Facebook, WhatsApp, ಇನ್‌ಸ್ಟಾಗ್ರಾಂ ಸೇವೆ ಹಠಾತ್ ಸ್ಥಗಿತ: ಕಾರಣ ಬಹಿರಂಗ!

By Suvarna NewsFirst Published Oct 6, 2021, 8:10 AM IST
Highlights

* ಸುಮಾರು ಆರು ತಾಸು ಸೇವೆ ನಿಲ್ಲಿಸಿದ್ದ ಫೇಸ್‌ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ

* ರೂಟರ್‌ ಸಂರ​ಚನೆ ದೋಷವೇ ವಾಟ್ಸಾಪ್‌ ಸ್ಥಗಿ​ತಕ್ಕೆ ಕಾರ​ಣ

* ಕಾನ್ಫಿ​ಗ​ರೇ​ಷನ್‌ ಬದ​ಲಾ​ವಣೆ ಮಾಡು​ವಾಗ ಸಮ​ಸ್ಯೆ: ಕಂಪನಿ ಸ್ಪಷ್ಟ​ನೆ

ನವ​ದೆ​ಹ​ಲಿ(ಅ.06): ಸೋಮವಾರ ರಾತ್ರಿ ಏಕಾಏಕಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ವಿಶ್ವದಾದ್ಯಂತ ಜಗತ್ತಿಗೆ ಡಿಜಿಟಲ್‌ ಶಾಕ್‌ ನೀಡಿದ್ದ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌​ಬುಕ್‌(Facebook), ಇನ್‌​ಸ್ಟಾಗ್ರಾಂ(Instagram) ಹಾಗೂ ವಾಟ್ಸಾಪ್‌(Whatsapp), ತಮ್ಮ ಸೇವೆಯ ಸ್ಥಗಿ​ತಕ್ಕೆ ಕೆಲವು ಕಾರಣ ನೀಡಿ​ವೆ.

‘ಕಾನ್ಫಿಗರೇಷನ್‌(Configuration) ಚೇಂಜ್‌’ ಮಾಡು​ವಾಗ ಸಮಸ್ಯೆ ಉಂಟಾಗಿತ್ತು ಎಂದು ಸಮಸ್ಯೆಯ ಕಾರಣವನ್ನು ಫೇಸ್‌ಬುಕ್‌(facebook) ಹೇಳಿ​ದೆ. ಅಂದರೆ ಫೇಸ್‌ಬುಕ್‌ನ ವಿವಿಧ ಡಾಟಾ ಸೆಂಟರ್‌ಗಳ ನಡುವಿನ ಸಂವಹನವನ್ನು ನಿರ್ವಹಿಸುವ ಬ್ಯಾಕ್‌ಬೋನ್‌ ರೂಟ​ರ್‍ಸ್ನ ಸಂರಚನೆ (ಕಾನ್ಫಿಗರೇಷನ್‌) ದೋಷದಿಂದಾಗಿ ಈ ಸಮಸ್ಯೆ ಉಂಟಾಗಿತ್ತು ಎಂಬುದು ಕಂಪನಿ ಹೇಳಿಕೆ.

ನಿಜವಾಗಿಯೂ ಆಗಿದ್ದೇನು?:

ಸೈಬರ್‌ ತಜ್ಞರ ಪ್ರಕಾರ, ಬಾರ್ಡರ್‌ ಗೇಟ್‌ವೇ ಪ್ರೊಟೋಕಾಲ್‌ (ಬಿಜಿಪಿ) ಸಮಸ್ಯೆಯೇ ಈ ತಾಂತ್ರಿಕ ದೋಷಕ್ಕೆ ಕಾರಣ.

ಇದನ್ನು ವಿಸ್ತರಿಸಿ ಹೇಳುವುದಾದರೆ, ಇಂಟರ್ನೆಟ್‌ ಅಥವಾ ಅಂತರ್ಜಾಲ ವ್ಯವಸ್ಥೆ ನಡೆಯುವುದು ಒಂದು ಶಿಷ್ಟಾಚಾರದ ಅನ್ವಯ. ಇಂಟರ್ನೆಟ್‌ ಅನ್ನುವುದು ಹಲವು ಜಾಲಗಳ ಒಂದು ಗುಚ್ಛವಾಗಿರುವ ಕಾರಣ, ಈ ಎಲ್ಲಾ ಗುಚ್ಛಗಳನ್ನು ಜೋಡಿಸುವ ಕೆಲಸವನ್ನು ಬಿಜಿಪಿ ಮಾಡುತ್ತದೆ. ಬಿಜಿಪಿ ಕೆಲಸ ಮಾಡದೇ ಹೋದಾಗ, ಇಂಟರ್ನೆಟ್‌ ರೂಟರ್‌ಗಳಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಹೀಗಾಗಿ ಅವು ಕೆಲಸ ಮಾಡುವುದನ್ನು ಸ್ಥಗಿತಗೊಳಿಸುತ್ತವೆ. ಇಲ್ಲಿ ಫೇಸ್‌ಬುಕ್‌ ವಿಷಯದಲ್ಲೂ ಅದೇ ಆಗಿದ್ದು, ಫೇಸ್‌ಬುಕ್‌ನ ಬಿಜಿಪಿಯಲ್ಲಿ ತೊಂದರೆಯಾದ ಕಾರಣ, ತಾನು ಇಂಟರ್ನೆಟ್‌ನಲ್ಲಿ ಇದ್ದೇನೆ ಎಂಬ ವಿಷಯವನ್ನು ಇಂಟರ್ನೆಟ್‌ನ ಗುಚ್ಛದಲ್ಲಿ ಇರುವ ಇತರಿಗೆ ತಿಳಿಸುವುದು ಫೇಸ್‌ಬುಕ್‌ಗೆ ಸಾಧ್ಯವಾಗಲಿಲ್ಲ.

ಯಾವುದೇ ಕಂಪನಿಗಳು ಕಾಲಕಾಲಕ್ಕೆ ಮಾಡಿದ ಬದಲಾವಣೆಗಳನ್ನು ಬಿಜಿಪಿ ರೂಟರ್‌ಗಳಿಗೆ ತಿಳಿಸುತ್ತದೆ. ಶನಿವಾರ ಫೇಸ್‌ಬುಕ್‌ ಹಲವಾರು ಬದಲಾವಣೆಗಳನ್ನು ಮಾಡಿತ್ತು ಮತ್ತು ನಂತರ ಅವುಗಳನ್ನು ರದ್ದುಪಡಿಸಿತ್ತು. ಇದೂ ಕೂಡ ಸಮ​ಸ್ಯೆಗೆ ಕಾರಣ ಎನ್ನ​ಲಾ​ಗಿ​ದೆ.

ಏನಾಯ್ತು?:

ಭಾರತೀಯ ಕಾಲಮಾನ ಸೋಮವಾರ ರಾತ್ರಿ 8.40ರ ವೇಳೆಗೆ ಫೇಸ್‌ಬುಕ್‌, ವಾಟ್ಸಾಪ್‌, ಮೆಸೆಂಜರ್‌ ಮತ್ತು ಇನ್ಸಾಸ್ಟಾಗ್ರಾಂ ತಮ್ಮ ಸೇವೆಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದವು. ಆಗ ಜನರು ಟ್ವೀಟರ್‌, ಸಿಗ್ನಲ್‌ ಸೇರಿದಂತೆ ಇತರೆ ಜಾಲತಾಣಗಳಲ್ಲಿ ತನ್ನ ತಮ್ಮ ಸಮಸ್ಯೆಯನ್ನು ತೋಡಿಕೊಂಡರು. ತಡ​ರಾತ್ರಿ 3ರ ಸುಮಾ​ರಿಗೆ ವ್ಯವಸ್ಥೆ ಸರಿ​ಯಾ​ಯಿ​ತು.

ಸಿಗ್ನಲ್‌, ಟೆಲಿಗ್ರಾಂ ಬೇಡಿಕೆ ಹೆಚ್ಚ​ಳ!

ಫೇಸ್‌​ಬುಕ್‌, ವಾಟ್ಸಾ​ಪ್‌ ಇನ್‌​ಸ್ಟಾಸಮ​ಸ್ಯೆಯು ಪ್ರತಿ​ಸ್ಪ​ರ್ಧಿ​ಗ​ಳಿಗೆ ವರ​ವಾ​ಗಿದ್ದು, ಸಿಗ್ನಲ್‌, ಟೆಲಿ​ಗ್ರಾಂ ಸೇರಿ​ದಂತೆ ಹಲವು ಸಾಮಾ​ಜಿಕ ಮಾಧ್ಯ​ಮ​ಗಳ ಬೇಡಿಕೆ ಹೆಚ್ಚಿ​ತು.

ಜುಕರ್‌ಬರ್ಗ್‌ಗೆ 50000 ಕೋಟಿ ರು.ನಷ್ಟ

ಫೇಸ್‌ಬುಕ್‌ ಒಡೆತನದ ಕಂಪನಿಗಳ ಸಮಸ್ಯೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ಅಮೆರಿಕದಲ್ಲಿ ಫೇಸ್‌ಬುಕ್‌ ಷೇರುಮೌಲ್ಯ ಶೇ.4.9ರಷ್ಟುಭಾರೀ ಕುಸಿತ ಕಂಡಿತು. ಪರಿಣಾಮ ಕೆಲವೇ ನಿಮಿಷಗಳಲ್ಲಿ ಜುಕರ್‌ಬರ್ಗ್‌ ಸಂಪತ್ತಿನಲ್ಲಿ 50000 ಕೋಟಿ ರು.ನಷ್ಟುಕರಗಿಹೋಯಿತು. ಇದರಿಂದಾಗಿ ಅವರ ಆಸ್ತಿ ಮೌಲ್ಯ 9.9 ಲಕ್ಷ ಕೋಟಿ ರು.ಗೆ ಇಳಿಯಿತು.

ಜಾಗತಿಕ ಬಳಕೆದಾರರು

ಫೇಸ್‌ಬುಕ್‌ 285 ಕೋಟಿ

ವಾಟ್ಸಾಪ್‌ 200 ಕೋಟಿ

ಇನ್‌​ಸ್ಟಾ​ಗ್ರಾಂ 138 ಕೋಟಿ

click me!