ಸಹಾಯಕ್ಕೆ ಕರೆದ ಟ್ರಂಪ್ - ನೆರವಿಗೆ ಬಾರದ ಮಿತ್ರರು

Kannadaprabha News   | Kannada Prabha
Published : Mar 17, 2026, 05:11 AM IST
Donald Trump

ಸಾರಾಂಶ

ಇರಾನ್‌ ಹಿಡಿತದಲ್ಲಿರುವ ಹೋರ್ಮುಜ್‌ ಜಲಸಂಧಿಯಲ್ಲಿ ಹಾದುಹೋಗುವ ವಾಣಿಜ್ಯ ಹಡಗುಗಳ ಭದ್ರತೆಗಾಗಿ ಜಂಟಿ ಪಡೆ ನಿಯೋಜನೆ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪ್ರಸ್ತಾವಕ್ಕೆ ಮಿತ್ರ ದೇಶಗಳಿಂದಲೇ ನೀರಸ ಸ್ಪಂದನೆ ವ್ಯಕ್ತವಾಗಿದೆ.

ವಾಷಿಂಗ್ಟನ್‌: ಇರಾನ್‌ ಹಿಡಿತದಲ್ಲಿರುವ ಹೋರ್ಮುಜ್‌ ಜಲಸಂಧಿಯಲ್ಲಿ ಹಾದುಹೋಗುವ ವಾಣಿಜ್ಯ ಹಡಗುಗಳ ಭದ್ರತೆಗಾಗಿ ಜಂಟಿ ಪಡೆ ನಿಯೋಜನೆ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪ್ರಸ್ತಾವಕ್ಕೆ ಮಿತ್ರ ದೇಶಗಳಿಂದಲೇ ನೀರಸ ಸ್ಪಂದನೆ ವ್ಯಕ್ತವಾಗಿದೆ. ಮಾತ್ರವಲ್ಲ, ಆಸ್ಟ್ರೇಲಿಯಾ ಮತ್ತು ಜಪಾನ್‌ ತಮ್ಮ ನೌಕಾಪಡೆ ನಿಯೋಜನೆ ಸಾಧ್ಯತೆ ತಳ್ಳಿಹಾಕಿವೆ.

ನೆತನ್ಯಾಹು ಜೀವಂತವಾಗಿ ಇರುವ ಬಗ್ಗೆಯೇ ಅನುಮಾನ

ಅತ್ತ ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಜೀವಂತವಾಗಿ ಇರುವ ಬಗ್ಗೆಯೇ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಯುದ್ಧದಲ್ಲಿ ಟ್ರಂಪ್‌ ಇದೀಗ ಏಕಾಂಗಿಯಾಗಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬಂದಿದೆ. ಅದರ ಬೆನ್ನಲ್ಲೇ ನೆರವಿಗೆ ಬರಲು ನಿರಾಕರಿಸಿದ ದೇಶಗಳನ್ನು ನಾವು ನೆನಪಿಟ್ಟುಕೊಳ್ಳುತ್ತೇವೆ ಎಂದು ಟ್ರಂಪ್‌ ಬೆದರಿಕೆ ಕೂಡಾ ಹಾಕಿದ್ದಾರೆ.

ಈ ಹಿಂದೆಯೂ ಅಮೆರಿಕದ ಬೇಡಿಕೆಯನ್ನು ಪಾಶ್ಚಿಮಾತ್ಯ ದೇಶಗಳು ತಳ್ಳಿಹಾಕಿದ್ದವು

ಹೋರ್ಮುಜ್‌ ಜಲಸಂಧಿ ರಕ್ಷಣೆ ವಿಚಾರದಲ್ಲಿ ಈ ಹಿಂದೆಯೂ ಅಮೆರಿಕದ ಬೇಡಿಕೆಯನ್ನು ಪಾಶ್ಚಿಮಾತ್ಯ ದೇಶಗಳು ತಳ್ಳಿಹಾಕಿದ್ದವು. ಅದರ ಹೊರತಾಗಿಯೂ ತಾನು ಏಕಾಂಗಿಯಾಗಿ ಈ ಪ್ರದೇಶ ರಕ್ಷಿಸುವುದಾಗಿ ಟ್ರಂಪ್‌ ಇತ್ತೀಚೆಗೆ ಹೇಳಿದ್ದರು. ಅದರೆ ಆ ಪ್ರದೇಶದಲ್ಲಿ ನಿಗಾ ಕಷ್ಟವಾದ ಬೆನ್ನಲ್ಲೇ, ಇದೀಗ ಜಲಸಂಧಿ ಮೂಲಕ ಅತಿ ಹೆಚ್ಚು ತೈಲ ಖರೀದಿಸುವ ಚೀನಾ, ಜಪಾನ್‌, ದಕ್ಷಿಣ ಕೊರಿಯಾ ಮತ್ತು ಹಲವು ನ್ಯಾಟೋ ದೇಶಗಳಿಗೆ ಯುದ್ಧ ನೌಕೆ ನಿಯೋಜಿಸುವಂತೆ ಟ್ರಂಪ್‌ ಕರೆ ನೀಡಿದ್ದಾರೆ. ಆದರೆ ಇದಕ್ಕೆ ಯಾವ ದೇಶಗಳೂ ಸ್ಪಂದಿಸಿಲ್ಲ.

ಹೀಗಾಗಿ ಅಮೆರಿಕ ಏಕಾಂಗಿಯಾಗಬೇಕಾದ ಪರಿಸ್ಥಿತಿ ಎದುರಾಗಿದೆ.ಈ ಬಗ್ಗೆ ಸೋಮವಾರ ರಾತ್ರಿ ಮತ್ತೆ ಕಿಡಿಕಾರಿರುವ ಟ್ರಂಪ್‌, ನಾವು 40 ವರ್ಷಗಳ ಕಾಲ ಹಲವು ದೇಶಗಳಿಗೆ ರಕ್ಷಣೆ ನೀಡಿದ್ದೇವೆ. ಆದರೆ ಇದೀಗ ಹೋರ್ಮಜ್‌ ಜಲಸಂಧಿ ರಕ್ಷಣೆಗೆ ಯಾರೂ ಮುಂದೆ ಬರುತ್ತಿಲ್ಲ. ನಾವು ಈಗಾಗಲೇ ಇರಾನ್‌ನ 7000ಕ್ಕಿಂತ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿದ್ದೇವೆ. ಅವರ ವಾಯುಪಡೆ, ನೌಕಾಪಡೆ ಪೂರ್ಣ ಧ್ವಂಸ ಮಾಡಿದ್ದೇವೆ. ಅವರ ಪ್ರಮುಖ ನಾಯಕರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ್ದೇವೆ ಎಂದು ಗುಡುಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

RSS ಸಂಘಟನೆಗೆ ನಿರ್ಬಂಧ ಹೇರಿ, ಆಸ್ತಿ ಜಪ್ತಿ ಮಾಡಿ: ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು
16ನೇ ದಿನವೂ ಕೊಲ್ಲಿ ಯುದ್ಧ ಬಿರುಸು - ಏರ್ಪೋರ್ಟ್‌, ತೈಲ ಕೇಂದ್ರ, ಸೇನಾ ನೆಲೆಗಳೇ ಟಾರ್ಗೆಟ್‌