
ವೆನಿಜುವೆಲಾ (ಜೂ.26) ವೆನಿಜುವೆಲಾದಲ್ಲಿ ಭೀಕರ ಭೂಕಂಪ ಸಂಭವಿಸಿದೆ. 7.5 ಹಾಗೂ 7.2 ತೀವ್ರತೆ ಎರಡು ಭೂಕಂಪದ ಪರಿಣಾಮ ಕಟ್ಟಡಗಳು ಧರೆಗುರುಳಿದೆ. ರಸ್ತೆಗಳು ಬಿರುಕು ಬಿಟ್ಟಿದೆ. ಈ ಭೀಕರ ಭೂಕಂಪದಲ್ಲಿ ಸಾವಿನ ಪ್ರಮಾಣ 10,000 ದಿಂದ 1 ಲಕ್ಷ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಅಮೆರಿಕ ಜಿಯೋಲಾಜಿಕಲ್ ಸರ್ವೆ (USGS) ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೂಚಿಸಿದೆ. ಕೆಲವೇ ಕೆಲವು ನಿಮಿಷಗಳ ಅಂತರದಲ್ಲಿ 2 ಭಾರಿ ಸಂಭವಿಸಿದ ಭೂಕಂಪದ ಪರಿಣಾಮ ವೆನಿಜುವೆಲಾದಲ್ಲಿ ಶಾಲಾ ಕಾಲೇಜು, ವಿಮಾನ ನಿಲ್ದಾಣ, ಬಸ್, ಕಚೇರಿ ಎಲ್ಲವೂ ಬಂದ್ ಆಗಿದೆ. ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಹಲವೆಡೆ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
ವೆನಿಜುವೆಲಾ ಹಂಗಾಮಿ ಅಧ್ಯಕ್ಷೆ ಡಿಕ್ಲೆ ರೋಡಿಗ್ರೆಸ್ ಈ ಕುರಿತು ಮಾಹಿತಿ ನೀಡಿದ್ದಾರೆ. ವೆನಿಜುವೆಲಾದ ಬಹುತೇಕ ರಾಜ್ಯಗಳಲ್ಲಿ ಭೂಕಂಪ ಸಂಭವಿಸಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಆತಂಕದ ಮಾಹಿತಿಗಳು ಬರುತ್ತಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣವಾಗಿರುವ ಸಿಮೊನ್ ಬೊಲಿವರ್ ಸಂಪೂರ್ಣ ಹಾಳಾಗಿದೆ. ಸದ್ಯ ವಿಮಾನ ಸೇವೆ ರದ್ದು ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದಿದ್ದಾರೆ. ವೆನಿಜುವೆಲಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ವೆನಿಜುವೆಲಾ ಜನತೆ ಶಾಂತಿಯಿಂದ ಇರಬೇಕು. ಈ ಸಂದರ್ಭದಲ್ಲಿ ನಾವು ಒಗ್ಗಟ್ಟಾಗಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗೋಣ ಎಂಬ ಸಂದೇಶವನ್ನು ನೀಡಿದ್ದಾರೆ.
ದೇಶದ ಎಲ್ಲಾ ಆರೋಗ್ಯ ಕೇಂದ್ರಗಳು 24 ಗಂಟೆ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದಾರೆ. ರಜೆಯಲ್ಲಿರುವ ವೈದ್ಯರು, ನರ್ಸ್, ಸಿಬ್ಬಂದಿಗಳು ತಕ್ಷಣವೆ ಕೆಲಸಕ್ಕೆ ಹಾಜರಾಗಲು ಸೂಚಿಸಿದ್ದಾರೆ. ದೂರದಲ್ಲಿದ್ದರೆ, ಹತ್ತಿರದ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ್ದಾರೆ.
ವೆನಿಜುವೆಲಾ ರಾಜಧಾನಿ ಕಾರಕಸ್ ಹೆಚ್ಚು ಹಾನಿಯಾಗಿದೆ. ಹೆಚ್ಚಿನ ಸಾವು ನೋವು ಸಂಭವಿಸಿದೆ. ಮೊದಲ ಭೂಕಂಪ ವೆನಿಜುವೆಲಾ ಸಮಯದ ಪ್ರಕಾರ ಸಂಜೆ 6 ಗಂಟೆ ಸಂಭವಿಸಿದೆ. ಮೊರಾನ್ ಪಟ್ಟಣದ ಪಶ್ಚಿಮ ಭಾಗದಲ್ಲಿ ಸಂಭವಿಸಿದೆ. ಮೊದಲ ಭೂಕಂಪ ಸಂಭವಿಸಿದೆ 39 ಸೆಕೆಂಡ್‌ಗಳಲ್ಲಿ ಮತ್ತೆ 7.5 ತೀವ್ರತೆ ಭೂಕಂಪ ಸಂಭವಿಸಿದೆ. ಕಾರಕಾಸ್ ನಗರದ 22 ಅಂತಸ್ತಿನ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಧರೆಗುರುಳಿದೆ. ಹಲವು ಮನೆಗಳು ಕುಸಿದು ಬಿದ್ದಿದೆ.ಜನರು ಚೀರಾಟ, ಗೋಳಾಟಗಳು ಕೇಳಿಸಿದೆ. ಹಲವರು ಬಯಲು ಪ್ರದೇಶ, ರಸ್ತೆಗೆ ಓಡೋಡಿ ಬಂದಿದ್ದಾರೆ. ಇತ್ತ ಭೂಕಂಪ ಸಂಭವಿಸುತ್ತಿದ್ದಂತೆ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಮೂಲಸೌಕರ್ಯಗಳು ಸಂಪೂರ್ಣ ಜಖಂಗೊಂಡಿದೆ. ಸುರಕ್ಷತಾ ದೃಷ್ಟಿಯಿಂದ ವಿಮಾನ ನಿಲ್ದಾಣಗಳು ಸೇರಿದಂತೆ ಹಲವು ಸೇವೆಗಳು ಬಂದ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ