ದಕ್ಷಿಣ ಕೊರಿಯಾದಲ್ಲಿ ತುರ್ತು ಮಿಲಿಟರಿ ಆಡಳಿತ ಘೋಷಣೆ

By Santosh Naik  |  First Published Dec 3, 2024, 8:16 PM IST

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ದೇಶದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಘೋಷಿಸಿದ್ದಾರೆ. ವಿರೋಧ ಪಕ್ಷಗಳ ದೇಶ ವಿರೋಧಿ ಚಟುವಟಿಕೆಗಳು ಮತ್ತು ಉತ್ತರ ಕೊರಿಯಾದ ಬೆದರಿಕೆಗಳನ್ನು ಎದುರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.


ಸಿಯೋಲ್‌ (ಡಿ.3):  ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್‌ ದೇಶದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಘೋಷಣೆ ಮಾಡಿದ್ದಾರೆ. ದೇಶದ ವಿರೋಧ ಪಕ್ಷಗಳು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡಿರುವುದಾಗಿ ಅವರು ಸೇನಾಡಳಿತ ಜಾರಿ ಮಾಡುವ ವೇಳೆ ತಿಳಿಸಿದ್ದಾರೆ. ಮಿಲಿಟಿರಿ ಕಾನೂನಿನ ಮೂಲಕ ಮುಕ್ತ ಮತ್ತು ಪ್ರಜಾಪ್ರಭುತ್ವ ದೇಶವನ್ನು ಮರುನಿರ್ಮಾಣ ಮಾಡುವುದಾಗಿ ಅಧ್ಯಕ್ಷ ಯೂನ್ ಸುಕ್ ಯೋಲ್ ಮಂಗಳವಾರ ಹೇಳಿದ್ದಾರೆ. "ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳು ಒಡ್ಡುವ ಬೆದರಿಕೆಗಳಿಂದ ಉದಾರವಾದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ರಾಜ್ಯ ವಿರೋಧಿ ಅಂಶಗಳನ್ನು ತೊಡೆದುಹಾಕಲು, ನಾನು ಈ ಮೂಲಕ ತುರ್ತು ಸಮರ ಕಾನೂನನ್ನು ಘೋಷಿಸುತ್ತೇನೆ" ಎಂದು ಯೂನ್ ನೇರ ಟಿವಿ ಭಾಷಣದಲ್ಲಿ ತಿಳಿಸಿದ್ದಾರೆ.

"ಜನರ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಈ ವಿಧ್ವಂಸಕ, ರಾಜ್ಯ ವಿರೋಧಿ ಅಂಶಗಳಿಂದ ಪ್ರಚೋದಿಸಲ್ಪಟ್ಟ ಅಶಾಂತಿಯ ವಿರುದ್ಧ ರಾಷ್ಟ್ರದ ಸುಸ್ಥಿರತೆಯನ್ನು ಖಾತರಿಪಡಿಸಲು ಇದು ಅನಿವಾರ್ಯ ಕ್ರಮವಾಗಿದೆ' ಎಂದು ಹೇಳಿದ್ದಾರೆ. ಯೂನ್ ಅವರ ಸೇನಾಡಳಿತ ಜಾರಿಯ ಘೋಷಣೆಯ ನಂತರ ಲಿಬರಲ್‌ ವಿರೋಧ ಪಕ್ಷ ಡೆಮಾಕ್ರಟಿಕ್ ಪಕ್ಷವು ತುರ್ತು ಸಭೆಗೆ ಕರೆ ನೀಡಿದೆ ಎಂದು ವರದಿಯಾಗಿದೆ.

Tap to resize

Latest Videos

2022 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಯೂನ್ ಪ್ರತಿಪಕ್ಷ ನಿಯಂತ್ರಿತ ಸಂಸತ್ತಿನ ವಿರುದ್ಧ ತಮ್ಮ ಕಾರ್ಯಸೂಚಿಗಳನ್ನು ಜಾರಿ ಮಾಡಲುವಲ್ಲಿ ವಿಫಲರಾಗುತ್ತಿದ್ದರು. ಪೀಪಲ್ ಪವರ್ ಪಾರ್ಟಿಯು ಮುಂದಿನ ವರ್ಷದ ಬಜೆಟ್ ಬಿಲ್‌ನಲ್ಲಿ ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿತ್ತು.

"ರಾಷ್ಟ್ರೀಯ ಅಸೆಂಬ್ಲಿಯು ರಾಷ್ಟ್ರೀಯ ಕಾರ್ಯಾಚರಣೆಗಳು, ಮಾದಕವಸ್ತು ಅಪರಾಧ ತಡೆಗಟ್ಟುವಿಕೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾದ ಬಜೆಟ್ಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಿದೆ, ರಾಜ್ಯದ ಪ್ರಮುಖ ಕಾರ್ಯಗಳನ್ನು ಇದು  ದುರ್ಬಲಗೊಳಿಸುತ್ತದೆ" ಎಂದು ಅಧ್ಯಕ್ಷ ತಿಳಿಸಿದ್ದಾರೆ. "ಇದು ನಮ್ಮ ನಾಗರಿಕರನ್ನು ಅವ್ಯವಸ್ಥೆಯ ಸ್ಥಿತಿಯಲ್ಲಿ ಬಿಟ್ಟಿದೆ, ರಾಷ್ಟ್ರವು ಡ್ರಗ್ಸ್ ಮತ್ತು ಸಾರ್ವಜನಿಕ ಸುರಕ್ಷತೆ ಕುಸಿಯುತ್ತಿದೆ' ಎಂದು ಹೇಳಿದ್ದಾರೆ.

ಜೆಡಬ್ಲ್ಯು ಕೆಲ್ಲಿ ಅವರ ಸಹಿ ಇರುವ 1 ರೂಪಾಯಿ ನೋಟು ನಿಮ್ಮಲಿದ್ಯಾ? ಇದ್ದಲ್ಲಿ ಲಕ್ಷಾಧಿಪತಿ ಆಗಬಹುದು..

ಯೂನ್ ಅವರು ತಮ್ಮ ಪತ್ನಿ ಮತ್ತು ಉನ್ನತ ಅಧಿಕಾರಿಗಳನ್ನು ಒಳಗೊಂಡಿರುವ ಹಗರಣಗಳ ಬಗ್ಗೆ ಸ್ವತಂತ್ರ ತನಿಖೆಗಾಗಿ ಕರೆಗಳನ್ನು ಅವರು ತಳ್ಳಿ ಹಾಕಿದ್ದಾರೆ. ಇದಕ್ಕಾಗಿ ಅವರು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳಿಂದ ದೊಡ್ಡ ಮಟ್ಟದ ಟೀಕೆ ಎದುರಿಸಿದ್ದಾರೆ.

ಅಮೆರಿಕದ ಕಂಪನಿಯಿಂದ ವಾರ್ಷಿಕ 4.3 ಕೋಟಿ ಪ್ಯಾಕೇಜ್‌ ಪಡೆದ ಐಐಟಿ ವಿದ್ಯಾರ್ಥಿ!

click me!