
ವಾಷಿಂಗ್ಟನ್: ಇರಾನ್ ತಮಗೆ ಅತ್ಯಮೂಲ್ಯವಾದ ಉಡುಗೊರೆಯನ್ನು ಕಳಿಸಿಕೊಟ್ಟಿದೆ ಎಂದು ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ಅದು ತೈಲ ಹೊತ್ತ 10 ಹಡಗುಗಳು ಎಂಬ ಸಂಗತಿಯನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಜೊತೆಗೆ, ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಇದು ಇರಾನ್‌ನಿಂದ ಬಂದ ಸೌಹಾರ್ದಯುತ ಬೆಳವಣಿಗೆ ಎಂದೂ ಹರ್ಷ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಸಂಘರ್ಷದ ಕುರಿತ ಮಾತುಕತೆಗಳ ನಡುವೆ ಸೌಹಾರ್ದತೆಯ ಸೂಚಕವಾಗಿ ಇರಾನ್ ಪಾಕಿಸ್ತಾನಿ ಧ್ವಜ ಹೊತ್ತ 10 ತೈಲ ಹಡಗುಗಳನ್ನು ಹೋರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಿದೆ. ತಾವು ಆಡಿದ ಮಾತಿಗಾಗಿ ಇರಾನ್ ಕ್ಷಮೆ ಯಾಚಿಸಿತು. ನಂತರ ಇನ್ನೂ 2 ಹಡಗುಗಳನ್ನು ಕಳಿಸಿಕೊಡುತ್ತೇವೆ ಎಂದು ತಿಳಿಸಿತು. ಅದರಂತೆ ಒಟ್ಟು 10 ತೈಲ ಹಡಗುಗಳನ್ನು ಕಳಿಸಿತು’ ಎಂದು ತಿಳಿಸಿದ್ದಾರೆ.ಈ ಮಧ್ಯೆ, ಹಡಗಿನ ಮೇಲಿರುವ ಧ್ವಜ ಪಾಕಿಸ್ತಾನಿ ಧ್ವಜದಂತೆ ಕಾಣುತ್ತಿದೆ ಎಂದ ಟ್ರಂಪ್, ಪಾಕ್ ರಾಜತಾಂತ್ರಿಕ ವಿಷಯಗಳಲ್ಲಿ ಮಾತ್ರವಲ್ಲದೆ ಸರಕು ಪೂರೈಕೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸುವ ಯತ್ನ ಮಾಡಿದರು.
ವಾಷಿಂಗ್ಟನ್: ‘ಇರಾನ್‌ನಿಗರು ನನ್ನನ್ನು ತಮ್ಮ ಸರ್ವೋಚ್ಚ ನಾಯಕನನ್ನಾಗಿ ಮಾಡಲು ಬಯಸುತ್ತಾರೆ. ಆದರೆ, ನಾನು ಆ ಸ್ಥಾನವನ್ನು ವಹಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ ಎಂದು ನಿರಾಕರಿಸಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.ಬುಧವಾರ ರಾತ್ರಿ ನಡೆದ ರಿಪಬ್ಲಿಕನ್ ನಿಧಿಸಂಗ್ರಹಣೆ ಸಭೆಯಲ್ಲಿ ಮಾತನಾಡಿದ ಟ್ರಂಪ್, ‘ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಅದರ ಅಯತೋಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಇರಾನಿಗರು ನನ್ನನ್ನು ಮುಂದಿನ ಸರ್ವೋಚ್ಚ ನಾಯಕನಾಗಿ ಎಂದು ಕೇಳಿಕೊಂಡರು. ಆದರೆ, ನಾನು ಅದನ್ನು ತಿರಸ್ಕರಿಸಿದೆ. ಧನ್ಯವಾದಗಳು ಎಂದೆ’ ಎಂದು ಹೇಳಿಕೊಂಡರು.
''''ಇರಾನ್‌ನ ನಾಯಕರಾಗುವುದು ತುಂಬಾ ಕಷ್ಟಕರ ಮತ್ತು ಒತ್ತಡದ ಪಾತ್ರವಾದ್ದರಿಂದ ಯಾರೂ ಅದರ ನಾಯಕರಾಗಲು ಬಯಸುವುದಿಲ್ಲ. ಅದಕ್ಕೇ ನಾನು ‘ಧನ್ಯವಾದಗಳು. ನನಗೆ ಅದು ಬೇಡ ಎಂದೆ'''' ಎಂದರು.ಅಯತೋಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಇರಾನ್ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರನ್ ತನ್ನ ಮುಂದಿನ ಸರ್ವೋಚ್ಚ ನಾಯಕರನ್ನಾಗಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ