ಇತ್ತೀಚೆಗೆ ಎಲಾನ್ ಮಸ್ಕ್, ವಿಕಿಪೀಡಿಯಾ ತಮ್ಮ ಹೆಸರನ್ನು ಬದಲಾಯಿಸಿದರೆ 1 ಬಿಲಿಯನ್ ಡಾಲರ್ ಪಾವತಿಸುವುದಾಗಿ ಹೇಳಿದ್ದಾರೆ. ಅದಕ್ಕೆ, ಕಂಡೀಷನ್‌ವೊಂದನ್ನೂ ಸಹ ಹಾಕಿದ್ದಾರೆ ನೋಡಿ..
ನವದೆಹಲಿ (ಅಕ್ಟೋಬರ್ 23, 2023): ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಬಿಲಿಯನೇರ್ ಎಲಾನ್ ಮಸ್ಕ್ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅದರ ಹೆಸರನ್ನು ಎಕ್ಸ್‌ಗೆ ಬದಲಾಯಿಸಲಾಗಿದೆ. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸ್ಥಾಪಕರೂ ಆಗಿರುವ ಇವರು, ಈ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಎಲಾನ್ ಮಸ್ಕ್ ಮಾಡುವ ಅನೇಕ ಪೋಸ್ಟ್‌ಗಳು ಪ್ರಪಂಚದಾದ್ಯಂತದ ಬಳಕೆದಾರರನ್ನು ಕುತೂಹಲ ಕೆರಳಿಸುತ್ತದೆ.
ಇದೇ ರೀತಿ ಇತ್ತೀಚೆಗೆ ಎಲಾನ್ ಮಸ್ಕ್, ವಿಕಿಪೀಡಿಯಾ ತಮ್ಮ ಹೆಸರನ್ನು ಬದಲಾಯಿಸಿದರೆ 1 ಬಿಲಿಯನ್ ಡಾಲರ್ ಪಾವತಿಸುವುದಾಗಿ ಹೇಳಿದ್ದಾರೆ. "ಅವರು ತಮ್ಮ ಹೆಸರನ್ನು Dickipedia ಎಂದು ಬದಲಾಯಿಸಿದರೆ ನಾನು ಅವರಿಗೆ ಒಂದು ಬಿಲಿಯನ್ ಡಾಲರ್ ನೀಡುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ. ವಿಕಿಪೀಡಿಯಾದಲ್ಲಿ ಅಪ್ಲೋಡ್ ಆಗುವ ಅನೇಕ ಮಾಹಿತಿಗಳು ಸತ್ಯಕ್ಕೆ ದೂರ ಎಂಬ ಆರೋಪ ಆಗಾಗ್ಗೆ ಕೇಳಿಬರುತ್ತದೆ. ಈ ಹಿನ್ನೆಲೆ ಇದರ ವಿರುದ್ಧ ವ್ಯಂಗ್ಯವಾಡಿದ್ದಾರೆ.
I will give them a billion dollars if they change their name to Dickipedia https://t.co/wxoHQdRICy
— Elon Musk (@elonmusk)ಇದನ್ನು ಓದಿ: 2023 ರ ಜಗತ್ತಿನ ಅತ್ಯಂತ ಶ್ರೀಮಂತರು ಇವ್ರೇ: ಟಾಪ್ 10 ಪಟ್ಟಿಯಲ್ಲಿ ಭಾರತೀಯರಿಗೂ ಸ್ಥಾನ!
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಳಕೆದಾರರೊಬ್ಬರು, ಎಲಾನ್ ಮಸ್ಕ್ ಹೇಳಿದಂತೆ ಹೆಸರು ಬದಲಾವಣೆ ಮಾಡಿ ಎಂದು ಹೇಳಿದ ಬಳಿಕ, ಹಣ ಕೊಡಲು ಷರತ್ತೊಂದನ್ನು ಹಾಕಿದ್ದಾರೆ.
"@ವಿಕಿಪೀಡಿಯಾ, ಇದನ್ನು ಮಾಡಿ! ನೀವು ಹಣ ಪಡೆದ ನಂತರ ನೀವು ಅದನ್ನು ಯಾವಾಗಲಾದ್ರೂ ಬದಲಾಯಿಸಬಹುದು’’ ಎಂದು ಬಳಕೆದಾರರು ಟ್ವೀಟ್ ಮಾಡಿದ್ದರು. ಅದಕ್ಕೆ, ಸ್ಪಷ್ಟನೆ ನೀಡಿದ ಎಲಾನ್ ಮಸ್ಕ್, ‘’ಕನಿಷ್ಠ ಒಂದು ವರ್ಷ. ಅಂದರೆ, ನಾನು ಮೂರ್ಖನಲ್ಲ" ಎಂದೂ ಎಕ್ಸ್ ಮಾಲೀಕ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಟೆಸ್ಲಾದ ಐಷಾರಾಮಿ ಟ್ರಕ್‌ನಲ್ಲಿ ಎಲಾನ್ ಮಸ್ಕ್ ಜತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಪತ್ನಿ ಸವಾರಿ
ಇಷ್ಟೇ ಅಲ್ಲದೆ, ವಿಕಿಪೀಡಿಯಾದ ಮುಖಪುಟದ ಸ್ಕ್ರೀನ್‌ಶಾಟ್ ಅನ್ನು ಮತ್ತೊಂದು ಪೋಸ್ಟ್‌ನಲ್ಲಿ ಹಂಚಿಕೊಂಡ ಎಲಾನ್ ಮಸ್ಕ್, ಅದರಲ್ಲಿ "ವಿಕಿಪೀಡಿಯಾ ಮಾರಾಟಕ್ಕಿಲ್ಲ" ಮತ್ತು "ಜಿಮ್ಮಿ ವೇಲ್ಸ್‌ನಿಂದ ವೈಯಕ್ತಿಕ ಮನವಿ" ಎಂದು ಉಲ್ಲೇಖಿಸಲಾಗಿದೆ .ಹಾಗೂ, "ವಿಕಿಮೀಡಿಯಾ ಫೌಂಡೇಶನ್ ಏಕೆ ಹೆಚ್ಚು ಹಣವನ್ನು ಬಯಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಿಕಿಪೀಡಿಯವನ್ನು ನಿರ್ವಹಿಸಲು ಇದು ಖಂಡಿತವಾಗಿಯೂ ಅಗತ್ಯವಿಲ್ಲ. ನಿಮ್ಮ ಫೋನ್‌ನಲ್ಲಿ ನೀವು ಸಂಪೂರ್ಣ ಪಠ್ಯದ ಪ್ರತಿಯನ್ನು ಅಕ್ಷರಶಃ ಹೊಂದಿಸಬಹುದು! ಹಾಗಾದರೆ, ಹಣ ಯಾವುದಕ್ಕಾಗಿ? ವಿಚಾರಿಸುವ ಮನಸ್ಸುಗಳು ತಿಳಿದುಕೊಳ್ಳಲು ಬಯಸುತ್ತವೆ’’ ಎಂದಿದ್ದಾರೆ.
ಹಾಗೂ, ಮುಂದಿನ ಪೋಸ್ಟ್‌ನಲ್ಲಿ, ಅವರ ವಿಕಿಪೀಡಿಯಾ ಪುಟಕ್ಕೆ ಹಸು ಮತ್ತು ಪೂಪ್ ಎಮೋಜಿಯನ್ನು ಸೇರಿಸಬಹುದೇ ಎಂದು ಎಲಾನ್ ಮಸ್ಕ್ ಟ್ವೀಟ್ ಮೂಲಕ ಕೇಳಿದ್ದಾರೆ. ಅವರ ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
(Please add that to the 🐄💩 on my wiki page)
— Elon Musk (@elonmusk)ಇದನ್ನೂ ಓದಿ: ಜಗತ್ತಿನ ನಂ. 1 ಶ್ರೀಮಂತ ರಾಜ ಇವ್ರೇ: ಈ ಅರಸನ ಸಂಪತ್ತಿನ ಎದುರು ಅಂಬಾನಿ, ಅದಾನಿ, ಎಲಾನ್ ಮಸ್ಕ್ ಲೆಕ್ಕಕ್ಕೇ ಇಲ್ಲ!