ಬಿಸಿಲಿನ ತಾಪಕ್ಕೆ ಕರಗಿದ ಏರ್‌ಪೋರ್ಟ್‌ ರನ್‌ವೇ, ಚಾವಣಿ..!

By BK Ashwin  |  First Published Jul 23, 2022, 10:39 AM IST

ಇಂಗ್ಲೆಂಡ್‌ ಲಂಡನ್‌ನಲ್ಲಿ ಮಾತ್ರವಲ್ಲ ಚೀನಾ, ಅಮೆರಿಕ ಸಹ ಬಿಸಿಲಿನ ತಾಪಕ್ಕೆ ನಲುಗಿ ಹೋಗಿದೆ. ಒಟ್ಟಾರೆ ಜಗತ್ತಿನ ಪ್ರಮುಖ ನಗರಗಳ ಪರಿಸ್ಥಿತಿ ಕುರಿತು ವಿವರ.


ಇಂಗ್ಲೆಂಡ್‌ನಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ತೀವ್ರ ತಾಪದಿಂದ ಬಳಲುತ್ತಿದೆ ಎಂಬ ಸುದ್ದಿಯನ್ನು ಓದಿರಬೇಕಲ್ಲವೇ. ಸದಾ ಮಳೆ ಮತ್ತು ಚಳಿಯ ವಾತಾವರಣ ಹೊಂದಿರುವ ಬ್ರಿಟನ್‌ನಲ್ಲಿ ಮಂಗಳವಾರ ದಾಖಲೆಯ 40.3 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ದಾಖಲಾಗಿತ್ತು. ಇತಿಹಾಸದಲ್ಲೇ ಕಂಡುಕೇಳರಿಯದ ಈ ಉಷ್ಣಾಂಶದ ಪರಿಣಾಮ ಬ್ರಿಟನ್‌ ಅಕ್ಷರಶಃ ತತ್ತರಿಸಿ ಹೋಗಿದೆ. ಇಂಗ್ಲೆಂಡ್‌ 40 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶವನ್ನು ತಡೆಯುವ ಸಾಮರ್ಥ್ಯ ಹೊಂದಿಲ್ಲದ ಕಾರಣ, ಬಿಸಿಲಿನ ತಾಪಕ್ಕೆ ರೈಲ್ವೆ ಸಿಗ್ನಲ್‌, ವಿದ್ಯುತ್‌ ವಾಹಕ ವೈರ್‌, ನೀರು ಸಾಗಿಸುವ ಪೈಪ್‌, ರೈಲ್ವೆ ಹಳಿಗಳು ಕರಗಿ ಹಾನಿಗೆ ಒಳಗಾಗಿದ್ದು, ಸಾಮಾನ್ಯ ಜನಜೀವನದ ಮೇಲೆ ಭಾರಿ ವ್ಯತ್ಯಯ ಬೀರಿದೆ.

ಈ ಸಮಸ್ಯೆ ಇಂಗ್ಲೆಂಡ್‌ ಮಾತ್ರವಲ್ಲ, ವಿಶ್ವದ ಬಹುತೇಕ ದೇಶಗಳು, ಪ್ರಮುಖ ನಗರಗಳು ಸಹ ಬಿಸಿಲಿನಿಂದ ತತ್ತರಿಸುತ್ತಿವೆ. ಇದರಿಂದ ಮಿಲಿಯನ್‌ ಗಟ್ಟಲೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗಳು, ಸೇತುವೆಗಳು, ರೈಲುಮಾರ್ಗಗಳು, ಕಟ್ಟಡಗಳು - ಈ ಸುಡುವ ಪರಿಸ್ಥಿತಿಗಳಿಗೆ ಸಿದ್ಧವಾಗಿಲ್ಲ ಎಂದು ಹೇಳಲಾಗುತ್ತಿದೆ.  

Tap to resize

Latest Videos

ಬಿಸಿಲಿನ ಝಳಕ್ಕೆ ಸುಟ್ಟು ಹೋದ ಯುರೋಪ್ ಜನ: ಸೂರ್ಯನ ಝಳಕ್ಕೆ ಸ್ಪೇನ್, ಬ್ರಿಟನ್ ತತ್ತರ

ಬಿಸಿಲಿನ ತಾಪಕ್ಕೆ ಕರಗಿದ ಲಂಡನ್‌ ಏರ್‌ಪೋರ್ಟ್‌ನ ರನ್‌ವೇ..!
ಮಂಗಳವಾರ ಯುಕೆಯಲ್ಲಿ 40 ಡಿಗ್ರಿ ತಾಪಮಾನ ದಾಟಿತ್ತು. ಇದರಿಂದ ರನ್‌ವೇಯ ಭಾಗ ಕರಗಿ ಹೋಗಿತ್ತು ಎಂದು ತಿಳಿದುಬಂದಿದ್ದು, ವಿಮಾನ ಸಂಚಾರವೇ ಅಸ್ತವ್ಯಸ್ತವಾಗಿತ್ತು.
ಚೀನಾದ ವಸ್ತು ಸಂಗ್ರಹಾಲಯದ ಛಾವಣಿಯೇ ಕರಗಿ ಹೋಗಿದೆ..!

ನಮ್ಮ ನೆರೆಯ ಚೀನಾದಲ್ಲೂ ರಣ ಬಿಸಿಲಿದ್ದು, ಇದರಿಂದ ಅಲ್ಲಿನ 90 ಕೋಟಿಗೂ ಅಧಿಕ ಜನರು ಬಿಸಿಲಿನ ತಾಪಕ್ಕೆ ಬಳಲುತ್ತಿದ್ದಾರೆ. ಈ ಹಿನ್ನೆಲೆ ಚೀನಾದ 84 ನಗರಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿತ್ತು. ಈ ಮಧ್ಯೆ, ಚಾಂಗ್‌ಕಿಂಗ್‌ ನಗರದ ವಸ್ತು ಸಂಗ್ರಹಾಲಯದ ಛಾವಣಿ ಬಿಸಿಲಿಗೆ ಕರಗಿ ಹೋಗಿರುವ ಬಗ್ಗೆಯೂ ವರದಿಯಾಗಿದೆ.

ಲಂಡನ್‌ ಸೇತುವೆಯಯನ್ನು ಸಿಲ್ವರ್‌ ಫಾಯಿಲ್‌ನಿಂದ ಮುಚ್ಚಲಾಗಿದೆ..!
ಲಂಡನ್‌ನ ಹ್ಯಾಮ್ಮರ್ಸ್‌ಮಿತ್‌ನ ಸೇತುವೆಯನ್ನು ಸಿಲ್ವರ್‌ ಫಾಯಿಲ್‌ನಿಂದ ಮುಚ್ಚಲಾಗಿದೆಯಂತೆ. ಇದಕ್ಕೆ ಕಾರಣವೂ ಇಂಗ್ಲೆಂಡ್‌ನ ಬಿಸಿಲಿನ ತಾಪ. ಜತೆಗೆ, ಈ ಸೇತುವೆಯನ್ನು ಸುರಕ್ಷಿತ ತಾಪಮಾನದಲ್ಲಿ ಇರಿಸಲು ಮತ್ತು ಒತ್ತಡವನ್ನು ನಿವಾರಿಸಲು ತಾಪಮಾನ ನಿಯಂತ್ರಣ ವ್ಯವಸ್ಥೆಯೊಂದಿಗೆ ಸೇತುವೆಯನ್ನು ಮುಚ್ಚಲು ಕೌನ್ಸಿಲ್ ವಿಶ್ವ ದರ್ಜೆಯ ಎಂಜಿನಿಯರ್‌ಗಳನ್ನು ನೇಮಿಸಿದೆ.

ಲಂಡನ್‌ನ ರೈಲ್ವೆ ಹಳಿಗಳಿಗೆ ಬಿಳಿ ಪೇಂಟ್‌..!
ಇಂಗ್ಲೆಂಡ್‌ನ ಬಿಸಿಲಿನ ತಾಪ ಎಷ್ಟಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇದೇ ನೋಡಿ. ಲಂಡನ್‌ನ ರೈಲ್ವೆ ಹಳಿಗಳು ಬಿಸಿಲಿಗೆ ನಲುಗುತ್ತಿದ್ದು, ಈ ಹಿನ್ನೆಲೆ ಬಿಳಿ ಬಣ್ಣದ ಪೇಂಟ್‌ ಮಾಡಲಾಗಿದೆಯಂತೆ. ಬಿಳಿ ಬಣ್ಣ ಬಳಿದಿರುವುದರಿಂದ ರೈಲ್ವೆ ಹಳಿಗಳು ಕಡಿಮೆ ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ಕಡಿಮೆ ವಿಸ್ತರಣೆಯಾಗುತ್ತದೆ ಎಂಬುದು ಅವರ ವಾದ.

40 ಡಿ.ಸೆ ಉಷ್ಣಾಂಶಕ್ಕೆ ತತ್ತರಿಸಿದ ಬ್ರಿಟನ್‌: 13 ಮಂದಿ ಸಾವು

ಅಮೆರಿಕದ ಟೆಕ್ಸಾಸ್‌ನಲ್ಲಿ ಒಡೆದು ಹೋಗುತ್ತಿರುವ ಪೈಪ್‌ಗಳು
ಅಮೆರಿಕದ ಟೆಕ್ಸಾಸ್‌ನಲ್ಲೂ ಬಿಸಿಲಿನ ತಾಪ ಹೆಚ್ಚಾಗಿದೆ ಹಾಗೂ ಮಳೆ ಕಡಿಮೆಯಾಗಿದೆ. ಈ ಹಿನ್ನೆಲೆ ನೀರಿನ ಪೈಪ್‌ಗಳೆಲ್ಲ ಒಡೆದು ಹೋಗುತ್ತಿದ್ದು ಸಾಕಷ್ಟು ಪ್ರಮಾಣದ ನೀರು ಹರಿದು ಹೋಗುತ್ತಿದೆ ಎಂದು ತಿಳಿದುಬಂದಿದೆ. 476 ಪ್ರಮುಖ ಪೈಪ್‌ಗಳು ಈ ವರ್ಷ ಒಡೆದು ಹೋಗಿದ್ದು, ಈ ಪೈಕಿ ಕಳೆದ 1 ತಿಂಗಳಲ್ಲಿ 182 ಪೈಪ್‌ಗಳು ಒಡೆದಿವೆ ಎಂದು ವರದಿಯಾಗಿದೆ. 
 ಕೋವಿಡ್‌ - 19ನಿಂದ ತತ್ತರಿಸಿದ್ದ ಟೆಕ್ಸಾಸ್‌ನ ಫೋರ್ಟ್‌ ವರ್ಥ್‌ನಲ್ಲಿ ಕಾರ್ಮಿಕರ ತೀವ್ರ ಕೊರತೆಯಾಗಿದೆ. ಈ ಹಿನ್ನೆಲೆ ನೀರು ಪೋಲಾಗುತ್ತಿರುವುದನ್ನು ತಡೆಯುವುದೇ ಕಷ್ಟವಾಗುತ್ತಿದೆಯಂತೆ. ಸದ್ಯ, ಬೇರೆ ಕಡೆಯಿಂದ ಕಾರ್ಮಿಕರನ್ನು ಕರೆಸಲಾಗುತ್ತಿದೆ ಎಂದು ಸಹ ವರದಿಯಾಗಿದೆ. 

ಕರ್ನಾಟಕ ಇತ್ತೀಚೆಗೆ ಮಳೆಗೆ ನಲುಗಿ ಹೋಗಿತ್ತು. ಈಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ, ಇತರೆ ದೇಶಗಳಲ್ಲಿನ ಬಿಸಿಲಿನ ತಾಪ ನೋಡುತ್ತಿದ್ದರೆ ನಾವೇ ಆರಾಮಾಗಿದ್ದೇವೆ ಅನ್ಸುತ್ತೆ ಅಲ್ವಾ..?

click me!