
ಕಾಠ್ಮಂಡು (ಸೆ.09) ನೇಪಾಳದ ಪರಿಸ್ಥಿತಿ ಗಂಭೀರವಾಗಿದೆ. ಸೋಶಿಯಲ್ ಮೀಡಿಯಾ ನಿಷೇಧ ವಿರೋಧಿಸಿ ಆರಂಭಗೊಂಡ ಜೆನ್‌ಜಿ ಸಮೂಹದ ಪ್ರತಿಭಟನೆ ಹಿಂಸಾಚಾರಕ್ಕೆ ನೇಪಾಳ ಹೊತ್ತಿ ಉರಿಯುತ್ತಿದೆ. ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ, ನೇಪಾಳ ರಾಷ್ಟ್ರಪತಿಯ ಖಾಸಗಿ ಮನೆಗೆ ಬೆಂಕಿ ಹಚ್ಚಿದ್ದಾರೆ. ನೇಪಾಳ ಸಂಸತ್ತಿಗೆ ದಾಳಿ ಮಾಡಿದ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ. ಸಿಕ್ಕ ಸಿಕ್ಕ ಕಡೆಯಲ್ಲಿ ಬೆಂಕಿ ಹಚ್ಚುತ್ತಿದ್ದಾರೆ.ಈ ಘಟನೆಯಲ್ಲಿ ನೇಪಾಳ ಮಾಜಿ ಪ್ರಧಾನಿ ಝಲನಾಥ್ ಖನಾಲ್ ಮನೆಗೂ ಬೆಂಕಿ ಇಟ್ಟಿದ್ದಾರೆ. ಪೆಟ್ರೋಲ್ ಬಾಂಬ್ ಮೂಲಕ ಬೆಂಕಿ ಒಂದೇ ಭಾಗಿ ಧಗಧಗಿಸಿದೆ. ಪರಿಣಾಮ ಝಲನಾಥ್ ಖನಾಲ್ ಪತ್ನಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಝಲನಾಥ್ ಖನಾಲ್ ಮನೆಯಲ್ಲಿ ಬೆಂಕಿಯ ಕೆನ್ನಾಲಗೆ ತೀವ್ರಗೊಂಡಿದೆ. ತಕ್ಷಣವೇ ಹೊರಗೆ ಓಡಲು ಖನಾಲ್ ಪತ್ನಿ ರಾಜಲಕ್ಷ್ಮಿ ಚಿತ್ರಾಕರ್ ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಬೆಂಕಿಯ ಕೆನ್ನಾಲಗೆಯಲ್ಲಿ ಬೆಂದು ಹೋಗಿದ್ದಾರೆ. ಇತ್ತ ರಕ್ಷಣ ಕಾರ್ಯಾಚರಣೆ ಮೂಲಕ ರಾಜಲಕ್ಷ್ಮಿ ಚಿತ್ರಾಕರ್ ಅವರನ್ನು ರಕ್ಷಿಸಿ ಕೀರ್ತೀಪುರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಸುಟ್ಟಗಾಯಗಳಾಗಿದ್ದ ಕಾರಣ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ರಾಜಲಕ್ಷ್ಮಿ ಚಿತ್ರಾಕರ್ ಮೃತಪಟ್ಟಿರುವುದಾಗಿ ನೇಪಾಳ ಮಾಧ್ಯಮಗಳು ವರದಿ ಮಾಡಿದೆ.ಚಿತ್ರಾಕರ್ ಸಾವಿನ ಕುರಿತು ಯಾವುದೇ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ನೇಪಾಳ ಮಾಧ್ಯಮಗಳು ವರದಿಯನ್ನು ಇಲ್ಲಿ ಪ್ರಕಟಿಸಿದೆ.
ಪ್ರಧಾನಿ ಕೆಪಿ ಒಲಿ ಶರ್ಮಾ ಮನೆಗೂ ಬೆಂಕಿ ಹಚ್ಚಿದ್ದಾರೆ. ಕೆಪಿ ಒಲಿ ಶರ್ಮಾ ಘೋಷಿಸಿದ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರ ಹಿಂಸಾರೂಪದ ಪ್ರತಿಭಟನೆಗೆ ಕಾರಣವಾಗಿದೆ. ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಹಲವು ಸಾವು ನೋವು ಸಂಭವಿಸಿದೆ. ಕೆಪಿ ಒಲಿ ಶರ್ಮಾ ಖಾಸಗಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇತ್ತ ನೇಪಾಳ ರಾಷ್ಟ್ರಪತಿ ಖಾಸಗಿ ಮನೆಗೂ ಬೆಂಕಿ ಹಚ್ಚಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ