
ಬೀಜಿಂಗ್(ಮೇ.18): ಚೀನಾ ಬಿಟ್ಟು ಹೊರಡಲು ಅನುವಾಗುತ್ತಿರುವ ಕಂಪನಿಗಳನ್ನು ಭಾರತ ತನ್ನೆಡೆ ಸೆಳೆದುಕೊಳ್ಳಲು ಯಶಸ್ವಿಯಾಗುತ್ತಿದೆ. ಲಭ್ಯವಾದ ಮಾಹಿತಿ ಅನ್ವಯ ಜರ್ಮನಿಯ ಫೂಟ್‌ವೇರ್ ಬ್ರಾಂಡ್ ವಾನ್ ವೆಲ್ಸ್(Von Wellx) ತನ್ನ ಉತ್ಪಾದನಾ ವಿಭಾಗವನ್ನು ಚೀನಾದಿಂದ ಭಾರತಕ್ಕೆ ಶಿಫ್ಟ್ ಮಾಡಲು ಸಜ್ಜಾಗಿದೆ. ಆಗ್ರಾದಲ್ಲಿ ತನ್ನ ಉತ್ಪಾದನಾ ಯೂನಿಟ್ ಆರಂಭಿಸಿಲು ಸಜ್ಜಾಗಿರುವ ಈ ಕಂಪನಿ ಇದಕ್ಕಾಗಿ ಲ್ಯಾಟ್ರಿಕ್ ಇಂಡಸ್ಟ್ರೀಸ್ ಜೊತೆ ಒಪ್ಪಂದವನ್ನೂ ಮಾಡಿದೆ ಎನ್ನಲಾಗಿದೆ.
ಆರೋಗ್ಯಕರ ಫೂಟ್‌ವೇರ್ ಆಗಿ ಗುರುತಿಸಿಕೊಂಡಿದೆ ಈ ಬ್ರಾಂಡ್: ಹೌದು ವಾನ್ ವೆಲ್ಸ್(Von Wellx) ಫೂಟ್ ವೇರ್ ಬ್ರಾಂಡ್ ಆರೋಗ್ಯಕರವೆಂದು ಗುರುತಿಸಿಕೊಂಡಿದೆ. ಈ ಕಂಪನಿಯ ಉತ್ಪನ್ನಗಳು ಕಾಲು, ಮೊಣಕಾಲು ಹಾಗೂ ಬೆನ್ನು ನೋವು ಶಮನಗೊಳಿಸುತ್ತದೆ. ಅಲ್ಲದೇ ಸ್ನಾಯುಸೆಳೆತವನ್ನೂ ಕಡಿಮೆಗೊಳಿಸುತ್ತದೆ. ವಿಶ್ವಾದ್ಯಂತ ಬರೋಬ್ಬರಿ 80 ರಾಷ್ಟ್ರಗಳಲ್ಲಿ ಈ ಬ್ರಾಂಡ್ ಮಾರಾಟವಾಗುತ್ತದೆ ಹಾಗೂ ಸುಮಾರು 100 ಮಿಲಿಯನ್ ಅಂದರೆ ನೂರು ಕೋಟಿ ಮಂದಿ ಇದನ್ನು ಬಳಸುತ್ತಾರೆ. 2019ರಲ್ಲಿ ಬಿಡುಗಡೆಯಾದ ಈ ಬ್ರಾಂಡ್, ವಿಶ್ವಾದ್ಯಂತ 500 ರಿಟೇಲ್ ಸ್ಟೋರ್‌ಗಳನ್ನು ಹೊಂದಿದೆ. ಅಲ್ಲದೇ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನೂ ಹೊಂದಿದೆ.
ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!
ಲಾವಾ ಕೂಡಾ ಉತ್ಪಾದನೆಯೂ ಭಾರತಕ್ಕೆ!
ಮೊಬೈಲ್ ಉಪಕರಣ ತಯಾರಿಸುವ ದೇಶಿಯ ಕಂಪನಿ ಲಾವಾ ಇಂಟರ್ ನ್ಯಾಷನ್ ಚೀನಾಗೆ ಬಹುದೊಡ್ಡ ಪೆಟ್ಟು ಕೊಟ್ಟಿದೆ. ಲಾವಾ ಕಂಪನಿ ಶುಕ್ರವಾರ ಚೀನಾದಲ್ಲಿ ತನ್ನ ಉದ್ಯಮ ನಿಲ್ಲಿಸಿ ಭಾರತಕ್ಕೆ ಸ್ಥಳಾಂತರಗೊಳ್ಳುವುದಾಗಿ ಹೇಳಿತ್ತು. ಭಾರತದಿಂದ ಚೀನಾಗೆ ಮೊಬೈಲ್ ಸಫ್ಲೈ ಮಾಡುವುದು ನಮ್ಮ ಕನಸು ಎಂದು ಕಂಪನಿಯ ಸಿಎಂಡಿ ಹೇಳಿದ್ದರು. ಅಲ್ಲದೇ ಕಂಪನಿ ಮೊಬೈಲ್ ಫೋನ್ ಅಭಿವೃದ್ಧಿ ಹಾಗೂ ಉತ್ಪಾದನೆ ಹೆಚ್ಚಿಸಲು ಮುಂದಿನ ಐದು ವರ್ಷಗಳಲ್ಲಿ 800 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.
ಭಾರತದತ್ತ ಮುಖ ಮಾಡಿದ Apple, ಟ್ರಂಪ್ ಬೆದರಿಕೆ
ಇದಕ್ಕೂ ಮುನ್ನ iphone ಉತ್ಪಾದನಾ ಕಂಪನಿApple ಕೂಡಾ ಚೀನಾದಲ್ಲಿರುವ ತನ್ನ ಉತ್ಪಾದನಾ ವಿಭಾಗವನ್ನು ಭಾರತಕ್ಕೆ ಸ್ಥಳಾಂತರಿಸುವ ಮಾತುಗಳು ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ಕಂಪನಿಯ ಅಧಿಕಾರಿಗಳು ಭಾರತ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿಯೂ ವರದಿಗಳು ತಿಳಿಸಿದ್ದವು. ಅಲ್ಲದೇ ಮುಂದಿನ ಐದು ವರ್ಷಗಳಲ್ಲಿ ಕಂಪನಿ ತನ್ನ ಸ್ಥಳೀಯ ಉತ್ಪಾದನಾ ವೆಚ್ಚವನ್ನು 40 ಬಿಲಿಯನ್ ಡಾಲರ್‌ಗೇರಿಸುವ ಯೋಚನೆ ಮಾಡಿರುವುದಾಗಿ ಕಂಪನಿ ಅಧಿಕಾರಿಯೊಬ್ಬರು ತಿಳಿಸಿದ್ದರು.
ಭಾರತಕ್ಕೆ ಬರುವ ಅಮೆರಿಕದ ಕಂಪನಿಗಳಿಗೆ ಟ್ರಂಪ್ ಬೆದರಿಕೆ!
ಆದರೆ ಇವೆಲ್ಲದರ ಬೆನಲ್ಲೇ ಆ್ಯಪಲ್ ಕಂಪನಿಗೆ ನೇರ ಎಚ್ಚರಿಕೆ ನೀಡಿದ್ದ ಟ್ರಂಪ್ ‘ಅಮೆರಿಕದ ಕಂಪನಿಗಳು ಹೊರದೇಶಗಳಲ್ಲಿ ತಮ್ಮ ಉತ್ಪಾದನಾ ಘಟಕ ಹೊಂದಿದ್ದರೆ ಅವುಗಳನ್ನು ಮರಳಿ ಅಮೆರಿಕಕ್ಕೆ ಸ್ಥಳಾಂತರಿಸುವುದಕ್ಕೆ ನಾವು ತೆರಿಗೆ ರಿಯಾಯ್ತಿಯೂ ಸೇರಿದಂತೆ ಸಾಕಷ್ಟುಪ್ರೋತ್ಸಾಹ ನೀಡುತ್ತಿದ್ದೇವೆ. ಆದರೆ, ಚೀನಾದಿಂದ ಹೊರಹೋಗಲು ಬಯಸಿರುವ ಆ್ಯಪಲ್ ಕಂಪನಿ ಈಗ ಎಲ್ಲಿಗೆ ಹೊರಟಿದೆ ನೋಡಿದಿರಾ? ಭಾರತಕ್ಕೆ ಹೋಗುತ್ತಾರಂತೆ... ಐರ್‌ಲೆಂಡ್‌ಗೆ ಹೋಗುತ್ತಾರಂತೆ... ಇದು ಸರಿಯಲ್ಲ. ಇನ್ನು ನಾವಿದನ್ನು ಸಹಿಸಿಕೊಳ್ಳುವುದಿಲ್ಲ. ನಾವೂ ಬೇರೆ ದೇಶಗಳಂತೆ ಗೋಡೆ ಕಟ್ಟಿಕೊಳ್ಳುವುದಾದರೆ ಆ್ಯಪಲ್ ಕಂಪನಿ ತನ್ನ ಶೇ.100ರಷ್ಟುಉತ್ಪಾದನೆಯನ್ನು ಅಮೆರಿಕದಲ್ಲೇ ಮಾಡಬೇಕಾಗುತ್ತದೆ. ನಾವು ಸಡಿಲ ಬಿಟ್ಟಿದ್ದೇ ತಪ್ಪಾಯಿತು’ಎಂದು ಬೆದರಿಕೆ ಹಾಕಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ