
ಲಂಡನ್(ಜೂ.30): ಒಂದೇ ಕಂಪನಿಯ ಎರಡು ಡೋಸ್ ಪಡೆಯುವ ಬದಲು. ಎರಡು ಬೇರೆ ಬೇರೇ ಕಂಪನಿಗಳ ಡೋಸ್ ಅನ್ನು ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿ ಆಗಲಿದೆ. ಉದಾಹರಣೆಗೆ ಫೈಝರ್‌ನ ಮೊದಲ ಡೋಸ್ ಪಡೆದುಕೊಂಡಿದ್ದ ವ್ಯಕ್ತಿಗೆ ನಾಲ್ಕು ವಾರಗಳ ಅಂತರದಲ್ಲಿ ಆಸ್ಟ್ರಾಜೆನೆಕಾದ 2ನೇ ಡೋಸ್ ನೀಡುವುದರಿಂದ ಪ್ರತಿಕಾಯಗಳ ಸಾಂದ್ರತೆ ಹೆಚ್ಚಿನ ಪ್ರಮಾಣದಲ್ಲಿರಲಿದೆ ಎಂದು ಲಾನ್ಸೆಟ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎರಡು ಡೋಸ್‌ಗಳ ಮಿಶ್ರಣದಿಂದ ಆಗುವ ದೇಹದ ಮೇಲೆ ಆಗುವ ಪರಿಣಾಮವನ್ನು ಅಧ್ಯಯನ ನಡೆಸಿದ ವೇಳೆ ಉತ್ತಮ ಫಲಿತಾಂಶ ಕಂಡುಬಂದಿದೆ. ಫೈಝರ್ ಬಳಿಕ ಆಸ್ಟ್ರಾ ಲಸಿಕೆ ಪಡೆಯುವುದಕ್ಕಿಂತಲೂ ಆಸ್ಟ್ರಾ ಬಳಿಕ ಫೈಝರ್ ಲಸಿಕೆ ಪಡೆದರೆ ಹೆಚ್ಚು ಉತ್ತಮ ಎಂದು ವಿಜ್ಸಾನಿಗಳು ತಿಳಿಸಿದ್ದಾರೆ.
ಇದರಿಂದಾಗಿ ಲಸಿಕೆಯ ಕೊರತೆ ಎದುರಿಸುತ್ತಿರುವ ಬಡ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ತುರ್ತಾಗಿ ಲಭ್ಯವಿರುವ ಲಸಿಕೆಗಳನ್ನು ಬಳಕೆಮಾಡಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೇ 2 ಡæೂೕಸ್ ಲಸಿಕೆಯ ನಡುವಿನ ಅಂತರವನ್ನು ಕೂಡ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ.
ಆಸ್ಟ್ರಾಜೆನೆಕಾದ 2 ಡೋಸ್ ಲಸಿಕೆಯ ಮಧ್ಯೆ 12 ವಾರಗಳ ಅಂತರವನ್ನು ನಿಗದಿ ಮಾಡಲಾಗಿದೆ. ಆದರೆ, ಇನ್ನೊಂದು ಕಂಪನಿಯ ಲಸಿಕೆ ಪಡೆಯಲು ಇದೇ ಅಂತರವನ್ನು ಪಾಲಿಸಬೇಕಾಗಿಲ್ಲ. ಲಭ್ಯವಿರುವ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ