
ವಾಶಿಂಗ್ಟನ್(ಫೆ.14) ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಅತ್ಯಂತ ಫಲಪ್ರದವಾಗಿದೆ. ಹಲವು ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳು ಕುರಿತು ಒಪ್ಪಂದವಾಗಿದೆ. ಅಂತಾರಾಷ್ಟ್ರೀಯ ಸವಾಲುಗಳ ಕುರಿತು ಚರ್ಚೆಯಾಗಿದೆ. ಈ ಭೇಟಿಯಲ್ಲಿ ಪ್ರಧಾನಿ ಮೋದಿಯನ್ನು ಅಮರಿಕ ಸರ್ಕಾರದ ಭಾಗವಾಗಿರುವ ಉದ್ಯಮಿ ಎಲಾನ್ ಮಸ್ಕ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ಪ್ರಧಾನಿ ಮೋದಿಗೆ ಎಲಾನ್ ಮಸ್ಕ್ ಉಡುಗೊರೆಯೊಂದನ್ನು ನೀಡಿದ್ದಾರೆ. ಇದೀಗ ಉಡುಗೊರೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಎಲಾನ್ ಮಸ್ಕ್ ನೀಡಿದ ಉಡುಗೊರೆ ಏನು?
ಎಲಾನ್ ಮಸ್ಕ್, ಪ್ರಧಾನಿ ಮೋದಿಯನ್ನು ಕುಟುಂಬ ಸಮೇತ ಭೇಟಿಯಾಗಿದ್ದಾರೆ. ಈ ವೇಳೆ ಎಲಾನ್ ಮಸ್ಕ್ ಸ್ಪೆಸ್ ಎಕ್ಸ್‌ನ ಟೆಸ್ಟ್ ಫ್ಲೈಟ್‌ನಲ್ಲಿ ಬಳಸಿದ ಹೀಟ್‌ಶೀಲ್ಡ್ ಟೈಲ್‌ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? 2024ರಲ್ಲಿ ಟೆಸ್ಟ್ ಫ್ಲೈಟ್ 5 ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಈ ನೌಕೆ ಬಾಹ್ಯಾಕಾಶದಲ್ಲಿನ ಕೆಲಸ ಮುಗಿಸಿ ಮರಳಿ ಭೂಮಿಗೆ ಆಗಮಿಸುತ್ತದೆ. ಆದರೆ ಬಾಹ್ಯಾಕಾಶದಿಂದ ಭೂಮಿಯ ವಾತಾವರಣಕ್ಕೆ ಪ್ರವೇಶ ಮಾಡುತ್ತಿದ್ದಂತೆ ತೀವ್ರ ಶಾಖದ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ನೌಕೆಯನ್ನು ಅತೀವ ಶಾಖದಿಂದ ರಕ್ಷಿಸಿಕೊಳ್ಳಲು ಈ ಸೆರಾಮಿಕ್ ಹೀಟ್‌ಶೀಲ್ಡ್ ವಿನ್ಯಾಸಗೊಳಿಸಲಾಗಿದೆ. ಈ ಹೀಟ್‌ಶೀಲ್ಡನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ಸ್ಟಾರ್‌ಶಿಪ್ ಫ್ಲೈಟ್ ಟೆಸ್ಟ್ 5 ಎಂದು ಕೆತ್ತಲಾಗಿದೆ. ಇಷ್ಟೇ ಅಲ್ಲ ಅಕ್ಟೋಬರ್ 13, 2024 ಎಂದು ದಿನಾಂಕವನ್ನು ಕೆತ್ತಲಾಗಿದೆ.
ಟ್ರಂಪ್ ರನ್ನು ಗೆಳೆಯ ಎಂದ ಮೋದಿ! Donald Trump & PM Modi | Suvarna News | Kannada News
ಅಮೆರಿಕದ ಬ್ಲೇರ್ ಹೌಸ್‌ನಲ್ಲಿ ಮೋದಿ ಹಾಗೂ ಎಲಾನ್ ಮಸ್ಕ್ ಭೇಟಿಯಾಗಿದ್ದಾರೆ. ಸ್ಟಾರ್‌ಲಿಂಕ್, ಭಾರತದ ಜೊತೆ ತಾಂತ್ರಿಕ ಸಹಕಾರ, ಎಲೆಕ್ಟ್ರಿಕ್ ವಾಹನ ಉದ್ಯಮ, ಎಐ ಹೂಡಿಕೆ ಸಾಧ್ಯತೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಸ್ಟಾರ್‌ಲಿಂಕ್ ಉಪಗ್ರಹ ಜಾಲದ ಮೂಲಕ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಸ್ಟಾರ್‌ಲಿಂಕ್ ಸೇವೆಯನ್ನು ಭಾರತದಲ್ಲಿ ಆರಂಭಿಸಲು ಸಿದ್ಧ ಎಂದು ಮಸ್ಕ್ ಈ ಹಿಂದೆ ಹೇಳಿದ್ದರು. ಎಲಾನ್ ಮಸ್ಕ್ ಭೇಟಿಗೂ ಮುನ್ನ ಬ್ಲೇರ್ ಹೌಸ್‌ನಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಸ್ ಅವರನ್ನೂ ಮೋದಿ ಭೇಟಿ ಮಾಡಿದ್ದರು.
ವಾಷಿಂಗ್ಟನ್ ಬಳಿಯ ಆಂಡ್ರ್ಯೂಸ್ ವಾಯುನೆಲೆಯಲ್ಲಿ ಪ್ರಧಾನಿ ವಿಮಾನ ಇಳಿಯಿತು. ಬ್ಲೇರ್ ಹೌಸ್‌ನಲ್ಲಿ ತಂಗಲು ಆಗಮಿಸಿದ ಮೋದಿಗೆ ಭವ್ಯ ಸ್ವಾಗತ ದೊರಕಿತು. ಬ್ಲೇರ್ ಹೌಸ್ ಮುಂದೆ ಹಲವು ಭಾರತೀಯರು ಸ್ವಾಗತಿಸಲು ಸೇರಿದ್ದರು.
ಮೋದಿಗಾಗಿ ಕುರ್ಚಿ ಎಳೆದು ಸಹಕರಿಸಿದ ಟ್ರಂಪ್! Donald Trump & PM Modi | Suvarna News | Kannada News
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ