
ಆಧುನಿಕ ಜಗತ್ತಿನಲ್ಲಿ ಪೋಟೋ ಶೂಟ್ ಗಳಿಗೇನೂ ಬರವಿಲ್ಲ. ಮದುವೆಗೆ ಮುನ್ನ, ಮದುವೆಯ ನಂತರ, ತಾಯ್ತನದ ಪೋಟೋ ಶೂಟ್ ಹೀಗೆ ಒಂದೊಂದಕ್ಕೂ ಒಂದೊಂದು ಅರ್ಥವಿದೆ. ಆದರೆ ಈ ಪೋಟೋ ಶೂಟ್ ಅದೆಲ್ಲದಕ್ಕಿಂತ ಭಿನ್ನ.. ಮಾದರಿ.
ಕಪಲ್ ಪೋಟೋ ಶೂಟ್ ಗಳಿಗೆ ಸಾಕಷ್ಟು ಲೈಕ್, ಪ್ರಚಾರ ಎಲ್ಲವೂ ಸಿಗುತ್ತದೆ. ಪ್ರೋಫೇಶನಲ್ ಪೋಟೋಗ್ರಾಫರ್ ಗಳು ಅನೇಕರು ಹೆಸರು ಮಾಡಿದ್ದಾರೆ.
ಆಗಲ್ಲ ಅಂದರು ಪರೇಡ್ ಗೆ ಕಳಿಸಿ ನನ್ನ ಕೊಂದರಾ... ಆನೆ ಕಣ್ಣೀರ ಕತೆ
ಈ ಹಿರಿಯ ಜೀವಗಳ ಪೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿಯೇ ವೈರಲ್ ಆಗುತ್ತಿದೆ. ಮದುವೆಯಾಗಿ 72 ವರ್ಷಗಳ ತುಂಬು ಜೀವನದ ನಂತರದಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 72ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತೆಗೆದ ಪೋಟೋಗಳು ಇದಾಗಿದೆ.
ಬರ್ಲಿಂಗ್ ಟನ್ ನಲ್ಲಿ ನೆಲೆಸಿರುವ ಜೋಡಿ ನಿಜಕ್ಕೂ ಅದೃಷ್ಟವಂತರು. ಲಿಯೋನರ್ಡ್ ಮತ್ತು ಶೆರ್ಲಿ ಮ್ಯಾಟಿಸ್ ಜೋಡಿಯ ಈ ಪೋಟೋಗಳು ವೈರಲ್ ಆಗುತ್ತಿವೆ.
ಈ ಹಿರಿಯ ಜೋಡಿಗಳನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿಯಲ್ಲೊಬ್ಬರಾದ ಅಡ್ರಿಸ್ ಬೆಹರ್ಡ ಸನ್ ಈ ಪೋಟೋವನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ