ಪತ್ನಿಯ ಬಿಕಿನಿ ಆಸೆ ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

By Suchethana D  |  First Published Sep 26, 2024, 4:42 PM IST

ಪತ್ನಿಯ ಬಿಕಿನಿ ಧರಿಸುವ  ಆಸೆಯನ್ನು ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ್ದಾರೆ ಈ ದುಬೈ ಪತಿ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು 
 


ತಮ್ಮ ಗರ್ಲ್​ಫ್ರೆಂಡ್​ ಅಥವಾ ಹೊಸದಾಗಿ ಮದುವೆಯಾದಾಗ, ಹೆಣ್ಣನ್ನು ಖುಷಿಯಾಗಿ ಇಡಲು ಬೆಲೆಬಾಳುವ, ತಮ್ಮ ಅನುಕೂಲಕ್ಕೆ ತಕ್ಕಂಥ ಉಡುಗೊರೆಗಳನ್ನು ಖರೀದಿಸಿ ನೀಡಿರುವುದು ಸಾಮಾನ್ಯ.  ಆ ಉಡುಗೊರೆ ಒಂದು ರೂಪಾಯಿಯಿಂದ ಹಿಡಿದು ಕೋಟ್ಯಂತರ ಬೆಲೆ ಬಾಳುವ ಉಡುಗೊರೆಯೇ ಆಗಿರಬಹುದು. ಅದು ಅವರವರ ಶಕ್ತಿಗೆ ಅನುಸಾರವಾಗಿ ಇರುತ್ತದೆ.  ಆದರೆ ಇಲ್ಲೊಬ್ಬ ಪತಿರಾಯ ತನ್ನ ಪತ್ನಿಗಾಗಿ ಸುಮಾರು 418 ಕೋಟಿ ರೂಪಾಯಿ ವೆಚ್ಚದ ದ್ವೀಪವನ್ನೇ ಖರೀದಿ ಮಾಡಿದ್ದಾನೆ! ಅಷ್ಟಕ್ಕೂ ಅಂಥದ್ದೇನು ಪತ್ನಿಯ ಇಚ್ಛೆ ಎಂದು ಕೇಳಿದರೆ, ಆಕೆಗೆ ಬಿಕಿನಿ ಧರಿಸುವ ಆಸೆಯಂತೆ! 

ನಿಜ ನಿಜ. ನೀವು ಸರಿಯಾಗಿಯೇ ಓದಿದ್ದೀರಿ. ಪತ್ನಿಗೆ ಬಿಕಿನಿ ಧರಿಸುವ ಆಸೆಯನ್ನು ಈಡೇರಿಸುವ ಸಲುವಾಗಿ ಈ ಪತಿ ಮಹಾಶಯ ದ್ವೀಪ ಖರೀದಿ ಮಾಡಿದ್ದಾನೆ. ಅಂದಹಾಗೆ,ಇವರು ದುಬೈ ಮೂಲದ ಖ್ಯಾತ ಉದ್ಯಮಿ ಜಮಾಲ್ ಅಲ್ ನಡಾಕ್.  ಅವರೀಗ ದ್ವೀಪ ಖರೀದಿಸಿ ಭಾರಿ ಸದ್ದು ಮಾಡುತ್ತಿದ್ದಾರೆ. ಬಿಕಿನಿ ಧರಿಸುವ ಆಸೆ ವ್ಯಕ್ತಪಡಿಸಿರುವ ಅವರ ಪತ್ನಿ ಬ್ರಿಟಿಷ್​ ಮೂಲದವಳು. ದುಬೈನಲ್ಲಿ ವಾಸಿಸುತ್ತಿದ್ದಳು. ಅವಳ ಹೆಸರು ರಿವೀಲ್​ ಆಗಲಿಲ್ಲ. ಆದರೆ ಇದೀಗ ತಮ್ಮ ಪತ್ನಿ ತಮಗಾಗಿ  ಸೌದಿಯಲ್ಲಿನ  ಹಿಂದೂ ಮಹಾಸಾಗರದಲ್ಲಿ ದ್ವೀಪವನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಅದಕ್ಕೆ ತಮ್ಮ ಪತಿ  50 ಮಿಲಿಯನ್ ಡಾಲರ್ (ಅಂದರೆ ಸುಮಾರು 418 ಕೋಟಿ ರೂಪಾಯಿ) ಎಂದು ಅವರು ತಿಳಿಸಿದ್ದಾರೆ. ಅದನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ,  ಆ ದ್ವೀಪದ ವಿಡಿಯೋ ಕೂಡ ಶೇರ್​ ಮಾಡಿಕೊಂಡಿದ್ದಾರೆ.  

Tap to resize

Latest Videos

undefined

ಐಶ್ವರ್ಯ ರೈ ಮೈತುಂಬಾ ಬಟ್ಟೆ ಧರಿಸ್ತಿರೋ ಹಿಂದಿದೆ ಗಂಭೀರ ಆರೋಗ್ಯ ಸಮಸ್ಯೆ? ತೂಕ ಹೆಚ್ಚಲೂ ಇದೇ ಕಾರಣ!

ನಾನು ಬ್ರಿಟಿಷ್​ ಪ್ರಜೆ. ಆದರೆ ಸೌದಿಯಲ್ಲಿ ಇರುವ ಕಾರಣ, ಬಿಕಿನಿ ಧರಿಸಿ ಓಡಾಡುವುದು ಕಷ್ಟವಾಗಿತ್ತು. ಇದನ್ನು ನನ್ನ ಪತಿ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ದ್ವೀಪ ಖರೀಸಿದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ. ಮೊದಲಿಗೆ  ನಾವಿಬ್ಬರೂ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಹಲವು ಬಾರಿ ಯೋಚನೆ ಮಾಡಿದ್ದೆವು. ಅದರಿಂದ  ನಮ್ಮ ಖಾಸಗಿತನಕ್ಕೆ ಭಂಗ ಬರಬಾರದು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ದ್ವೀಪ ಖರೀದಿಗೆ ಮುಂದಾದೆವು ಎಂದಿದ್ದಾರೆ.  ಸಮುದ್ರತೀರದಲ್ಲಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯಬಹುದು ಎಂಬ ಯೋಚನೆಯಿಂದಾಗಿ ದ್ವೀಪ ಖರೀದಿ ಮಾಡಲಾಗಿದೆ. ದೀರ್ಘಾವಧಿಯ ನಮ್ಮ ಅತ್ಯುತ್ತಮ ಹೂಡಿಕೆಯಾಗಿದೆ. ಈ ದ್ವೀಪವು ಏಷ್ಯಾ ಖಂಡದಲ್ಲಿದೆ ಎಂದಿರುವ ಪತ್ನಿ, ಇದು ತಮ್ಮ ಖಾಸಗಿತನದ ಪ್ರಶ್ನೆ ಆಗಿರುವ ಕಾರಣ, ದ್ವೀಪದ ಜಾಗವನ್ನು ತಿಳಿಸುವುದಿಲ್ಲ ಎಂದಿದ್ದಾರೆ.

ಈ ವಿಷಯ ಈಗ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಈ ಫೋಟೋಗೆ ಮಿಲಿಯನ್​ಗಟ್ಟಲೆ ಲೈಕ್ಸ್​, ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.  ಇದರ ವಿಡಿಯೋ ಕೂಡ ಅವರು ಶೇರ್​ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಇದಾಗಲೇ ಮೂರು ಮಿಲಿಯನ್​ ವ್ಯೂಸ್​ ಕಂಡಿದೆ. ದುಡ್ಡು ಹೆಚ್ಚಾದರೆ, ಹೇಗೆ ಖರ್ಚು ಮಾಡಬೇಕು ಎನ್ನುವುದು ತಿಳಿಯದಿದ್ದರೆ ಇದೆಲ್ಲಾ ಹುಚ್ಚುತನ ಇದ್ದದ್ದೇ ಎಂದು ಹಲವರು ಹೇಳಿದರೆ, ಬಿಕಿನಿ ಧರಿಸಿದ ಮೇಲೆ ಅದರ ವಿಡಿಯೋನೂ ಶೇರ್ ಮಾಡಿ ಎಂದು ಕೆಲವರು ಇವರ ಕಾಲೆಳೆಯುತ್ತಿದ್ದಾರೆ. ಮತ್ತೆ ಕೆಲವರು ಬಿಕಿನಿ ಧರಿಸಿದ ಮೇಲೆ ತಲಾಖ್​ ಕೊಡಬೇಡ ಮಾರಾಯ ಎಂದೂ ಅಲ್​ಗೆ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. 

ಅಂಕಲ್​ ಅಂದೋರನ್ನೇ ಮದ್ವೆಯಾದ ಹರ್ಷಿಕಾ ಪೂಣಚ್ಚ! ವಿಚಿತ್ರ ಲವ್​ ಸ್ಟೋರಿ ನೆನಪಿಸಿಕೊಂಡ ನಟಿ

 
 
 
 
 
 
 
 
 
 
 
 
 
 
 

A post shared by Soudi✨ (@soudiofarabia)

click me!