ಅಮೆರಿಕದ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಟ್ರಂಪ್! ಹನುಮಾನ್ ಚಾಲೀಸಾ ಗಿಫ್ಟ್ ನೀಡಿದ್ದು ಯಾರು?

Published : Nov 07, 2026, 01:18 PM IST
Hanuman Chalisa gift Trump

ಸಾರಾಂಶ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದ ಓವಲ್ ಆಫೀಸ್‌ನಲ್ಲಿ ದೀಪಾವಳಿಯನ್ನು ಆಚರಿಸಿದರು. ಭಾರತೀಯ ಗಣ್ಯರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದ ಈ ಸಮಾರಂಭದಲ್ಲಿ ಅವರಿಗೆ ಹನುಮಾನ್ ಚಾಲೀಸಾ ಉಡುಗೊರೆಯಾಗಿ ನೀಡಲಾಯಿತು. ಇದು ಭಾರತ ಮತ್ತು ಅಮೆರಿಕದ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಹಿಂದೂಗಳ ಪವಿತ್ರ ಹಬ್ಬವಾದ ದೀಪಾವಳಿ ಇಂದು ಜಗತ್ತಿನಾದ್ಯಂತ ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬವನ್ನು ಹಿಂದೂಗಳಷ್ಟೇ ಅಲ್ಲದೆ ಹಿಂದೂಯೇತರರು ಕೂಡ ಅಚರಿಸುತ್ತಾರೆ. ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶ್ವೇತಭವನದ ಓವಲ್ ಆಫೀಸ್‌ನಲ್ಲಿ ಕೂಡ ದೀಪಾವಳಿ ಆಚರಿಸಿ ಅಚ್ಚರಿ ಮೂಡಿಸಿದರು. ಈ ವೇಳೆ ಉದ್ಯಮಿಗಳು, ಪ್ರಮುಖ ಕಂಪನಿಗಳ ಸಿಇಒಗಳು, ಕಾರ್ಯಾಲಯದ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

ದೀಪ ಬೆಳಗಿ ಶುಭಾಶಯ ಹೇಳಿದ ಟ್ರಂಪ್

ಈ ಕಾರ್ಯಕ್ರಮದಲ್ಲಿ ಟ್ರಂಪ್ ದೀಪ ಬೆಳಗುವ ಮೂಲಕ ದೀಪಾವಳಿಯ ಶುಭಾಶಯ ತಿಳಿಸಿದರು. ಈ ವೇಳೆ ಭಾರತ ಅಮೆರಿಕ ರಾಯಭಾರಿ ವಿನಯ್ ಮೋಹನ್ ಕ್ವಾತ್ರ, ಸೆಲೆಬ್ರಿಟ ಬಾಣಸಿಗ ವಿಕಾಸ್ ಖನ್ನಾ, ಎಫ್‌ಬಿಐ ನಿರ್ದೇಶಕ

ಕಾಶ್ ಪಟೇಲ್, ಐಬಿಎಂ ಸಿಇಒ ಅರವಿಂದ್ ಕೃಷ್ಣ ಸೇರಿದಂತೆ ಹಲವಾರು ಪ್ರಮುಖ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಧಲ್ಲಾ ಗ್ರೂಪ್ ಆಫ್ ಕಂಪನಿ(Dhalla Group of Companies)ಗಳ ಅಧ್ಯಕ್ಷೆ ಮತ್ತು ಸಿಇಒ ರೂಬಿ ಧಲ್ಲಾ, ಎನ್‌ಎಸಿ ಸಿಸ್ಟಮ್ಸ್ ಸಂಸ್ಥಾಪಕ ರಾಜೀವ್ ಶರ್ಮಾ, ಕೇಶವಂ ಡಿಸಿ ಅಧ್ಯಕ್ಷ ವಿಶ್ವಜಿತ್ ಮಲ್ಲಂಪತಿ ಮತ್ತು ಅಧ್ಯಕ್ಷರ ಗೌರವಾನ್ವಿತ ಅತಿಥಿ ಹೇತಲ್‌ಕುಮಾರ್ ಪಟೇಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ವೇತಭವನದ ಕಾರ್ಯಕ್ರಮಗಳ ಉಷರ್ ಅರವಿಂದ್ ಚಡ್ಡಾ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಡೊನಾಲ್ಡ್ ಟ್ರಂಪ್‌ಗೆ ಹನುಮಾನ್ ಚಾಲೀಸಾ ಉಡುಗೊರೆ

ದೀಪಾವಳಿ ಆಚರಣೆ ವೇಳೆ ಉದ್ಯಮಿ ಮತ್ತು GOQii ಟೆಕ್ನಾಲಜೀಸ್‌ನ ಸ್ಥಾಪಕ ಮತ್ತು ಸಿಇಒ ವಿಶಾಲ್ ಗೊಂಡಾಲ್ ಅವರು ಅಧ್ಯಕ್ಷ ಟ್ರಂಪ್ ಅವರಿಗೆ ಹನುಮಾನ್ ಚಾಲೀಸಾದ ಪ್ರತಿಯನ್ನು ನೀಡಿದರು. ಅವರು ಆಚರಣೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಧ್ಯಕ್ಷ ಟ್ರಂಪ್ ಅವರೊಂದಿಗೆ ದೀಪಾವಳಿ ಆಚರಿಸಿರುವುದು ಹೆಮ್ಮೆ ಕ್ಷಣವೆಂದು ಬರೆದುಕೊಂಡಿದ್ದಾರೆ. ಕೋಟ್ಯಂತರ ಹಿಂದೂಗಳು ಭಕ್ತಿ, ಸಂಕಷ್ಟಪರಿಹಾರಕ್ಕೆ ಪಠಿಸುವ, ತುಳಸಿದಾಸರು ರಚಿಸಿದ ಹನುಮಾನ್ ಚಾಲೀಸಾದ ಪ್ರತಿಯನ್ನು ಡೊನಾಲ್ಡ್ ಟ್ರಂಪ್‌ಗೆ ಉಡುಗೊರೆಯಾಗಿ ನೀಡಿದ್ದಾಗಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಮೆರಿಕ ಶ್ವೇತಭವನದಲ್ಲಿ ಮೊದಲಿಗೆ ದೀಪಾವಳಿ ಆಚರಿಸಿದ್ದು ಯಾರು?

ಅಮೆರಿಕ ಶ್ವೇತಭವನದ ಓವಲ್ ಕಚೇರಿಯಲ್ಲಿ ದೀಪಗಳನ್ನು ಬೆಳಗಿರುವುದು ಭಾರತ ಮತ್ತು ಅಮೆರಿಕ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಗೊಂಡಂತಾಗಿದೆ ಎಂದು ಬರೆದಿದ್ದಾರೆ. ಈ ಹಿಂದೆ 2003 ರಲ್ಲಿ ಜಾರ್ಜ್ ಬುಷ್ ಶ್ವೇತಭವನದಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದರು. ಮೊದಲಿಗೆ ಶ್ವೇತಭವನದಲ್ಲಿ ದೀಪಾವಳಿ ಆಚರಣೆ ಐಸೆನ್‌ಹೋವರ್ ಕಾರ್ಯನಿರ್ವಹಿಸಿದ ಕಟ್ಟಡದಲ್ಲಿ ಆಚರಿಸಲಾಗಿತ್ತು ಆ ವೇಳೆ ಅಂದಿನ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು, ಭಾರತೀಯ ರಾಜತಾಂತ್ರಿಕರು ಭಾಗವಹಿಸಿದ್ದರು.

2009 ರಲ್ಲಿಯೂ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿ ದೀಪ ಬೆಳಗಿಸಿದ ಮೊದಲ ಅಮೆರಿಕದ ಅಧ್ಯಕ್ಷರಾದರು. ಅಂದಿನಿಂದ, ಓವಲ್ ಕಚೇರಿ ಮತ್ತು ರೂಸ್‌ವೆಲ್ಟ್ ಕೊಠಡಿ ಸೇರಿದಂತೆ ಶ್ವೇತಭವನದ ವಿವಿಧ ಕಚೇರಿಗಳಲ್ಲಿ ಪ್ರತಿ ವರ್ಷ ದೀಪಾವಳಯಂದು ದೀಪ ಬೆಳಗುವ ಸಮಾರಂಭಗಳನ್ನು ನಡೆಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾತ್ರಿ ಹೊತ್ತಲ್ಲೂ ಭಾರತದಲ್ಲಿ ಸೂರ್ಯನ ಬೆಳಕು ಮಾರಾಟ? ಅಮೆರಿಕದ ಹೊಸ ಪ್ರಯೋಗಕ್ಕೆ ಕೈಜೋಡಿಸಿದ ಭಾರತದ ಕಂಪನಿ!
ಸ್ಕೂಬಾ ಡೈವಿಂಗ್‌ ಸ್ಥಳದಲ್ಲಿ ಲಷ್ಕರ್‌ ಉಗ್ರರಿಗೆ ತರಬೇತಿ; ಪ್ರವಾಸಿಗರ ಸೋಗಲ್ಲಿ ಟ್ರೈನಿಂಗ್‌