ಜಿ20 ಶೃಂಗಸಭೆ ಮುಗಿಸಿದ ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪನ, 6.9 ತೀವ್ರತೆಯಲ್ಲಿ ಕಂಪಿಸಿದ ಭೂಮಿ!

By Suvarna News  |  First Published Nov 18, 2022, 9:01 PM IST

ನೇಪಾಳ ಹಾಗೂ ಭಾರತದ ಕೆಲ ಭಾಗದಲ್ಲಿ ಭೂಕಂಪನದ ಬಳಿಕ ಇದೀಗ ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಕಪದಲ್ಲಿ 6.9ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿರುವುದು ದಾಖಲಾಗಿದೆ.


ಜಕರ್ತಾ(ನ.18):  ಭಾರತ ಹಾಗೂ ನೇಪಾಳ ಗಡಿ ಭಾಗದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ದೆಹಲಿ, ಹಿಮಾಚಲ ಪ್ರದೇಶ ಸೇರಿದಂತೆ ಕೆಲ ಭಾಗದಲ್ಲಿ ಕಂಡು ಬಂದಿದೆ. ಇದೀಗ ಜಿ20 ಶೃಂಗಸಭೆ ಮುಗಿದ ಬೆನ್ನಲ್ಲೇ ಇದೀಗ ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 6.9ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಇಂದು ರಾತ್ರಿ 8.30ರ ಹೊತ್ತಿಗೆ ಭೂಮಿ ಕಂಪಿಸಿದೆ. ಸರಿಸುಮಾರು 212 ಕಿಲೋಮೀಟರ್ ಆಳದ ವರೆಗೆ ಭೂಮಿ ಕಂಪಿಸಿದೆ. ಹೀಗಾಗಿ ತೀವ್ರ ಪರಿಣಾಮ ಎದುರಾಗಿರುವ ಸಾಧ್ಯತೆ ಇದೆ.  

ಕಳೆದ ವಾರ ನೇಪಾಳ, ದಿಲ್ಲಿ, ಉತ್ತರಾಖಂಡದಲ್ಲಿ 5.4 ತೀವ್ರತೆ ಭೂಕಂಪ
ನೇಪಾಳ, ರಾಷ್ಟ್ರ ರಾಜಧಾನಿ ದೆಹಲಿ, ಸುತ್ತಮುತ್ತ, ಉತ್ತರಾಖಂಡ ಸೇರಿ ಹಲವು ಕಡೆ ಶನಿವಾರ ರಾತ್ರಿ 8ಕ್ಕೆ ಭೂಕಂಪನ ಅನುಭವವಾಗಿದೆ. ಇದಲ್ಲದೆ, ನೋಯ್ಡಾ, ಗುರುಗ್ರಾಮ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ. ರಿಕ್ಟರ್‌ ಮಾಪನದಲ್ಲಿ 5.4 ತೀವ್ರತೆ ಹೊಂದಿದ್ದಾಗಿ ತಿಳಿದುಬಂದಿದೆ. ನೇಪಾಳದಲ್ಲಿ ಕಳೆದ ಒಂದು ವಾರದಲ್ಲಿ ಸಂಭವಿಸಿದ ನಂತರದ 3ನೇ ಭೂಕಂಪನ ಇದಾಗಿದೆ. ಶನಿವಾರ ಮತ್ತೆ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಕಳೆದ ಬುಧವಾರ ನೇಪಾಳದಲ್ಲಿ ಸಂಭವಿಸಿದ ಭೂಕಂಪ 6 ಜನರನ್ನು ಬಲಿ ಪಡೆದಿತ್ತು.

Tap to resize

Latest Videos

Breaking ದೆಹಲಿಯಲ್ಲಿ ಪ್ರಬಲ ಭೂಕಂಪ, 5 ಸೆಕೆಂಡ್ ಕಂಪಿಸಿದ ಭೂಮಿ!

ನೇಪಾಳದಲ್ಲಿ ಭೂಕಂಪಕ್ಕೆ 6 ಸಾವು
 ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದ ಕಾರಣದಿಂದ 6 ಮಂದಿ ಮೃತಪಟ್ಟಿರುವ ಘಟನೆ ನೇಪಾಳದ ಭಾಗದಲ್ಲಿ ನವೆಂಬರ್ 8ರ ಮಧ್ಯರಾತ್ರಿ ಸಂಭವಿಸಿತ್ತು. ಈ ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.3ರಷ್ಟುದಾಖಲಾಗಿದೆ. ಉತ್ತರ ಭಾರತ ಮತ್ತು ನೇಪಾಳದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಳ ಹಿಮಾಲಯ ಭಾಗದಲ್ಲಿ ಕಳೆದ ಐದಾರು ದಿನಗಳಿಂದ ಭೂಕಂಪಗಳು ಸಂಭವಿಸುತ್ತಿದ್ದು, ಮಂಗಳವಾರ ರಾತ್ರಿ 1.57ರ ಸುಮಾರಿಗೆ 6.3 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಪ್ರದೇಶ ಭಾರತದ ಪಿತೋರ್‌ಗಢದಿಂದ 90 ಕಿ.ಮೀ. ದೂರದಲ್ಲಿದೆ. ಲ್ಲದೇ ಉತ್ತರಾಖಂಡ ಮತ್ತು ನೇಪಾಳ ಭಾಗದಲ್ಲೂ ಮುಂಜಾನೆ 3.15 ಮತ್ತು 6.27ರ ಸುಮಾರಿಗೆ ಕ್ರಮವಾಗಿ 3.6 ಮತ್ತು 4.3 ಮ್ಯಾಗ್ನಿಟ್ಯೂಡ್‌ನಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ಹೇಳಿದೆ.

click me!