಯ ಭಾಗವಾಗಿ ಸಂಸತ್ ಭವನದೊಳಗೆ ಹಚ್ಚಲಾಗಿದ್ದ ಕ್ಯಾಂಡಲ್ ಅನ್ನು ಆರಿಸಲು ಸಂಸದ ಗ್ರೆಗೋಜ್ ಬ್ರೌನ್ ಫೈರ್ ಎಸ್ಟಿಂಗ್ವಿಷರ್ (ಬೆಂಕಿ ನಿಯಂತ್ರಿಸಲು ಬಳಸುವ ಉಪಕರಣ) ಬಳಸಿ ಆತಂಕ ಸೃಷ್ಟಿಸಿದ್ದಾರೆ.
ಬುಧವಾರ ಸಂಸತ್ತಿನ ಆವರಣದೊಳಗೆ ಆಗಮಿಸುತ್ತಲೇ ಪಕ್ಕದಲ್ಲಿ ನೇತು ಹಾಕಿದ್ದ ಫೈರ್ ಎಸ್ಟಿಂಗ್ಷಿಷರ್ ಅನ್ನು ಕ್ಯಾಂಡಲ್ ಮೇಲೆ ಸಿಂಪಡಿಸಿ ಅದನ್ನು ಆರಿಸಿದ್ದಾರೆ. ಈ ಘಟನೆಯಿಂದ ಅಕ್ಕಪಕ್ಕದಲ್ಲಿದ್ದವರೆಲ್ಲಾ ಒಮ್ಮೆ ಆತಂಕಕ್ಕೆ ಒಳಗಾದವರು. ಬಳಿಕ ಅವರ ಕೈನಿಂದ ಫೈರ್ ಎಸ್ಟಿಂಗ್ಷಿಷರ್ ಕಸಿದುಕೊಳ್ಳಲಾಯ್ತು. ಘಟನೆ ಸಂಬಂಧ ಬ್ರೌನ್‌ರನ್ನು 3 ತಿಂಗಳ ಕಾಲ ಸಂಸತ್ತಿನಿಂದ ಅಮಾನತು ಮಾಡಲಾಗಿದ್ದು, 6 ತಿಂಗಳ ವೇತನ ರದ್ದು ಪಡಿಸಲಾಗಿದೆ.
ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಬ್ರೌನ್, ‘ಸಂಸತ್ತಿನಲ್ಲಿ ಯಹೂದಿಗಳ ಹನುಕ್ಕಾ ಆಚರಣೆಯನ್ನು ವಿರೋಧಿಸುವ ಸಲುವಾಗಿ ಈ ಕೃತ್ಯ ಮಾಡಿದ್ದೇನೆ. ಹನುಕ್ಕಾ ಆಚರಣೆಯನ್ನು ಮಾಡುವವವರೆಲ್ಲ ಪಿಶಾಚಿಗಳು’ ಎಂದು ಜರಿದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ