ರಿಲಯನ್ಸ್‌ ಫೌಂಡೇಷನ್ ಆಸ್ಪತ್ರೆ ಸಿಬ್ಬಂದಿಗೆ ವೇತನ ಹೆಚ್ಚಳ

By Suvarna NewsFirst Published Apr 14, 2020, 1:52 PM IST
Highlights
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಫೌಂಡೇಷನ್ ಆಸ್ಪತ್ರೆಯ ಸಿಬ್ಬಂದಿಗೆ ಹೆಚ್ಚುವರಿ ವೇತನ ನೀಡಲು ನಿರ್ಧರಿಸಲಾಗಿದೆ. ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಹೆಚ್ಚುವರಿ ವೇತನದ ಜೊತೆ ಇತರ ಸೌಲಭ್ಯ ನೀಡಲು ರಿಲಯನ್ಸ್‌ ಫೌಂಡೇಷನ್ ನಿರ್ಧರಿಸಿದೆ.
 
ನವದೆಹಲಿ(ಏ.14): ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಫೌಂಡೇಷನ್ ಆಸ್ಪತ್ರೆಯ ಸಿಬ್ಬಂದಿಗೆ ಹೆಚ್ಚುವರಿ ವೇತನ ನೀಡಲು ನಿರ್ಧರಿಸಲಾಗಿದೆ. ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಹೆಚ್ಚುವರಿ ವೇತನದ ಜೊತೆ ಇತರ ಸೌಲಭ್ಯ ನೀಡಲು ರಿಲಯನ್ಸ್‌ ಫೌಂಡೇಷನ್ ನಿರ್ಧರಿಸಿದೆ.

ಮುಂಬೈನ ಎಚ್‌ಎನ್‌ ಫೌಂಡೇಷನ್ ಆಸ್ಪತ್ರೆಯ ವೈದ್ಯರಿಗೆ ಒಂದು ತಿಂಗಳ ಹೆಚ್ಚುವರಿ ಸಂಬಳ ಹಾಗೂ ಸೆವೆನ್‌ ಹಿಲ್ಸ್ ಎಮರ್ಜೆನ್ಸಿ ರೂಮ್‌ ಹಾಗೂ ಐಸೋಲೇಷನ್ ರೂಂನಲ್ಲಿ ಕೆಲಸ ಮಾಡುವ ಫ್ರಂಟ್‌ ಲೈನ್ ಸಿಬ್ಬಂದಿಗೆ ಹೆಚ್ಚು ಒಂದು ತಿಂಗಳ ಸಂಬಳಸ ಜೊತೆ ಹೆಚ್ಚುವರಿ ಪಾವತಿ ಮಾಡಲು ನಿರ್ಧರಿಸಲಾಗಿದೆ.

ಕೊರೋನಾ ಮಣಿಸಲು ಪಿಎಂ ಕೇರ್ಸ್ ನಿಧಿಗೆ 500 ಕೋಟಿ ದೇಣಿಗೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್‌

ಕೊರೋನಾ ವೈರಸ್‌ ವಿರುದ್ಧ ಹೋರಾಡುವ ಆರ್‌ಎಫ್‌ಎಚ್‌ ತಂಡಕ್ಕೆ ಅಭಿನಂದನೆ. ಈ ಕಷ್ಟದ ದಿನಗಳಲ್ಲಿ ಕಾಳಜಿ ಹಾಗೂ ಜವಾಬ್ದಾರಿ ತೋರಿಸುತ್ತಿರುವ ಸಿಬ್ಬಂದಿ ನಿಜವಾದ ಹೀರೋಗಳು. ಅವಿರತವಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಹೆಚ್ಚುವರಿ ವೇತನ ಹಾಗೂ ಸೌಲಭ್ಯ ನೀಡಲು ಆರ್‌ಎಫ್‌ಎಚ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತರಂಗ್ ಜಿಯಾಚಂದನಿ ತಿಳಿಸಿದ್ದಾರೆ.
 
5 ಲಕ್ಷ ರಿಲಯನ್ಸ್ ಸಿಬ್ಬಂದಿ ಕೊರೋನಾದಿಂದ ಸೇಫ್: ಅಂಬಾನಿ ಮಾಡಿದ ಪ್ಲಾನ್ ಇದು
click me!