ಪದಗ್ರಹಣ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್‌ ಹತ್ತಾರು ಶಾಕ್: ಡಬ್ಲುಎಚ್‌ಒನಿಂದ ಅಮೆರಿಕ ಔಟ್‌

Published : Jan 22, 2025, 07:34 AM ISTUpdated : Jan 22, 2025, 07:36 AM IST
ಪದಗ್ರಹಣ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್‌ ಹತ್ತಾರು ಶಾಕ್: ಡಬ್ಲುಎಚ್‌ಒನಿಂದ ಅಮೆರಿಕ ಔಟ್‌

ಸಾರಾಂಶ

ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಗಮಿಸುವ ಆದೇಶಕ್ಕೆ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಗೆ ಚೀನಾಗಿಂತ ಅಮೆರಿಕ ಹೆಚ್ಚು ಹಣ ನೀಡುತ್ತಿದೆ.

ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಹೋಗುವ ನಿರ್ಧಾರ ಸೇರಿ ಹತ್ತಾರು ದಾಖಲೆ ಸಂಖ್ಯೆಯ ಹತ್ತಾರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಇವು ಅಮೆರಿಕ ಹಾಗೂ ವಿಶ್ವಾದ್ಯಂತ ಸಂಚಲನ ಮೂಡಿಸಿವೆ. ಅವುಗಳ ಸಾರ ಇಲ್ಲಿದೆ.

ಡಬ್ಲುಎಚ್‌ಒನಿಂದ ಅಮೆರಿಕ ಔಟ್‌: ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಗಮಿಸುವ ಆದೇಶಕ್ಕೆ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಗೆ ಚೀನಾಗಿಂತ ಅಮೆರಿಕ ಹೆಚ್ಚು ಹಣ ನೀಡುತ್ತಿದೆ. ಆದರೂ ಅಮೆರಿಕದ ಬಗ್ಗ ಡಬ್ಲುಎಚ್ಒ ಪಕ್ಷಪಾತ ವಹಿಸಿದೆ ಎಂದು ಕಿಡಿಕಾರಿದ್ದಾರೆ. ಅಮೆರಿಕವು ಕಳೆದ ವರ್ಷ 11 ಸಾವಿರ ಕೋಟಿ ರು.ಗಳನ್ನು ಡಬ್ಲುಎಚ್‌ಒಗೆ ನೀಡಿತ್ತು. ಇದು ಸಂಸ್ಥೆಗೆ ಇಡೀ ವಿಶ್ವದ ದೇಶಗಳು ನೀಡುವ ಹಣದಲ್ಲಿ ಶೇ.17ರಷ್ಟು ಪಾಲಾಗಿದೆ. ಈ ಹಿಂದೆಯೂ ಟ್ರಂಪ್‌ ಆಡಳಿತದ ವೇಳೆ ಕೋವಿಡ್‌ ಹಾವಳಿ ಇದ್ದಾಗ ಡಬ್ಲುಎಚ್‌ಒದಿಂದ ಅಮೆರಿಕ ಹೊರಹೋಗಿತ್ತು. ಆದರೆ ಜೋ ಬೈಡೆನ್‌ ಅಧಿಕಾರಕ್ಕೆ ಬಂದ ನಂತರ ಪುನಃ ಸೇರಿಕೊಂಡಿತ್ತು.

ಷೇರುಪೇಟೆಗೆ ಟ್ರಂಪ್‌ ಹೊಡೆತ: 7 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಸೆನ್ಸೆಕ್ಸ್

ಡಬ್ಲುಎಚ್‌ಒಗೆ ಶಾಕ್: ಆಮೆರಿಕದ ನಿರ್ಧಾರ ತನಗೆ ಆಘಾತ ತಂದಿದೆ ಎಂದಿರುವ ಡಬ್ಲುಎಚ್‌ಒ, ತನ್ನ ನಿರ್ಧಾರವನ್ನು ಅದು ವಾಪಸು ಪಡೆಯುವ ವಿಶ್ವಾಸವಿದೆ ಎಂದಿದೆ.

ಸರ್ಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಂ ಇನ್ನಿಲ್ಲ: ಅಮೆರಿಕದ ಸರ್ಕಾರಿ ನೌಕರರು ಫುಲ್ ಟೈಂ ಕಚೇರಿಯಲ್ಲೇ ಕೆಲಸ ಮಾಡಬೇಕು ಎಂಬ ಆದೇಶಕ್ಕೆ ಟ್ರಂಪ್ ಸಹಿ ಹಾಕಿದರು. ಕೋವಿಡ್ ಸಮಯದಲ್ಲಿ ವರ್ಕ್‌ ಫ್ರಂ ಹೋಂ ಜಾರಿಗೆ ಬಂದಿತ್ತು. ಅದನ್ನು ಟ್ರಂಪ್‌ ರದ್ದು ಮಾಡಿದ್ದಾರೆ.

ಹವಾಮಾನ ಒಪ್ಪಂದದಿಂದ ಹೊರಕ್ಕೆ: ಜೋ ಬೈಡೆನ್‌ ಮಾಡಿಕೊಂಡಿದ್ದ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಟ್ರಂಪ್‌ ಹಿಂತೆಗೆದುಕೊಂಡಿದ್ದಾರೆ. ಅವರು ತಮ್ಮ ಮೊದಲ ಅವಧಿಯಲ್ಲಿ ತೆಗೆದುಕೊಂಡ ಕ್ರಮವನ್ನು ಪುನರಾವರ್ತಿಸಿದ್ದಾರೆ.

ವಲಸಿಗರಿಗೆ, ರಾಜಾಶ್ರಯಕ್ಕೆ ಲಗಾಮು: ಅಮೆರಿಕದಲ್ಲಿ ಅಕ್ರಮ ವಲಸಿಗರು ಹಾಗೂ ರಾಜಾಶ್ರಯದ ಮೇಲೆ ತೀವ್ರವಾದ ಹೊಸ ನಿರ್ಬಂಧಗಳನ್ನು ಟ್ರಂಪ್ ಘೋಷಿಸಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ವಲಸೆ ಹೆಚ್ಚಿರುವ ಕಾರಣ ಅಲ್ಲಿ ಸೇನೆ ಕಳಿಸುವುದಾಗಿ ಹೇಳಿದ್ದಾರೆ ಹಾಗೂ ಅವರು ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ತಮ್ಮ 1500 ಬೆಂಬಲಿಗರಿಗೆ ಕ್ಷಮಾದಾನ:  2020 ರ ಚುನಾವಣೆಯನ್ನು ರದ್ದುಗೊಳಿಸಲು ಆಗ್ರಹಿಸಿ ಯುಎಸ್ ಕ್ಯಾಪಿಟಲ್ ಕಟ್ಟಡದ ಮೇಲೆ ಮೇಲೆ 2021ರ ಜ.6ರಂದು ದಾಳಿ ನಡೆಸಿದ್ದ ತಮ್ಮ 1,500 ಬೆಂಬಲಿಗರಿಗೆ ಟ್ರಂಪ್‌ ಕ್ಷಮಾದಾನ ನೀಡಿದ್ದಾರೆ.

ಅಮೆರಿಕದಲ್ಲಿ ತೃತೀಯ ಲಿಂಗಕ್ಕಿಲ್ಲ ಅವಕಾಶ: ಅಮೆರಿಕದಲ್ಲಿ ತೃತೀಯ ಲಿಂಗಿಗಳು ಹಾಗೂ ಎಲ್‌ಜಿಬಿಟಿ ಸಮುದಾಯವನ್ನು ಉತ್ತೇಜಿಸುವ ಆದೇಶಗಳನ್ನು ಟ್ರಂಪ್ ರದ್ದುಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ‘ಪುರುಷ ಮತ್ತು ಮಹಿಳೆ’ ಈ 2 ಲಿಂಗಗಳನ್ನು ಮಾತ್ರ ಅಮೆರಿಕ ಗುರುತಿಸುತ್ತದೆ ಎಂದು ಅವರು ಹೇಳಿದ್ದಾರೆ.

ಅಮೆರಿಕವನ್ನು ರಫ್ತು ದೇಶ ಮಾಡಲು ಪಣ: ಅಮರಿಕವನ್ನು ಇಂಧನ ವಲಯದ ಪ್ರಮುಝ ರಫ್ತುದಾರ ದೇಶವನ್ನಾಗಿ ಮಾಡುವ ಉದ್ದೇಶದಿಂದ ‘ರಾಷ್ಟ್ರೀಯ ಇಂಧನ ತುರ್ತುಸ್ಥಿತಿ’ ಘೋಷಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.

ಟಿಕ್‌ಟಾಕ್‌ಗೆ 75 ದಿನದ ಜೀವದಾನ: ಚೀನಾ ಆ್ಯಪ್ ಟಿಕ್‌ಟಾಕ್ ಅನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಲು ಟ್ರಂಪ್‌ 75 ದಿನಗಳ ತಡೆ ನೀಡಿದ್ದಾರೆ. ಚೀನಾ ಕಂಪನಿಯಲ್ಲಿ ಶೇ.50ರಷ್ಟು ಅಮೆರಿಕ ಸರ್ಕಾರದ ಪಾಲಿಗೆ ಟ್ರಂಪ್‌ ಪಟ್ಟು ಹಿಡಿದಿದ್ದು, ಈ 75 ದಿನ ಅವಧಿಯಲ್ಲಿ, ಟಿಕ್‌ಟಾಕ್‌ ನಡೆ ವೀಕ್ಷಿಸಿ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ,

'ನಮ್ಮ ತೆರಿಗೆ ನಮ್ಮ ಹಕ್ಕು..' ಎಂದ ಟ್ರಂಪ್‌; ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಸಾಲು ಸಾಲು ವಿವಾದಾತ್ಮಕ ನಿರ್ಧಾರಕ್ಕೆ ಸಹಿ!

ಕಪ್ಪುಪಟ್ಟಿಯಿಂದ ಕ್ಯೂಬಾ ಹೊರಕ್ಕೆ: ಕ್ಯೂಬಾವನ್ನು ಉಗ್ರರ ಪ್ರಯೋಜನರ ಪಟ್ಟಿಗೆ ಸೇರಿಸಿದ್ದ ಜೋ ಬೈಡೆನ್‌ ನಿರ್ಧಾರವನ್ನು ಟ್ರಂಪ್ ರದ್ದುಗೊಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ