ಇಲ್ಲೊಬ್ಬರು ಶ್ವಾನಕ್ಕೆ ವಿಶೇಷ ತರಬೇತಿ ನೀಡುತ್ತಿದ್ದಾರೆ. ಹಸ್ಕಿ ತಳಿಯ ಶ್ವಾನವೊಂದಕ್ಕೆ ಅದರ ಮಾಲಕಿ ಸಿಪಿಆರ್ ತರಬೇತಿ ನೀಡುತ್ತಿದ್ದು ಅದರ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗೆ ಶ್ವಾನಗಳನ್ನು ಸಾಕುವುದು ದೊಡ್ಡ ಟ್ರೆಂಡ್ ಆಗಿದೆ. ನಗರಗಳಲ್ಲಿರುವ ಯುವ ಸಮುದಾಯ ನಾಯಿಯ ಒಡನಾಟಕ್ಕೆ ಫಿದಾ ಆಗುತ್ತಿದ್ದು, ಹಲವು ಉತ್ತಮ ತಳಿಯ ಶ್ವಾನಗಳನ್ನು ಮನೆ ಮಕ್ಕಳಂತೆ ಸಾಕುತ್ತಿದ್ದಾರೆ. ಶ್ವಾನಗಳು ಆಟವಾಡುವ, ಮುದ್ದಾಡುವ ಹೇಳಿದ ಕೆಲಸ ಮಾಡುವ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೀವು ನೋಡಿರುತ್ತೀರಿ. ಶ್ವಾನಗಳಿಗೆ ಕೆಲಸ ಮಾಡಲು, ಆಟವಾಡಲು ಕಲಿಸುವುದು ಒಂದು ಕಲೆ. ಇತ್ತೀಚೆಗೆ ಭಾರತದಲ್ಲೂ ಪ್ರಮುಖ ನಗರಗಳಲ್ಲಿ ಶ್ವಾನಗಳದ್ದೇ ವಿಶೇಷ ತರಬೇತಿ ಕೇಂದ್ರಗಳಿವೆ. ಮರಿಗಳಿರುವಾಗಲೇ ಒಮ್ಮೆ ಶ್ವಾನಗಳಿಗೆ ತರಬೇತಿ ನೀಡಿದಲ್ಲಿ ಸಾಯುವವರೆಗೆ ಮರೆಯುವುದಿಲ್ಲ.
ಹಾಗೆಯೇ ಇಲ್ಲೊಬ್ಬರು ಶ್ವಾನಕ್ಕೆ ವಿಶೇಷ ತರಬೇತಿ ನೀಡುತ್ತಿದ್ದಾರೆ. ಹಸ್ಕಿ ತಳಿಯ ಶ್ವಾನವೊಂದಕ್ಕೆ ಅದರ ಮಾಲಕಿ ಸಿಪಿಆರ್ ತರಬೇತಿ ನೀಡುತ್ತಿದ್ದು ಅದರ ವಿಡಿಯೋ ವೈರಲ್ ಆಗಿದೆ. ಸಿಪಿಆರ್ ಆಪತ್ಕಾಲದಲ್ಲಿ ಜೀವರಕ್ಷಕವಾಗಿ ಕಾರ್ಯ ನಿರ್ವಹಿಸುತ್ತದೆ. ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಇತ್ತೀಚೆಗೆ ಕೆಲ ಯುವಕರು ಯುವತಿಯರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೀಗಾಗಿ ಸಿಪಿಆರ್ ಬಗ್ಗೆ ಇತ್ತೀಚೆಗೆ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ಸಿಪಿಆರ್ ಎಂದರೆ ಹೃದಯಕ್ಕೆ ರಕ್ತ ಪರಿಚಲನೆ ಹೆಚ್ಚಾಗಲು ಹೃದಯದ ಮೇಲೆ ಕೈಯಿಂದ ಜೋರಾಗಿ ಒತ್ತುವುದಾಗಿದೆ. ಈ ರೀತಿ ಮಾಡುವುದರಿಂದ ಅಚಾನಕ್ ಆಗಿ ಸ್ಥಗಿತಗೊಂಡ ರಕ್ತನಾಳಗಳು ಯಥಾಸ್ಥಿತಿಗೆ ಬಂದು ಕಾರ್ಯನಿರ್ವಹಿಸುವವು. ಈ ಕಾರಣಕ್ಕೆ ಇಲ್ಲೊಬ್ಬರು ಮಹಿಳೆ ಶ್ವಾನಕ್ಕೆ ಉತ್ತಮವಾಗಿ ಸಿಪಿಆರ್ ತರಬೇತಿ ನೀಡುತ್ತಿದ್ದಾರೆ. ಶ್ವಾನವೂ ಕೂಡ ತನ್ನ ಮಾಲಕಿ ಹೇಳಿದಂತೆ ಸಿಪಿಆರ್ ತರಬೇತಿ ಪಡೆಯುವುದನ್ನು ಕಾಣಬಹುದು.
ಯುದ್ಧಭೂಮಿಯಲ್ಲಿನ್ನು ರೋಬೋಟ್ ನಾಯಿ, ರಷ್ಯಾದ ಸಂಶೋಧಕನ ವಿಡಿಯೋ ವೈರಲ್!
ಮೊದಲಿಗೆ ಶ್ವಾನ ಸಿಪಿಆರ್ ಮಾಡು ಎಂದರೆ ಜೋರಾಗಿ ತನ್ನ ಎರಡು ಮುಂಭಾಗದ ಕಾಲುಗಳಲ್ಲಿ ಕೆದಕಲು ಶುರು ಮಾಡುತ್ತದೆ. ಆದರೆ ಮಾಲಕಿ ಈ ರೀತಿ ಅಲ್ಲ. ಎರಡು ಕೈಗಳ ಮೇಲೆ ಭಾರ ಹಾಕಿ ಒತ್ತಬೇಕು ಎಂದು ಹೇಳುತ್ತಾಳೆ. ಶ್ವಾನವೂ ಕೂಡ ಅದೇ ರೀತಿ ಮಾಡಲು ಹೋಗುತ್ತದೆ. ಆದರೆ ಕೈಗಳಲ್ಲಿ ಸೆರೆಯಲು ಮಾಡುತ್ತದೆ. ಆಗ ಶ್ವಾನದ ಮಾಲಕಿ ನೋ ಇದು ನೀನು ಕೆರೆಯುತ್ತಿದ್ದೀಯಾ ಅದಲ್ಲ ಕೈಗಳಿಂದ ಜೋರಾಗಿ ಒತ್ತಬೇಕು ಎಂದು ಇಂಗ್ಲೀಷ್‌ನಲ್ಲಿ ಹೇಳುತ್ತದೆ. ಮಾಲೀಕಳ ಭಾಷೆಯನ್ನು ಸೊಗಸಾಗಿ ಅರ್ಥ ಮಾಡಿಕೊಳ್ಳುವ ಶ್ವಾನ ಕೊನೆಗೂ ಸಿಪಿಆರ್ ಮಾಡುವುದನ್ನು ಕಲಿಯುವಲ್ಲಿ ಯಶಸ್ವಿಯಾಗುತ್ತದೆ. ಶ್ವಾನ ಫೆಂಡಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜಿಮ್ ಹೊರಗೆ ಕಾಯುತ್ತಿದ್ದ ವಿಶೇಷ ಅತಿಥಿಯನ್ನು ಮುದ್ದಿಸಿದ ಜೆನಿಲಿಯಾ; ಕ್ಯೂಟ್ ವಿಡಿಯೋ ವೈರಲ್
ರಾಕಿ ಕನಕ ಎಂಬ ಫೇಸ್‌ಬುಕ್ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ಇವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಶ್ವಾನಗಳ ಸಾಕಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು ಐದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ಈ ಶ್ವಾನ ಬುದ್ಧಿವಂತ ಆಕೆ ಹೇಳಿಕೊಟ್ಟಂತೆ ಶ್ವಾನ ಮಾಡುವುದನ್ನು ನಂಬಲಾಗುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಎಷ್ಟು ವೇಗವಾಗಿ ಫೆಂಡಿ ಆದೇಶಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.