
ದುಬೈ(ಡಿ.29): ಬಾಲ್ಕನಿಯಲ್ಲಿ ಬಟ್ಟೆ ನೇತು ಹಾಕುವುದು ಕೆಲವರಿಗೆ ಅನಿವಾರ್ಯವಾದರೆ, ಇನ್ನು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಆದರೆ ಈಗ ದುಬೈನಲ್ಲಿ ಹೀಗೆ ಮಾಡುವವರು ಭಾರೀ ದಂಡ ತೆರಬೇಕಾಗುತ್ತದೆ. ದುಬೈ ಆಡಳಿತವು ನಗರವನ್ನು ಸ್ವಚ್ಛವಾಗಿಡಲು ಕೆಲವು ಹೊಸ ನಿಯಮಗಳನ್ನು ಮಾಡಿದೆ. ಜನರು ತಮ್ಮ ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಮೇಲೆ ಬಟ್ಟೆಗಳನ್ನು ಒಣಗಿಸಬಾರದು ಅಥವಾ ಬಾಲ್ಕನಿಯ ಕಿಟಕಿಗೂ ಬಟ್ಟೆ ನೇತು ಹಾಕಬಾರದು ಎಂದು ದುಬೈ ಮುನ್ಸಿಪಾಲಿಟಿ ಹೇಳಿದೆ. ಯಾರಾದರೂ ಹಾಗೆ ಮಾಡಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದೆ.
Cigarette ಸೇದುವವರಿಗೂ ಎಚ್ಚರಿಕೆ
ಬಾಲ್ಕನಿಯಲ್ಲಿ ನಿಂತು ಸಿಗರೇಟ್ ಸೇದುವವರಿಗೆ ದುಬೈ ಮುನ್ಸಿಪಾಲಿಟಿ ಎಚ್ಚರಿಕೆ ನೀಡಿದೆ. ಯಾರಾದರೂ ಬಾಲ್ಕನಿಯಲ್ಲಿ ಸಿಗರೇಟ್ ಸೇದಿದರೆ ಮತ್ತು ಅವರ ಬೂದಿ ಕೆಳಗೆ ಬಿದ್ದರೆ, ಅವರು ದಂಡವನ್ನು ಪಾವತಿಸಬೇಕಾಗುತ್ತದೆ. ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಹೇಳುತ್ತಿದೆ. ಜನರು ತಮ್ಮ ಅಪಾರ್ಟ್ಮೆಂಟ್ನ ಬಾಲ್ಕನಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಆಡಳಿತವು ಜನರನ್ನು ಒತ್ತಾಯಿಸಿದೆ.
ಏನಾದರೂ ಸರಿ ಬಾಲ್ಕನಿ ಸುಂದರವಾಗಿ ಕಾಣಬೇಕು
ದುಬೈ ಮುನ್ಸಿಪಾಲಿಟಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೊಸ ಮಾರ್ಗಸೂಚಿಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಇದರಲ್ಲಿ ಜನರು ತಮ್ಮ ಬಾಲ್ಕನಿಯನ್ನು ಅಸಹ್ಯವಾಗಿ ಕಾಣುವಂತಹ ಕೆಲಸವನ್ನು ಮಾಡಬಾರದು. ಹೀಗಾದಲ್ಲಿ ಅವರು ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಪುರಸಭೆಯು ಈ ಬಗ್ಗೆ ಟ್ವೀಟ್ ಮಾಡಿದ್ದು 'ಸಮುದಾಯದಲ್ಲಿ ಪರಿಸರದ ಅಗತ್ಯತೆಗಳು ಮತ್ತು ಮಾನದಂಡಗಳ ಬಗ್ಗೆ ಜಾಗೃತಿ ಮೂಡಿಸಲು ನಗರದ ಸೌಂದರ್ಯ ಮತ್ತು ಸುಸಂಸ್ಕೃತ ಸ್ವಭಾವವನ್ನು ತೊಂದರೆಗೊಳಿಸುವುದನ್ನು ತಡೆಯಲು ದುಬೈ ಪುರಸಭೆಯು ಎಲ್ಲಾ ಯುಎಇ ನಿವಾಸಿಗಳನ್ನು ಒತ್ತಾಯಿಸುತ್ತದ ಎಂದು ಮನವಿ ಮಾಡಿದೆ.
ಈ ಎಲ್ಲಾ ವಿಚಾರ ನಿಷೇಧಿಸಲಾಗಿದೆ
ದುಬೈ ಮುನಿಸಿಪಾಲಿಟಿ ತನ್ನ ಟ್ವೀಟ್‌ನಲ್ಲಿ ಬಾಲ್ಕನಿಯನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದೆ, ಇದಕ್ಕಾಗಿ ಸಂಬಂಧಪಟ್ಟ ವ್ಯಕ್ತಿಗೆ ದಂಡ ವಿಧಿಸಬಹುದು. ಇದು ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಮೇಲೆ ಬಟ್ಟೆಗಳನ್ನು ಒಣಗಿಸುವುದು, ಉಳಿದ ಸಿಗರೇಟ್ ಅಥವಾ ಸಿಗರೇಟ್ ಬೂದಿಯನ್ನು ಬಾಲ್ಕನಿಯಲ್ಲಿ ಬೀಳಿಸುವುದು, ಕಸವನ್ನು ಬಾಲ್ಕನಿಯಲ್ಲಿ ಎಸೆಯುವುದು, ನೀರು ಕೆಳಗೆ ಬೀಳಿಸುವುದು ಅಥವಾ ಬಾಲ್ಕನಿಯನ್ನು ತೊಳೆಯುವಾಗ ಎಸಿ ನೀರಿನ ಅಡಿಯಲ್ಲಿ ತೊಟ್ಟಿಕ್ಕುವುದು, ಪಕ್ಷಿಗಳಿಗೆ ಆಹಾರ ನೀಡುವುದು. ಬಾಲ್ಕನಿಯಲ್ಲಿ ಆಹಾರವಿಡುವುದು ಅಥವಾ ಯಾವುದೇ ರೀತಿಯ ಆಂಟೆನಾವನ್ನು ಸ್ಥಾಪಿಸುವುದು ಎಲ್ಲವೂ ನಿಷೇಧಿತ.
ನಿಯಮ ಉಲ್ಲಂಘಿಸಿದರೆ, ದಂಡ ಪಾವತಿಸಬೇಕು
ನಿಯಮ ಉಲ್ಲಂಘಿಸುವವರಿಗೆ ದಂಡವನ್ನೂ ವಿಧಿಸಲಾಗುವುದು ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಅಪರಾಧಿಗಳು 500 ರಿಂದ 1,500 ದಿರ್ಹಮ್ ವರೆಗೆ ಪಾವತಿಸಬೇಕಾಗಬಹುದು. ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ, ನಿಯಮಗಳನ್ನು ಉಲ್ಲಂಘಿಸುವವರು 10 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. 2018 ರಲ್ಲಿ, ಗಲ್ಫ್ ದೇಶ ಕುವೈತ್ ಕೂಡ ತನ್ನ ನಾಗರಿಕರಿಗೆ ಇದೇ ರೀತಿಯ ನಿಯಮವನ್ನು ಮಾಡಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಅಂತೆಯೇ, ಒಳ ಉಡುಪು ಇತ್ಯಾದಿಗಳನ್ನು ಬಾಲ್ಕನಿಯಲ್ಲಿ ಒಣಗಿಸುವುದು ಪ್ರಚೋದನಕಾರಿ, ಅವಮಾನಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಕೆಲವು ನಿವಾಸಿಗಳು ದೂರಿದ ನಂತರ ದಕ್ಷಿಣ ರಾಜ್ಯ ಬಹ್ರೇನ್ ಅಂತಹ ನಿಷೇಧವನ್ನು ವಿಧಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ