ಟರ್ಕಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪಕ್ಕೆ ಇಡೀ ರಾಷ್ಟ್ರವೇ ತತ್ತರಿಸಿತ್ತು. ಇದಾದ ಬಳಿಕ ಇಂಡೋನೇಷಿಯಾ, ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪ ಸಂಭವಿಸಿತ್ತು. ಇದೀಗ ಇಂಡೋನೇಷಿಯಾದಲ್ಲಿ ಭೀಕರ ಭೂಕಂಪ ಸಂಭವಿಸಿದೆ. ರಿಕ್ತರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ.
ಜಕರ್ತಾ(ಏ.14): ಟರ್ಕಿ, ಅದಕ್ಕೂ ಮೊದಲು ಆಫ್ಘಾನಿಸ್ತಾನ ಸೇರಿದಂತೆ ಇತ್ತೀಚೆಗೆ ಕೆಲ ದೇಶಗಳಲ್ಲಿ ಸಂಭವಿಸಿದ ಭೀಕರ ಭೂಕಂಪದದ ಕರಾಳ ನೆನಪು ಇನ್ನು ಮಾಸಿಲ್ಲ. ಇಧರ ಬೆನ್ನಲ್ಲೇ ಇದೀಗ ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ. ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೆ ಪ್ರಕಾರ ಇಂಡೋನೇಷಿಯಾದ ಜಾವಾದಿಂದ ಉತ್ತರ ಭಾಗದಲ್ಲಿರುವ ಉತ್ತರ ಕರಾವಳಿಯಲ್ಲಿ ಈ ಭೂಕಂಪ ಸಂಭವಿಸಿದೆ. ಟುಬಾನ್‌ನಿಂದ ಉತ್ತರಕ್ಕೆ 896 ಕಿಲೋಮೀಟರ್ ದೂರದ ಸಮುದ್ರದಲ್ಲಿ ಭೂಕಂಪನ ದಾಖಲಾಗಿದೆ. ಮಧ್ಯಾಹ್ನ 3.25ರ ವೇಳೆಗೆ ಭೂಕಂಪ ಸಂಭವಿಸಿದೆ.
ಭೂಕಪಂದ ಕೇಂದ್ರ ಬಿಂದು ಸಮುದ್ರದಲ್ಲಿ ಇರುವ ಕಾರಣ ಸುನಾಮಿ ಆತಂಕ ಎದುರಾಗಿದೆ. ಈ ಭೂಕಂಪದಿಂದ ಸುನಾಮಿ ಸೃಷ್ಟಿ ಆತಂಕವಿಲ್ಲ. ಆದರೆ ಭೂಕಂಪದ ಬಳಿಕ ಸಮುದ್ರದಲ್ಲಿನ ಏರಿಳಿತದ ಆತಂಕ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸಂಸ್ಥೆ ಹೇಳಿವೆ. ಪ್ರಬಲ ಭೂಕಂಪನ ದಾಖಲಾಗುತ್ತಿದ್ದಂತೆ ರಕ್ಷಣಾ ತಂಡಗಳು ನೆರವಿಗೆ ಧಾವಿಸಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಹೆಚ್ಚುವರಿ ರಕ್ಷಣಾ ಪಡೆಗಳನ್ನು ಕೇಂದ್ರ ಬಿಂದುವಿನತ್ತ ಕಳುಹಿಸಲಾಗಿದೆ. ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.
ಭೂಕಂಪದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.