ಬಂದಿದೆ ಕೊರೋನಾ ಪತ್ತೆ ಮಾಡುವ ಮಾಸ್ಕ್‌!

By Kannadaprabha News  |  First Published Jul 1, 2021, 8:22 AM IST

* ಮಾಸ್ಕ್‌ ಧರಿಸಿದ 90 ನಿಮಿಷದಲ್ಲಿ ಸಿಗುತ್ತೆ ಫಲಿತಾಂಶ

* ಬಂದಿದೆ ಕೊರೋನಾ ಪತ್ತೆ ಮಾಡುವ ಮಾಸ್ಕ್‌!

* ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ಸೇನಾ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಲು ನೆರವಾಗಬಲ್ಲದು


ಬೋಸ್ಟನ್‌(ಜು.01): ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ತಗುಲಿದೆಯೇ? ಇಲ್ಲವೇ ಎಂಬುದನ್ನು ಕೇವಲ 90 ನಿಮಿಷದಲ್ಲಿ ಪತ್ತೆ ಮಾಡುವ ಮಾಸ್ಕ್‌ ಒಂದನ್ನು ಎಂಐಟಿ ಮತ್ತು ಹಾರ್ವಡ್‌ ವಿವಿ ಸಂಶೋಧಕರ ತಂಡವೊಂದು ಅಭಿವೃದ್ಧಿಪಡಿಸಿದೆ. ಈ ಮಾಸ್ಕ್‌ ಕೇವಲ ಕೊರೋನಾ ಮಾತ್ರವಲ್ಲದೇ ಯಾವುದೇ ರೀತಿಯ ವೈರಸ್‌ನ ಇರುವಿಕೆಯನ್ನು ಖಚಿತಪಡಿಸಬಲ್ಲದಾಗಿದೆ.

ಜೊತೆಗೆ ಈ ತಂತ್ರಜ್ಞಾನವನ್ನು ಯಾವುದೇ ಮಾಸ್ಕ್‌ ಅಥವಾ ತೊಡುವ ಬಟ್ಟೆಗಳಿಗೆ ಅಳವಡಿಸಬಹುದಾದ ಕಾರಣ, ಮುಂದಿನ ದಿನಗಳಲ್ಲಿ ಇದು ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ಸೇನಾ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಲು ನೆರವಾಗಬಲ್ಲದು ಎಂದು ಹೇಳಲಾಗಿದೆ. ಈ ಮಾಸ್ಕ್‌ ಕುರಿತ ವರದಿ ನೇಚರ್‌ ಬಯೋಟೆಕ್ನಾಲಜಿ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tap to resize

Latest Videos

undefined

ಹೇಗಿರುತ್ತೆ ಮಾಸ್ಕ್‌?:

ವಿಜ್ಞಾನಿಗಳು ಜೈವಿಕವಾದ ಸೆನ್ಸರ್‌ಗಳನ್ನು ಘನೀಕೃತಗೊಳಿಸಿ, ಬಳಿಕ ಅದನ್ನು ಒಣಗಿಸಿ ಮಾಸ್ಕ್‌ನ ಒಳಗಡೆ ಅಂಟಿಸಿದ್ದಾರೆ. ಈ ಮಾಸ್ಕ್‌ ಅನ್ನು ತೊಟ್ಟವ್ಯಕ್ತಿ ತಾನು ಯಾವಾಗ ಪರೀಕ್ಷೆಗೆ ಒಳಪಡಬೇಕು ಎಂದು ಬಯಸುತ್ತಾನೋ ಆ ವೇಳೆ ಮಾಸ್ಕ್‌ನ ಒಳಭಾಗದಲ್ಲಿ ನೀಡಿರುವ ಸಣ್ಣದೊಂದು ಗುಂಡಿಯನ್ನು ಒತ್ತಿದರೆ ಸಾಕು. ಅದರೊಳಗೆ ನೀರು, ಒಣಗಿರುವ ಸೆನ್ಸರ್‌ಗಳನ್ನು ಸಕ್ರಿಯಗೊಳಿಸುತ್ತದೆ. ಬಳಿಕ ಸೆನ್ಸರ್‌ಗಳು ನಮ್ಮ ಉಸಿರಾಟದ ಮೂಲಕ ಹೊರಹೊಮ್ಮುವ ಕಣಗಳನ್ನು ಅಧ್ಯಯನ ಮಾಡಿ 90 ನಿಮಿಷಗಳಲ್ಲಿ ವ್ಯಕ್ತಿ ಕೋವಿಡ್‌ಗೆ ತುತ್ತಾಗಿದ್ದಾನೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸುತ್ತದೆ. ಖಾಸಗಿತನ ಕಾಪಾಡುವ ನಿಟ್ಟಿನಲ್ಲಿ ಫಲಿತಾಂಶವು ಮಾಸ್ಕ್‌ನ ಒಳಭಾಗದಲ್ಲೇ ಪ್ರಕಟವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಆರ್‌ಟಿಪಿಸಿಆರ್‌ ಟೆಸ್ಟ್‌ನಷ್ಟೇ ಖಚಿತ ಮತ್ತು ಆ್ಯಂಟಿಜೆನ್‌ ಟೆಸ್ಟ್‌ನ ವೇಗ ಹೊಂದಿದೆ.

click me!